
ಸಿಪಿಎಲ್ 8ನೇ ಆವೃತ್ತಿಯಲ್ಲಿ ಇಂದು ಭಾರತೀಯ ಕಾಲಮಾನ 7:30 ಬಾರ್ಬಡೋಸ್ ಟ್ರಿಡೆಂಟ್ಸ್ ಹಾಗೂ ಸೇಂಟ್ ಲೂಸಿಯಾ ಝೌಕ್ಸ್ ತಂಡಗಳು ಪರಸ್ಪರ ಮುಖಾಮುಖಿಗುತ್ತಿದೆ. ಈ ಟೂರ್ನಿಯ 19ನೇ ಪಂದ್ಯ ಇದಾಗಿದ್ದು ಅಭಿಮಾನಿಗಳು ಯಾವ ತಂಡ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಹಾಕುತ್ತಿದ್ದಾರೆ.
ಈ ಎರಡು ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿದ್ದು ಮೊದಲ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ತಂಡ ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಅಂದು ಮಳೆಯಿಂದಾಗಿ ಸೇಂಟ್ ಲೂಸಿಯಾ ತಂಡಕ್ಕೆ ಐದು ಓವರ್‌ಗಳಿಗೆ ಇನ್ನಿಂಗ್ಸ್ ಇಳಿಕೆ ಮಾಡಲಾಗಿತ್ತು.
ಆರು ಪಂದ್ಯಗಳನ್ನು ಆಡಿರುವ ಸೇಂಟ್ ಲೂಸಿಯಾ ಝೌಕ್ಸ್ 4 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಲಿ ಚಾಂಪಿಯನ್ ಬಾರ್ಬಡೋಸ್ ಟ್ರಿಡೆಂಟ್ಸ್ ಈ ಬಾರಿ ನಿರೀಕ್ಷಿತ ಪ್ರದರ್ಶನ ಈವರೆಗಿನ ಪಂದ್ಯಗಳಲ್ಲಿ ನೀಡುವಲ್ಲಿ ವಿಫಲವಾಗಿದೆ. 6 ಪಂದ್ಯಗಳನ್ನಾಡಿರುವ ಬಾರ್ಬಡೋಸ್ 4 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಕೇವಲ 2 ಪಂದ್ಯಗಳಲ್ಲಿ ಮಾತ್ರವೇ ಗೆಲುವಿನ ರುಚಿ ಕಂಡು ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಸಂಭಾವ್ಯ ತಂಡಗಳು ಹೀಗಿದೆ:
ಬಾರ್ಬಡೋಸ್ ಟ್ರೈಡೆಂಟ್ಸ್: ಜಾನ್ಸನ್ ಚಾರ್ಲ್ಸ್, ಶೈ ಹೋಪ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಕೋರೆ ಆಂಡರ್ಸನ್, ಜೇಸನ್ ಹೋಲ್ಡರ್ (ನಾಯಕ), ಆಶ್ಲೇ ನರ್ಸ್, ರಶೀದ್ ಖಾನ್, ರೇಮನ್ ರೀಫರ್, ನೀಮ್ ಯಂಗ್, ಮಿಚೆಲ್ ಸ್ಯಾಂಟ್ನರ್, ಹೇಡನ್ ವಾಲ್ಷ್
ಸೇಂಟ್ ಲೂಸಿಯಾ ಜೌಕ್ಸ್: ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್), ರಹಕೀಮ್ ಕಾರ್ನ್‌ವಾಲ್, ಮಾರ್ಕ್ ಡಯಾಲ್, ರೋಸ್ಟನ್ ಚೇಸ್, ನಜೀಬುಲ್ಲಾ ಖಾದ್ರಾನ್, ಮೊಹಮ್ಮದ್ ನಬಿ, ಡೇರೆನ್ ಸ್ಯಾಮಿ (ನಾಯಕ), ಜಾವೆಲ್ಲೆ ಗ್ಲೆನ್, ಸ್ಕಾಟ್ ಕುಗ್ಗೆಲೀಜ್ನ್, ಕೆಸ್ರಿಕ್ ವಿಲಿಯಮ್ಸ್, ಜಹೀರ್ ಖಾನ್