Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಪಿಎಲ್ ಮೊದಲ ಸೆಮಿಫೈನಲ್: ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ vs ಜಮೈಕಾ ತಲ್ಲವಾಸ್

Cpl 2020: 1st Semi-final, Trinbago Knight Riders Vs Jamaica Tallawahs

22 ದಿನಗಳ ರೋಚಕ ಲೀಗ್ ಹಂತದ ಹಣಾಗಣಿಯ ನಂತರ ಸಿಪಿಎಲ್ ಸೆಮಿಫೈನಲ್ ಹಂತಕ್ಕೆ ಸಜ್ಜಾಗಿದೆ. ಮಂಗಳವಾರ ಸಿಪಿಎಲ್‌ನ ಸೆಮಿಪೈನಲ್ ಪಂದ್ಯಗಳು ನಡೆಯಲಿದ್ದು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಹಾಗೂ ಜಮೈಕಾ ತಲ್ಲವಾಸ್ ತಂಡಗಳು ಮುಖಾಮುಖಿಯಾಗುತ್ತಿದೆ.

ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಈ ಬಾರಿ ಅಮೋಘ ಪ್ರದರ್ಶನವನ್ನು ನೀಡಿ ಎಲ್ಲಾ ತಂಡಗಳಿಗಿಂತಲೂ ವಿಶೇಷವೆನಿಸಿಕೊಂಡಿದೆ. ಲೀಗ್ ಹಂತದ ಯಾವೊಂದು ಪಂದ್ಯವನ್ನು ಕೂಡ ಸೋಲದೆ ಅಜೆಯವಾಗಿ ಸೆಮಿಫೈನಲ್‌ಗೆ ಪ್ರವೇಶವನ್ನು ಪಡೆದುಕೊಂಡಿದೆ. ಈ ಹಂತದಲ್ಲಿ ನೈಟ್ ರೈಡರ್ಸ್‌ಗೆ ಜಮೈಕಾ ತಲ್ಲವಾಸ್ ತಂಡ ಎದುರಾಳಿಯಾಗಿದೆ.

ಜಮೈಕಾ ತಲ್ಲವಾಸ್ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದು ಸೆಮಿ ಫೈನಲ್‌ಗೆ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ನೈಟ್ ರೈಡರ್ಸ್ ಹಾಗೂ ತಲ್ಲವಾಸ್ ನಡುವೆ 13 ಅಂಕಗಳ ವ್ಯತ್ಯಾಸವಿದ್ದರೂ ಅಚ್ಚರಿಯ ರೀತಿಯಲ್ಲಿ ಸೆಮಿಫೈನಲ್‌ಗೆ ತಲ್ಲವಾಸ್ ಟಿಕೆಟ್ ಪಡೆದುಕೊಂಡಿದೆ. ಲೀಗ್ ಹಂತದಲ್ಲಿ ಈ ಎರಡು ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು ಮೊದಲ ಬಾರಿಗೆ 7 ವಿಕೆಟ್‌ಗಳಿಂದ ಹಾಗೂ ಎರಡನೇ ಬಾರಿಗೆ 19 ರನ್‌ಗಳಿಂದ ನೈಟ್ ರೈಡರ್ಸ್ ಗೆದ್ದು ಬೀಗಿತ್ತು.

ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಸಂಭಾವ್ಯ ತಂಡ: ಸುನಿಲ್ ನರೈನ್, ಲೆಂಡ್ಲ್ ಸಿಮ್ಮನ್ಸ್, ಕಾಲಿನ್ ಮನ್ರೊ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಡ್ಯಾರೆನ್ ಬ್ರಾವೋ, ಕೀರನ್ ಪೊಲಾರ್ಡ್ (ನಾಯಕ), ಸಿಕಂದರ್ ರಾಜಾ, ಡ್ವೇನ್ ಬ್ರಾವೋ, ಅಲಿ ಖಾನ್, ಫವಾದ್ ಅಹ್ಮದ್, ಜೇಡೆನ್ ಸೀಲ್ಸ್

ಜಮೈಕಾ ತಲ್ಲವಾಸ್ ಸಂಭಾವ್ಯ ತಂಡ: ಗ್ಲೆನ್ ಫಿಲಿಪ್ಸ್ (ವಿಕೆಟ್ ಕೀಪರ್), ಜೆರ್ಮೈನ್ ಬ್ಲ್ಯಾಕ್‌ವುಡ್, ಎನ್‌ಕ್ರುಮಾ ಬೊನ್ನರ್, ರೋವ್ಮನ್ ಪೊವೆಲ್ (ನಾಯಕ), ಆಂಡ್ರೆ ರಸ್ಸೆಲ್, ಆಸಿಫ್ ಅಲಿ, ಕಾರ್ಲೋಸ್ ಬ್ರಾಥ್‌ವೈಟ್, ಸಂದೀಪ್ ಲಮಿಚಾನೆ, ಮುಜೀಬ್ ಉರ್ ರಹಮಾನ್, ಫಿಡೆಲ್ ಎಡ್ವರ್ಡ್ಸ್, ವೀರಸಮ್ಮಿ ಪರ್ಮಾಲ್

Story first published: Tuesday, September 8, 2020, 20:33 [IST]
Other articles published on Sep 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+