ಸಿಪಿಎಲ್ 2020: ಕೆರಿಬಿಯನ್ ಲೀಗ್‌ನಲ್ಲಿ ಮಿಂಚು ಹರಿಸಬಹುದಾದ 4 ವಿದೇಶಿ ಆಟಗಾರರು

2013ರಲ್ಲಿ ಆರಂಭವಾದ ಕೆರಿಬಿಯನ್ ಪ್ರೀಮಿಯರ್ ಲೀಗ್ ಹಂತ ಹಂತವಾಗಿ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ಈಗ ಪ್ರಮುಖ ಕ್ರಿಕೆಟ್ ಟೂರ್ನಿಯಗಳಲ್ಲಿ ಒಂದೆನಿಸಿದ್ದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳನ್ನು ಟಿವಿ ಮೂಲಕ ತಲುಪುವಲ್ಲಿ ಯಶಸ್ವಿಯಾಗುತ್ತಿದೆ. ಖ್ಯಾತ ವಿದೇಶಿ ಆಟಗಾರರು ಕೂಡ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ಲೀಗ್‌ನ ಖ್ಯಾತಿಯನ್ನು ಹೆಚ್ಚಿಸಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಭಾರತೀಯ ಕ್ರಿಕೆಟರ್ ಪ್ರವೀಣ್ ತಾಂಬೆ ಸೇರಿದಂತೆ ಸಾಕಷ್ಟು ಮಂದಿ ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಅವರ ಆಟದ ಮೇಲೆ ಸಾಕಷ್ಟು ನಿರೀಕ್ಷೆಗಳು ಆಯಾ ತಂಡಗಳ ಅಭಿಮಾನಿಗಳಿಗೆ ಇದೆ.
ಈ ಬಾರಿಯ ಸಿಪಿಎಲ್‌ನಲ್ಲಿ ಮಿಂಚು ಹರಿಸುವ ಸಾಧ್ಯತೆಯಿರುವ ನಾಲ್ವರು ವಿದೇಶಿ ಆಟಗಾರರು ಯಾರು ಎಂಬುದನ್ನು ಈ ವರದಿಯಲ್ಲಿ ನೋಡೋಣ..

ರಶೀದ್ ಖಾನ್
ಅಪ್ಘಾನಿಸ್ತಾನ ತಂಡದ ಯುವ ಕ್ರಿಕೆಟಿಗ ರಶೀದ್ ಖಾನ್ ರಾಷ್ಟ್ರೀಯ ತಂಡದ ಪರವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಮಿಂಚಿದ್ದಾರೆ. ಲೆಗ್ ಸ್ಪಿನ್ ಮೂಲಕ ತಂಡಕ್ಕೆ ಉಪಯುಕ್ತ ಕೊಡುಗೆ ನೀಡುವ ತಾಕತ್ತಿರುವ ಆಟಗಾರ ರಶೀದ್ ಖಾನ್ ಬ್ಯಾಟಿಂಗ್‌ನಲ್ಲೂ ಅಬ್ಬರಿಸಬಲ್ಲರು. ತಂಡದ ಅಗತ್ಯಕ್ಕೆ ತಕ್ಕನಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಬಲ್ಲ ಆಟಗಾರ. ಬಾರ್ಬಡೋಸ್ ಟ್ರಿಡೆಂಟ್ಸ್ ಪರವಾಗಿ ಈ ಬಾರಿಯ ಸಿಪಿಎಲ್ ಟೂರ್ನಿಯಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಇಮ್ರಾನ್ ತಾಹಿರ್
ಈ ಬಾರಿಯ ಸಿಪಿಎಲ್‌ನಲ್ಲಿ ಪಾಲ್ಗೊಳ್ಳಲಿರುವ ಏಕೈಕ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಇಮ್ರಾನ್ ತಾಹಿರ್. 40ರ ಹರೆಯವನ್ನು ದಾಟಿರುವ ತಾಹಿರ್ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಭೀತು ಪಡಿಸಿರುವ ಬೌಲರ್. ತನ್ನ ತೀಕ್ಷ್ಣ ಸ್ಪಿನ್ ಬೌಲಿಂಗ್ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಲ್ಲವರಾಗಿದ್ದಾರೆ. ಈ ಬಾರಿಯ ಸಿಪಿಎಲ್‌ನಲ್ಲಿ ತಾಹಿರ್ ಕೂಡ ಅತ್ಯುತ್ತಮ ಪ್ರದರ್ಶನ ನೀಡಬಲ್ಲ ವಿದೇಶಿ ಆಟಗಾರನಾಗಿದ್ದಾರೆ. ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಪರವಾಗಿ ಇಮ್ರಾನ್ ತಾಹಿರ್ ಕಣಕ್ಕಿಳಿಯಲಿದ್ದಾರೆ.

ರಾಸ್ ಟೇಲರ್
ನ್ಯೂಜಿಲೆಂಡ್‌ನ ಅನುಭವ ಆಟಗಾರ ರಾಸ್ ಟೇಲರ್ ಕೂಡ ಈ ಬಾರಿಯ ಸಿಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸ್ಟಾರ್ ಆಟಗಾರನಾಗಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಸೈ ಎನಿಸಿರುವ ರಾಸ್ ಟೇಲರ್ ಈ ಬಾರಿಯ ಸಿಪಿಎಲ್‌ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರವಾಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಅಭಿಮಾನಿಗಳು ಟೇಲರ್ ಪ್ರದರ್ಶನದ ಮೇಲೂ ಕಣ್ಣಿಟ್ಟಿದ್ದಾರೆ.

ಕಾಲಿನ್ ಮನ್ರೋ
ನ್ಯೂಜಿಲೆಂಡ್ ಕ್ರಿಕೆಟ್‌ನ ಮತ್ತೋರ್ವ ಆಟಗಾರ ಕಾಲಿನ್ ಮನ್ರೋ ಕೂಡ ಕೆರಿಬಿಯನ್ ನಾಡಿನ ಲೀಗ್ ಟೂರ್ನಿಯಲ್ಲಿ ಮಿಂಚು ಹರಿಸುವ ಉತ್ಸಾಹದಲ್ಲಿದ್ದಾರೆ. ಸ್ಪೋಟಕ ಆಟಕ್ಕೆ ಖ್ಯಾತರಾದ ಮನ್ರೋ ಸಿಪಿಎಲ್‌ನಲ್ಲೂ ತನ್ನ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಆವೃತ್ತಿಯಲ್ಲಿ ಮಿಂಚು ಸ್ಟಾರ್ ಆಟಗಾರನಾಗಿ ಮಿಂಚಲು ಸಿದ್ಧರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications