ಸಿಪಿಎಲ್ 2020: ಕೆರಿಬಿಯನ್ ನಾಡಲ್ಲಿ ಕ್ರಿಕೆಟ್ ಹಬ್ಬ ಆರಂಭಕ್ಕೆ ಇನ್ನೆರಡೇ ದಿನ ಬಾಕಿ

ಕೆರಿಬಿಯನ್ ನಾಡಿನಲ್ಲಿ ಕ್ರಿಕೆಟ್ ಜಾತ್ರೆಗೆ ಇನ್ನು ಕೇವಲ ಎರಡು ದಿನ ಮಾತ್ರವೇ ಬಾಕಿಯಿದೆ. ಕೊರೊನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಕ್ರಿಕೆಟ್ ಸ್ಥಬ್ಧವಾದನಂತರ ಕ್ರಕೆಟ್ಗೆ ಮರು ಚಾಲನೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನಚ್ಚರಿಕೆಯೊಂದಿಗೆ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.
ಪ್ರತಿ ತಂಡಕ್ಕೂ ಬಯೋ ಸೆಕ್ಯೂರ್ ಬಬಲ್ ನಿರ್ಮಿಸಿ ಆ ಮೂಲಕ ಸಾಕಷ್ಟು ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ. ಟೂರ್ನಿಯಲ್ಲಿ ಆರು ತಂಡಗಳು ಭಾಗವಹಿಸಲಿದ್ದು ಎಲ್ಲಾ ಆಟಗಾರರು ಕೂಡಾ ಈಗಾಗಲೇ ಡ್ರೆನಿಡಾಡ್&ಟೊಬ್ಯಾಗೋ ಸೇರಿಕೊಂಡಿದ್ದಾರೆ. ತಮ್ಮ ತಂಡಗಳ ಜೊತೆಗೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಈ ಬಾರಿಯ ಸಿಪಿಎಲ್ ಟೂರ್ನಿ ಕೇವಲ ಎರಡು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಯಲಿದೆ. ಒಟ್ಟು 33 ಪಂದ್ಯಗಳಲ್ಲಿ 23 ಪಂದ್ಯಗಳು ತರೊಬಾದಲ್ಲಿರುವ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿದೆ. ಇದರಲ್ಲಿ ಸೆಮಿ ಪೈನಲ್ ಮತ್ತು ಫೈನಲ್ ಕೂಡ ಸೇರಿದೆ. ಇನ್ನುಳಿದ 10 ಪಂದ್ಯಗಳು ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಆಯೋಜನೆಯಾಗಲಿದೆ.
2013ರಲ್ಲಿ ಆರಂಭವಾದ ಕೆರಿಬಿಯನ್ ಪ್ರೀಮಿಯರ್ ಲೀಗ್ ಹಂತ ಹಂತವಾಗಿ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ಈಗ ಪ್ರಮುಖ ಕ್ರಿಕೆಟ್ ಟೂರ್ನಿಯಗಳಲ್ಲಿ ಒಂದೆನಿಸಿದ್ದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳನ್ನು ಟಿವಿ ಮೂಲಕ ತಲುಪುವಲ್ಲಿ ಯಶಸ್ವಿಯಾಗುತ್ತಿದೆ. ಖ್ಯಾತ ವಿದೇಶಿ ಆಟಗಾರರು ಕೂಡ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ಲೀಗ್‌ನ ಖ್ಯಾತಿಯನ್ನು ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications