Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಪಿಎಲ್ 2020: ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ನೂತನ ಚಾಂಪಿಯನ್

CPL 2020 Final, Live Score: Trinbago Knight Riders Vs St Luica Zouks

ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಪೈನಲ್ ಪಂದ್ಯದಲ್ಲಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಮೂಲಕ 8ನೇ ಆವೃತ್ತಿಯ ಸಿಪಿಎಲ್ ಟೂರ್ನಿಯ ಚಾಂಪಿಯನ್ ಆಗಿ ಮೆರೆಯುವಲ್ಲಿ ಯಶಸ್ವಿಯಾಗಿದೆ. ಅಂತಿಮ ಪಂದ್ಯದಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ನೈಟ್ ರೈಡರ್ಸ್ ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿದೆ.

ಎಲ್ಲಾ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡಿ ಗೆದ್ದು ಬೀಗಿರುವ ನೈಟ್ ರೈಡರ್ಸ್ ತಂಡ ಫೈನಲ್ ಪಂದ್ಯದಲ್ಲೂ ಸೇಂಟ್ ಲೂಸಿಯಾ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸಿಪಿಎಲ್ ಇತಿಹಾಸದಲ್ಲಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

ಪಂದ್ಯದ ಸಂಪೂರ್ಣ ಸ್ಕೋರ್ ಪಟ್ಟಿ ಹೀಗಿದೆ:

1
9936-nonopta-8307

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸೇಂಟ್ ಲೂಸಿಯಾ ಝೌಕ್ಸ್ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು. ಸೇಂಟ್ ಲೂಸಿಯಾ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮಿಂಚಿದರಾದರೂ ಕೆಳ ಕ್ರಮಾಂಕದ ಆಟಗಾರರಿಂದ ನಿರೀಕ್ಷಿತ ಆಟ ಮೂಡಿ ಬರಲಿಲ್ಲ. ಹೀಗಾಗಿ ದೊಡ್ಡ ಮೊತ್ತ ಕಲೆ ಹಾಕುವ ನಿರೀಕ್ಷೆ ಮೂಡಿಸಿದ್ದ ಝೌಕ್ಸ್ 150 ಗಡಿ ದಾಟಲಷ್ಟೇ ಶಕ್ತವಾಯಿತು.

ಈ ಮೊತ್ತವನ್ನು ಬೆನ್ನಟ್ಟಿದ ನೈಟ್ ರೈಡರ್ಸ್ ತಂಡಕ್ಕೆ ಆರಂಭದಲ್ಲಿ ಝೌಕ್ಸ್ ಬೌಲರ್‌ಗಳು ಆಘಾತವನ್ನು ನೀಡಿದರು. 19 ರನ್‌ಗೆ ನೈಟ್ ರೈಡರ್ಸ್ ತಂಡದ 2 ವಿಕೆಟ್ ಕಬಳಿಸುವಲ್ಲಿ ಸೇಂಟ್ ಲೂಸಿಯಾ ಯಶಸ್ವಿಯಾಗಿತ್ತು. ಎಲ್ಲಾ ಪಂದ್ಯಗಳನ್ನು ಗೆದ್ದು ಹುಮ್ಮಸ್ಸಿನಲ್ಲಿದ್ದ ನೈಟ್ ರೈಡರ್ಸ್ ಪಾಳೆಯದಲ್ಲಿ ಒಂದು ಕ್ಷಣ ಆತಂಕ ಛಾಯೆ ಆವರಿಸಿತ್ತು.

ಆದರೆ ಬಳಿಕ ಯಾವುದೇ ರೀತಿಯಲ್ಲೂ ಎಡವದಂತೆ ಲೆಂಡ್ಸ್ ಸಿಮ್ಮನ್ಸ್ ಹಾಗೂ ಡ್ಯಾರೆನ್ ಬ್ರಾವೋ ನೋಡಿಕೊಂಡರು. ಇಬ್ಬರೂ ಔಟಾಗದೆಯೇ ತಂಡವನ್ನು ಗೆಲುವಿನ ದಡವನ್ನು ತಲುಪಿಸುವಲ್ಲಿ ಯಶಸ್ವಿಯಾದರು. ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ ನೈಟ್ ರೈಡರ್ಸ್ ಗೆಲುವಿನ ಕೇಕೆ ಹಾಕುವಲ್ಲಿ ಯಶಸ್ವಿಯಾಯಿತು

Story first published: Friday, September 11, 2020, 10:06 [IST]
Other articles published on Sep 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+