Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಪಿಎಲ್ 2020 ಫೈನಲ್ ಪಂದ್ಯ: ಟಿಕೆಆರ್ vs ಝೌಕ್ಸ್ ಪಂದ್ಯದ ಸಂಪೂರ್ಣ ಮಾಹಿತಿ

CPL 2020 Final: TKR Vs SLZ: Weather Forecast, When and Where to Watch

ಸಿಪಿಎಲ್ 8ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೂರ್ನಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಹಂತಕ್ಕೇರಿರುವ ಕಿರಾನ್ ಪೊಲಾರ್ಡ್ ನೇತೃತ್ವದ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಅನುಭವಿ ಆಟಗಾರ ಡ್ಯಾರೆನ್ ಸಮಿ ನೇತೃತ್ವದ ಸೇಂಟ್ ಲೂಸಿಯಾ ಝೌಕ್ಸ್ ತಂಡವನ್ನು ಎದುರಿಸಲಿದೆ.

ಎಲ್ಲಾ ಪಂದ್ಯಗಳಲ್ಲೂ ಸರ್ವಾಂಗೀಣ ಪ್ರದರ್ಶನವನ್ನು ನೀಡಿ ಗೆದ್ದು ಬೀಗಿರುವ ನೈಟ್ ರೈಡರ್ಸ್ ತಂಡ ಫೈನಲ್ ಪಂದ್ಯದಲ್ಲಿ ಸೇಂಟ್ ಲೂಸಿಯಾ ತಂಡವನ್ನು ಕೂಡ ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯುವ ಅತ್ಯುತ್ಸಾಹದಲ್ಲಿದೆ. ಆದರೆ ಸೆಮಿ ಫೈನಲ್ ಪಂದ್ಯದಲ್ಲಿ ನೀಡಿದ ಅದ್ಭುತ ಪ್ರದರ್ಶನ ಸಮಿ ನೇತೃತ್ವದ ಸೇಂಟ್ ಲೂಸಿಯಾಗೆ ದೊಡ್ಡ ಹುಮ್ಮಸ್ಸನ್ನು ನೀಡಿದೆ. ಕೊನೆಯ ಕಾದಾಟದಲ್ಲಿ ಅಜೇಯ ತಂಡವನ್ನು ಮಣಿಸಿ ಪವಾಡ ಮಾಡುವ ಭರವಸೆಯನ್ನು ಹೊಂದಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾಚ್ ವಿನ್ನರ್‌ಗಳನ್ನು ಹೊಂದಿರುವ ನೈಟ್ ರೈಡರ್ಸ್ ಈ ಪಂದ್ಯದಲ್ಲೂ ಗೆಲ್ಲುವ ಫೇವರೀಟ್ ತಂಡವಾಗಿದೆ. ಪೊಲಾರ್ಡ್ಮ ಡ್ವೇಯ್ನ್ ಬ್ರಾವೋ, ಸುನಿಲ್ ನರೈನ್‌ರಂತಾ ಆಟಗಾರರ ಬಲ ತಂಡಕ್ಕೆ ಇದೆ. ಮತ್ತೊಂದೆಡೆ ಸೇಂಟ್ ಲೂಸಿಯಾ ತಂಡ ನಾಯಕ ಡ್ಯಾರೆನ್ ಸಮಿ ನಾಯಕತ್ವದ ಜಾಣ್ಮೆಯನ್ನು ನೆಚ್ಚಿಕೊಂಡಿದೆ.

ಇಂದು(ಸೆಪ್ಟೆಂಬರ್ 10 ಬುಧವಾರ) ಸಿಪಿಎಲ್‌ನ ಫೈನಲ್ ಪಂದ್ಯ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕಾಗಿ ಟ್ರಿನಿಡಾಡ್‌ನ ಟರೌಬಾದಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಮ್ ಸಂಪೂರ್ಣವಾಗಿ ಸಜ್ಜಾಗಿದೆ. ಭಾರತಿಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಹವಾಮಾನ ಪಂದ್ಯ ನಡೆಯಲು ಪೂರಕವಾಗಿದ್ದು ಮಳೆ ಅಡ್ಡಿಯ ಆತಂಕವಿಲ್ಲ.

ಸಿಪಿಎಲ್‌ನ ಫೈನಲ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿದ್ದು ಭಾರತೀಯರು ವೀಕ್ಷಿಸಬಹುದಾಗಿದೆ. ಫ್ಯಾನ್‌ಕೋಡ್ ಆ್ಯಪ್‌ನಲ್ಲೂ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸುವ ಅವಕಾಶವಿದೆ.

Story first published: Thursday, September 10, 2020, 16:43 [IST]
Other articles published on Sep 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+