ಸಿಪಿಎಲ್ 2020 ಆರಂಭಕ್ಕೆ ಕ್ಷಣಗಣನೆ: ಮೊದಲ ದಿನ ಎರಡು ಪಂದ್ಯಗಳು

ಇಂದು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಈ ವರ್ಷದ ಆವೃತ್ತಿಗೆ ಚಾಲನೆ ದೊರೆಯಲಿದೆ. ಸುದೀರ್ಘ ಕಾಲದ ನಂತರ ಟಿ20 ಲೀಗ್ ಕ್ರಿಕೆಟ್ ಮತ್ತೆ ಮರಳುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಟ್ರೆನಿಡಾಡ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡೆಯುವ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳ ಆಟಗಾರರು ಬಯೋ ಸೆಕ್ಯೂರ್ ವಾತಾವರಣದಲ್ಲಿ ಅಲ್ಲಿ ಸೇರಿದ್ದಾರೆ.
ಇಂದು ಚಾಲನೆ ಪಡೆಯಲಿರುವ ಈ ಪಂದ್ಯಾವಳಿ ಮುಂದಿನ ತಿಂಗಳು 10ನೇ ತಾರಿಕಿಗೆ ಫೈನಲ್ ಪಂದ್ಯ ನಡೆಯುವುದರ ಮೂಲಕ ಅಂತ್ಯವಾಗಲಿದೆ. ಒಟ್ಟಾರೆ 23 ದಿನಗಳ ಕಾಲ ಕೆರಿಬಿಯನ್ ನಾಡಿನಲ್ಲಿ ಕ್ರಿಕೆಟ್ ಜಾತ್ರೆ ನಡೆಯಲಿದ್ದು ಅಭಿಮಾನಿಗಳಿಗೆ ಸಾಕಷ್ಟು ಸಮಯದ ನಂತರ ಮನರಂಜನೆಯ ಮಹಾಪೂರ ದೊರೆಯಲಿದೆ.
ಮೊದಲ ಪಂದ್ಯದಲ್ಲಿ ಕಿರಾನ್ ಪೊಲಾರ್ಡ್ ನೇತೃತ್ವದ ಡ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಹಾಗೂ ಗಯಾನಾ ಅಮೆಜಾನ್ ವಾರಿಯರ್ಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7:30 ಈ ಪಂದ್ಯ ನಡೆಯುತ್ತಿರುವುದು ಭಾರತೀಯ ಅಭಿಮಾನಿಗಳಿಗೆ ಅನುಕೂಲವಾಗಿದೆ.
ಟ್ರಿನಿಡಾಡ್‌ನ ಟರೌಬಾದಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಮ್‌ನಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಕಿರಾನ್ ಪೊಲಾರ್ಡ್, ಡ್ವೇಯ್ನ್ ಬ್ರಾವೋ, ಸುನಿಲ್ ನರೈನ್, ಕಾಲಿನ್ ಮನ್ರೋ ತರಹದ ದೊಡ್ಡ ಹೊಡೆತಗಳ ಆಟಗಾರರ ನಡುವಿನ ಈ ಪಂದ್ಯ ಅಭಿಮಾನಿಗಳಿಗೆ ಸಾಕಷ್ಟು ರಸದೌತಣವನ್ನು ನೀಡುವ ನಿರೀಕ್ಷೆಯಿದೆ.
ಎರಡನೇ ಭಾರತೀಯ ಕಾಲಮಾನದ ಪ್ರಕಾರ ನಸುಕಿನ ಜಾವ 3 ಗಂಟೆಗೆ ಆರಂಭವಾಗಲಿದೆ. ಎರಡನೇ ಪಂದ್ಯ ಕಳೆದ ಬಾರಿಯ ಚಾಂಪಿಯನ್ ತಂಡ ಹಾಗೂ ಬಾರ್ಬೇಡೊಸ್ ಟ್ರೈಡೆಂಟ್ಸ್ ಮತ್ತು ಸೇಂಟ್ ಕಿಟ್ಸ್ ಅಂಡ್ ನೆವೀಸ್ ಪೇಟ್ರಿಯಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications