For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್: ಸೇಂಟ್ ಲೂಸಿಯಾ ಝೌಕ್ಸ್‌ ಆಟಗಾರರ ಪಟ್ಟಿ, ತಂಡದ ಮಾಹಿತಿ

CPL 2020: Full squad of St Lucia Zouks, Team detail

ಟ್ರಿನಿಡಾಡ್ ಆ್ಯಂಡ್ ಟೊಬಾಗೊ, ಆಗಸ್ಟ್ 9: ಕೆರಿಬಿಯನ್ ಪ್ರೀಮಿಯರ್ ಲೀಗ್ 2020ರಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲು ಸೇಂಟ್ ಲೂಸಿಯಾ ಝೌಕ್ಸ್ ಕಣ್ಣಿಟ್ಟಿದೆ. ಆಗಸ್ಟ್ 19ರಂದು ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯುವ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ತಂಡ ಜಮೈಕಾ ತಲೈವಾಸ್ ಸವಾಲು ಸ್ವೀಕರಿಸಲಿದೆ.

ಕೊರೊನಾವೈರಸ್ ಶುರವಾದ ಬಳಿಕ ನಡೆಯುತ್ತಿರುವ ಮೊದಲ ಟಿ20 ಟೂರ್ನಿಯಾಗಿ ಸಿಪಿಎಲ್ ಗುರುತಿಸಿಕೊಳ್ಳಲಿದೆ. ಟೂರ್ನಿಯ ಪಂದ್ಯಗಳು ಟ್ರಿನಿಡಾಡ್ ಆ್ಯಂಡ್ ಟೊಬಾಗೊನಲ್ಲಿನ ಎರಡು ತಾಣಗಳಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದೆ.

ವಿಶ್ವದ ಪ್ರತಿಭಾನ್ವಿತ ಆಟಗಾರರು ಪಾಲ್ಗೊಳ್ಳುತ್ತಿರುವ 33 ಪಂದ್ಯಗಳ ಸಿಪಿಎಲ್ ಟೂರ್ನಿ ಕೋವಿಡ್-19ನಿಂದಾಗಿ ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯಲಿದೆ. ಸೇಂಟ್ ಲೂಸಿಯಾ ಝೌಕ್ಸ್ ತಂಡವನ್ನು ವೆಸ್ಟ್ ಇಂಡೀಸ್ ಆಟಗಾರ ಡ್ಯಾರೆನ್ ಸಾಮಿ ಮುನ್ನಡೆಸಲಿದ್ದಾರೆ. 2014, 2015, 2018 ಮತ್ತು 2019ರ ಸೀಸನ್‌ಗಳಲ್ಲಿ ಸೇಂಟ್ ಝೌಕ್ಸ್ ತಂಡ 5ನೇ ಸ್ಥಾನದಲ್ಲಿ ಆಟ ಮುಗಿಸಿತ್ತು.

ಸೇಂಟ್ ಲೂಸಿಯಾ ಝೌಕ್ಸ್‌ ತಂಡ: ರೋಸ್ಟನ್ ಚೇಸ್, ಮೊಹಮ್ಮದ್ ನಬಿ, ಡ್ಯಾರೆನ್ ಸಾಮಿ, ನಜೀಬುಲ್ಲಾ ಖಾದ್ರಾನ್, ಆಂಡ್ರೆ ಫ್ಲೆಚರ್, ಕೆಸ್ರಿಕ್ ವಿಲಿಯಮ್ಸ್, ಸ್ಕಾಟ್ ಕುಗ್ಗೆಲೀಜ್ನ್, ಚೆಮರ್ ಜೋಲ್ಡರ್, ಓಬೆ ಮೆಕಾಯ್, ರಾಹಕೀಮ್ ಕಾರ್ನ್‌ವಾಲ್, ಮಾರ್ಕ್ ಡಯಾಲ್, ಜಹೀರ್ ಖಾನ್, ಕಿಮಾನಿ ಮೆಲಿಯಸ್, ಲೆನಿಕೊ ಬೌಚರ್, ಕೇವ್ ಹಾಡ್ಜ್, ಜಾವೆಲ್ ಗ್ಲೆನ್, ಸಾದ್ ಬಿನ್ ಜಾಫರ್.

Story first published: Monday, August 10, 2020, 10:14 [IST]
Other articles published on Aug 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+