Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಪಿಎಲ್: ಗೆಲುವಿನ ನಾಗಾಲೋಟದಲ್ಲಿರುವ 'ನೈಟ್‌ರೈಡರ್ಸ್‌'ಗೆ ಅಡ್ಡಿಯಾಗುತ್ತಾರಾ 'ವಾರಿಯರ್ಸ್'

Cpl 2020 Guyana Amazon Warriors Vs Trinbago Knight Riders Prediction

ಸಿಪಿಎಲ್‌ನ 13ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಪರಸ್ಪರ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳು ಪರಸ್ಪರ ಗೆಲುವನ್ನು ದಾಖಲಿಸಲು ಹಾತೊರೆಯುತ್ತಿದೆ. ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಪಂದ್ಯ ನಡೆಯಲಿದೆ.

ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಜಯವನ್ನು ಸಾಧಿಸಿ ಮುನ್ನುಗ್ಗುತ್ತಿದೆ. ಈವರೆಗೆ ನಾಲ್ಕು ಪಂದ್ಯವನ್ನಾಡಿರುವ ಟಿಕೆಆರ್ ತಂಡ ನಾಲ್ಕರಲ್ಲೂ ಗೆದ್ದು ಅಜೇಯ ತಂಡವೆನಿಸಿದೆ. ಈ ಸಾಧನೆಯನ್ನು ಮುರಿಯಲು ಅಮೆಜಾನ್ ವಾರಿಯರ್ಸ್ ತುದಿಗಾಲಲ್ಲಿ ನಿಂತಿದೆ.

ಗಯಾನಾ ಅಮೆಜಾನ್ ವಾರಿಯರ್ಸ್ ತಂಡ ಟೂರ್ನಿಯಲ್ಲಿ ಈವರೆಗೆ ಐದು ಪಂದ್ಯಗಳನ್ನಾಡಿದ್ದು ಕೇವಲ 2ರಲ್ಲಿ ಗೆಲುವು ಕಂಡು 3 ಪಂದ್ಯಗಳನ್ನು ಎದುರಾಳಿಗೆ ಒಪ್ಪಿಸಿದೆ. ಇಂದಿನ ಪಂದ್ಯ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಪಡೆಯುವ ಇರಾದೆಯಲ್ಲಿದೆ. ಸದ್ಯ ಗಯಾನ ನಾಲ್ಕನೇ ಸ್ಥಾನದಲ್ಲಿದೆ.

ಸಂಭಾವ್ಯ ತಂಡ ಹೀಗಿದೆ:
ಗಯಾನಾ ಅಮೆಜಾನ್ ವಾರಿಯರ್ಸ್: ಬ್ರಾಂಡನ್ ಕಿಂಗ್, ಚಂದ್ರಪಾಲ್ ಹೇಮರಾಜ್, ಶಿಮ್ರಾನ್ ಹೆಟ್ಮಿಯರ್, ರಾಸ್ ಟೇಲರ್, ನಿಕೋಲಸ್ ಪೂರನ್, ಶೆರ್ಫೇನ್ ರುದರ್ಫೋರ್ಡ್, ಕೀಮೋ ಪಾಲ್, ಕ್ರಿಸ್ ಗ್ರೀನ್, ಇಮ್ರಾನ್ ತಾಹಿರ್, ಅಶ್ಮೀದ್ ನೆಡ್, ನವೀನ್-ಉಲ್-ಹಕ್

ಟ್ರಿನ್‌ಬಾಗೊ ನೈಟ್ ರೈಡರ್ಸ್: ಸುನಿಲ್ ನರೈನ್, ಲೆಂಡ್ಲ್ ಸಿಮ್ಮನ್ಸ್, ಕಾಲಿನ್ ಮನ್ರೊ, ಡ್ಯಾರೆನ್ ಬ್ರಾವೋ, ಟಿಮ್ ಸೀಫರ್ಟ್, ಕೀರನ್ ಪೊಲಾರ್ಡ್, ಡಿಜೆ ಬ್ರಾವೋ, ಖಾರಿ ಪಿಯರೆ, ಫವಾದ್ ಅಹ್ಮದ್, ಅಲಿ ಖಾನ್, ಪ್ರವೀಣ್ ತಂಬೆ.

Story first published: Friday, August 28, 2020, 10:00 [IST]
Other articles published on Aug 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+