ಸಿಪಿಎಲ್ ಹೈಲೈಟ್ಸ್: ಸೇಂಟ್ ಲೂಸಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಗಯಾನಾ

ಸಿಪಿಎಲ್ 2020 ಆವೃತ್ತಿಯ 24ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಶಿಮ್ರಾನ್ ಹೇಟ್ಮೇರ್ ಭರ್ಜರಿ ಆಟದಿಂದಾಗಿ ಇನ್ನೂ 37 ಎಸೆತಗಳು ಬಾಕಿ ಉಳಿದಿರುವಂತೆಯೇ ಈ ಗೆಲುವನ್ನು ಸಾಧಿಸಿ ಬೀಗಿದೆ ಗಯಾನಾ ಅಮೆಜಾನ್ ವಾರಿಯರ್ಸ್ ತಂಡ.
ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಲೂಸಿಯಾ ಝೌಕ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 109 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ಗಯಾನಾ ಅಮೆಜಾನ್ ವಾರಿಯರ್ಸ್ ತಂಡ 13.5 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿತು.
ಸಂಪೂರ್ಣ ಸ್ಕೋರ್ ಪಟ್ಟಿ ಹೀಗಿದೆ:
ಸೇಂಟ್ ಲೂಸಿಯಾ ಝೌಕ್ಸ್ ಪರವಾಗಿ ಉತ್ತಮ ಬ್ಯಾಟಿಂಗ್ ಯಾರಿಂದಲೂ ವ್ಯಕ್ತವಾಗಲಿಲ್ಲ. ಆರಂಭಿಕ ಆಟಗಾರ ಕಾರ್ನಿವಲ್ 13 ಎಸೆತಗಳಲ್ಲಿ 21 ರನ್ ಗಳಿಸಿದರೆ ಜವೆಲ್ ಗ್ಲೆನ್ ಅಂತಿಮ ಹಂತದಲ್ಲಿ 22 ಎಸೆತಗಳಲ್ಲಿ 23 ರನ್ ದಾಖಲಿಸಿ ತಂಡಕ್ಕೆ ಆಸರೆಯಾದರು. ಗಯಾನಾ ಪರವಾಗಿ ನವೀನ್ ಉಲ್ ಹಕ್ ಹಾಗೂ ಕೀಮೋ ಪೌಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇದಕ್ಕೆ ಪ್ರತಿಯಾಗಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡ ಎಲ್ಲೂ ಆತಂಕಕ್ಕೆ ಒಳಗಾಗುವ ಸ್ಥಿತಿ ಬರಲೇ ಇಲ್ಲ. ಬ್ರೆಂಡನ್ ಕಿಂಗ್ ವಿಕೆಟ್ ಬೇಗನೆ ಕಳದೆದುಕೊಂಡರು., ಅದು ತಂಡಕ್ಕೆ ದುಬಾರಿಯಾಗದಂತೆ ಇತರೆ ಬ್ಯಾಟ್ಸ್‌ಮನ್‌ಗಳು ನೋಡಿಕೊಂಡರು. ಶಿಮ್ರಾಮ್ ಹೇಟ್ಮೇರ್ 56 ರನ್ ಗಳಿಸಿದರೆ ಚಂದ್ರಪೌಲ್ ಹೇಮ್ರಾಜ್ 26 ರನ್ ಸಿಡಿಸಿದರು.
ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡ ಸೇಂಟ್ ಲೂಸಿಯಾವನ್ನು 3ನೇ ಸ್ಥಾನಕ್ಕೆ ತಳ್ಳಿ 2ನೇ ಸ್ಥಾನಕ್ಕೇರುವಲ್ಲಿ ಸಫಲವಾಗಿದೆ. 9 ಪಂದ್ಯಗಳನ್ನು ಆಡಿರುವ ಗಯಾನಾ 5 ಗೆಲುವನ್ನು ಸಾಧಿಸಿದೆ. 8 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿರುವ ಸೇಂಟ್ ಲೂಸಿಯಾ ರನ್ ರೇಟ್‌ನಲ್ಲಿ ಹಿಂದೆ ಬಿದ್ದಿ ಮೂರನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications