For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020 ಹೈಲೈಟ್ಸ್: ಉದ್ಘಾಟನಾ ಪಂದ್ಯದಲ್ಲಿ ನರೈನ್ ಸಾಹಸ, ಟಿಕೆಆರ್‌ಗೆ ಗೆಲುವು

Cpl 2020 Highlights: Trinbago Win Opener By Four Wickets

ಸಿಪಿಎಲ್‌ನ 8ನೇ ಆವೃತ್ತಿಗೆ ರೋಚಕ ಚಾಲನೆ ದೊರೆತಿದೆ. ಬಹಳ ತಿಂಗಳ ನಂತರ ಟಿ20 ಕ್ರಿಕೆಟ್ ಕಣ್ತುಂಬಿಕೊಂಡ ಕ್ರಿಕೆಟ್ ಅಭಿಮಾನಿಗಳಿಗೆ ಮೊದಲ ಪಂದ್ಯದಲ್ಲೇ ಭರಪೂರ ಮನರಂಜನೆ ದೊರೆತಿದೆ. ಸುನಿಲ್ ನರೈನ್ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿ ಗಯಾನ ಅಮೆಜಾನ್ ವಾರಿಯರ್ಸ್ ವಿರುದ್ಧ ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ರೋಚಜ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಟ್ರಿನ್‌ಬ್ಯಾಗೋ ನೈಟ್‌ ರೈಡರ್ಸ್(ಟಿಎನ್‌ಆರ್) ತಂಡ ಎದುರಾಳಿ ಗಯಾನ ಅಮೆಜಾನ್ ವಾರಿಯರ್ಸ್(ಜಿಎಡಬ್ಲ್ಯು) ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯವನ್ನು 17 ಓವರ್‌ಗಳಿಗೆ ಸೀಮಿತಗೊಳಿಸಿಲಾಗಿತ್ತು. ನಿಗದಿತ ಓವರ್‌ಗಳಲ್ಲಿ ಗಯಾನ ತಂಡ 144 ರನ್‌ಗಳನ್ನು ಸಿಡಿಸಿತ್ತು. ಹೇಟ್ಮೇರ್(63) ಹಾಗೂ ರಾಸ್ ಟೇಲರ್(33) ಕೊಡುಗೆ ಈ ಇನ್ನಿಂಗ್ಸ್‌ನ ಹೈಲೈಟ್ಸ್‌ ಆಗಿತ್ತು.

ಗಯಾನ ತಂಡ ನೀಡಿದ ಈ ಮೊತ್ತವನ್ನು ಟ್ರಿನ್‌ಬ್ಯಾಗ ತಂಡ ಬೆನ್ನತ್ತಲು ಆರಂಭಿಸಿತ್ತು. ಅದರಲ್ಲೂ ಆರಂಭಿಕ ಆಟಗಾರ ಸುನಿಲ್ ನರೈನ್ 28 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡಕ್ಕೆ ಅತ್ಯುತ್ತಮ ಆರಂಭ ದೊರೆಯುವಂತೆ ಮಾಡಿದರು. ಇತರ ಆಟಗಾರರು ಕೂಡ ಉತ್ತಮ ಸಾಥ್ ನೀಡಿದರು.

ಸಂಪೂರ್ಣ ಸ್ಕೋರ್ ಕಾರ್ಡ್ ಇಲ್ಲಿದೆ:

1
9936-nonopta-8275

ಪಂದ್ಯದಲ್ಲಿ ಟ್ರಿನ್‌ಬ್ಯಾಗೋ ತಂಡದ ಎಲ್ಲೂ ಆಘಾತಕ್ಕೆ ಒಳಗಾಗುವ ಸಂದರ್ಭವೇ ಬಂದಿರಲಿಲ್ಲ. ಹಾಗಿದ್ದರೂ ಪಂದ್ಯ ಅಂತಿಮ ಓವರ್‌ವರೆಗೆ ಬಂದು ರೋಚಕತೆಗೆ ಸಾಕ್ಷಿಯಾಗಿತ್ತು. ಅಂತಿಮ ಓವರ್‌ನಲ್ಲ ಇನ್ನೂ ಎರಡು ಎಸೆತಗಳು ಬಾಯಿಯಳಿದಿರುವಂತೆಯೇ ಟ್ರಿನ್‌ಬ್ಯಾಗೋ ತಂಡ ಗೆಲುವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ಟ್ರಿನ್‌ಬ್ಯಾಗೋ ತಂಡದ ಪರವಾಗಿ ಸುನಿಲ್ ನರೈನ್ ಬ್ಯಾಟಿಂಗ್ ಮಾತ್ರವಲ್ಲ ಬೌಲಿಂಗ್‌ನಲ್ಲೂ ಮಿಂಚಿದ್ದರು. ನಾಲ್ಕು ಓವರ್‌ಗಳನ್ನು ಎಸೆದ ನರೈನ್ ಕೇವಲ 19 ರನ್‌ ನೀಡಿ 2 ವಿಕೆಟ್ ಪಡೆದು ಕಬಳಿಸಿದ್ದರು. ನರೈನ್ ಸಾಹಸಕ್ಕೆ ಈ ಟೂರ್ನಿಯ ಮೊದಲ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

Story first published: Wednesday, August 19, 2020, 15:07 [IST]
Other articles published on Aug 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+