
ಟ್ರಿನಿಡಾಡ್, ಆಗಸ್ಟ್ 19: ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಬುಧವಾರ (ಆಗಸ್ಟ್ 19) ನಡೆದ ಕೆರಿಯನ್ ಲೀಗ್ 3ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ ಜಮೈಕಾ ತಲೈವಾಸ್ 5 ವಿಕೆಟ್ ಗೆಲುವನ್ನಾಚರಿಸಿದೆ. ಗ್ಲೆನ್ ಫಿಲಿಪ್ಸ್, ಆಸಿಫ್ ಅಲಿ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ತಲೈವಾಸ್ ಮೊದಲ ಜಯ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೇಂಟ್ ಲೂಸಿಯಾ ಝೌಕ್ಸ್, ರಹಕೀಮ್ ಕಾರ್ನವಾಲ್ 9, ಆ್ಯಂಡ್ರೆ ಫ್ಲೆಚರ್ 22, ಮಾರ್ಕ್ ಡೆಯಲ್ 17, ರೋಸ್ಟನ್ ಚೇಸ್ 52, ನಜೀಬುಲ್ಲ ಝದ್ರನ್ 25, ಮೊಹಮ್ಮದ್ ನಬಿ 13 ರನ್‌ನೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು 158 ರನ್ ಮಾಡಿತ್ತು.
ಗುರಿ ಬೆನ್ನಟ್ಟಿದ ಜಮೈಕಾ ತಲೈವಾಸ್, ಗ್ಲೆನ್ ಫಿಲಿಪ್ಸ್ 44 (29 ಎಸೆತ), ನಾಯಕ ರೋಮನ್ ಪೋವೆಲ್ 26, ಆಸಿಫ್ ಅಲಿ ಅಜೇಯ 47 (27), ಆ್ಯಂಡ್ರೆ ರಸೆಲ್ 16, ಕಾರ್ಲೋಸ್ ಬ್ರಾಥ್‌ವೇಟ್ ಅಜೇಯ 18 ರನ್‌ನೊಂದಿಗೆ 18.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವನ್ನಾಚರಿಸಿತು.
ಸೇಂಟ್ ಲೂಸಿಯಾ ಝೌಕ್ಸ್ ಇನ್ನಿಂಗ್ಸ್‌ನಲ್ಲಿ ಜಮೈಕಾ ತಲೈವಾಸ್‌ನ ವೀರಸಾಮಿ ಪೆರ್ಮೌಲ್ 2, ಮುಜೀಬ್ ಉರ್ ರಹ್ಮಾನ್ 2, ಆ್ಯಂಡ್ರೆ ರಸೆಲ್ ಮತ್ತು ಸಂದೀಪ್ ಲಮಿಚಾನೆ ತಲಾ 1 ವಿಕೆಟ್ ಪಡೆದರೆ, ಜಮೈಕಾ ತಲೈವಾಸ್ ಇನ್ನಿಂಗ್ಸ್‌ನಲ್ಲಿ ಝೌಕ್ಸ್‌ನ ಕೆಸ್ರಿಕ್ ವಿಲಿಯಮ್ಸ್ 2, ಸ್ಕಾಟ್ ಕುಗ್ಗೆಲೀಜ್ನ್, ಓಬೆಡ್ ಮೆಕಾಯ್, ರಹಕೀಮ್ ಕಾರ್ನ್ವಾಲ್ ತಲಾ 1 ವಿಕೆಟ್ ಪಡೆದರು.