Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಪಿಎಲ್ 2020: ನೈಟ್ ರೈಡರ್ಸ್‌ಗೆ ಸೋಲಿನ ರುಚಿ ತೋರಿಸುತ್ತಾ ಜಮೈಕಾ ತಲ್ಲವಾಸ್?

Cpl 2020 Match 21: Jamaica Tallawahs Vs Trinbago Knight Riders

ಸಿಪಿಎಲ್ 8ನೇ ಆವೃತ್ತಿ ಸರಾಗವಾಗಿ ನಡೆಯುತ್ತಿದ್ದು ನಾಕ್‌ಔಟ್ ಹಂತದತ್ತ ಮುನ್ನುಗ್ಗುತ್ತಿದೆ. ಮಂಗಳವಾರ ಸಿಪಿಎಲ್ ಅಂಗಳದಲ್ಲಿ 21ನೇ ಪಂದ್ಯ ನಡೆಯಲಿದ್ದು ಜಮೈಕಾ ತಲ್ಲವಾಸ್ ಹಾಗೂ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿದೆ.

ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಈ ಬಾರಿಯ ಸಿಪಿಎಲ್ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. ಈವರೆಗೆ ಆಡಿದ ಎಲ್ಲಾ 6 ಪಂದ್ಯಗಳನ್ನು ಗೆದ್ದುಕೊಂಡಿರುವ ಸಾಧನೆಯನ್ನು ಮಾಡಿದೆ ಟ್ರಿಬ್‌ಬ್ಯಾಗೋ ನೈಟ್ ರೈಡರ್ಸ್ ತಂಡ.

ಮತ್ತೊಂದೆಡೆ ಜಮೈಕಾ ತಲ್ಲವಾಸ್ ತಂಡ ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದ್ದು ಫ್ಲೇ ಆಪ್‌ನಲ್ಲಿ ಸ್ಥಾನವನ್ನು ಪಡೆಯಲು ಹರಸಾಹಸ ಪಡುತ್ತಿದೆ. 6 ಪಂದ್ಯಗಳ್ನಾಡಿರುವ ಜಮೈಕಾ ತಲ್ಲವಾಸ್ ತಂಡ 3 ಪಂದ್ಯಗಳಲ್ಲಿ ಗೆಲುವು ಕಂಡಿದ್ದು 3ರಲ್ಲಿ ಸೋಲಿನ ರುಚಿ ಕಂಡಿದೆ. ಈ ಪಂದ್ಯದಲ್ಲಿ ಅಗ್ರ ಸ್ಥಾನದಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ಟಿಕೆಆರ್ ತಂಡಕ್ಕೆ ಸೋಲಿನ ರುಚಿ ತೊರಿಸಲು ಸಜ್ಜಾಗಿದೆ.

ಸಂಭಾವ್ಯ ತಂಡ ಹೀಗಿದೆ:
ಜಮೈಕಾ ತಲ್ಲಾವಾಸ್: ರೋಮನ್ ಪೊವೆಲ್ (ನಾಯಕ), ಗ್ಲೆನ್ ಫಿಲಿಪ್ಸ್ (ವಿಕೆಟ್ ಕೀಪರ್), ಚಾಡ್ವಿಕ್ ವಾಲ್ಟನ್, ಜೆರ್ಮೈನ್ ಬ್ಲ್ಯಾಕ್‌ವುಡ್, ಆಸಿಫ್ ಅಲಿ, ಎನ್‌ಕ್ರುಮಾ ಬೊನ್ನರ್, ಆಂಡ್ರೆ ರಸ್ಸೆಲ್, ಕಾರ್ಲೋಸ್ ಬ್ರಾಥ್‌ವೈಟ್, ಸಂದೀಪ್ ಲಮಿಚಾನೆ, ಮುಜೀಬ್ ಉರ್ ರಹಮಾನ್, ಫಿಡೆಲ್ ಎಡ್ವರ್ಡ್ಸ್.

ಟ್ರಿನ್‌ಬಾಗೊ ನೈಟ್ ರೈಡರ್ಸ್: ಕೀರನ್ ಪೊಲಾರ್ಡ್ (ನಾಯಕ), ಲೆಂಡ್ಲ್ ಸಿಮ್ಮನ್ಸ್, ಸುನಿಲ್ ನರೈನ್, ಕಾಲಿನ್ ಮುನ್ರೊ, ಡ್ಯಾರೆನ್ ಬ್ರಾವೋ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಖಾರಿ ಪಿಯರೆ, ಫವಾದ್ ಅಹ್ಮದ್, ಅಲಿ ಖಾನ್, ಜೇಡೆನ್ ಸೀಲ್ಸ್.

Story first published: Tuesday, September 1, 2020, 15:29 [IST]
Other articles published on Sep 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+