
ಸಿಪಿಎಲ್‌ನ 8ನೇ ಆವೃತ್ತಿಯ ಟೂರ್ನಿಯಲ್ಲಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಸತತ 7 ಪಂದ್ಯಗಳಲ್ಲಿ ಗೆದ್ದು ಬೀಗಿದ್ದು ಇಂದು ಸೇಂಟ್ ಕಿಟ್ಸ್ & ನೇವಿಸ್ ಪೇಟ್ರಿಯಾಟ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ. ಇಂದಿನ ಪಂದ್ಯದಲ್ಲೂ ಗೆದ್ದು 8 ನೇ ಗೆಲುವಿನತ್ತ ದೃಷ್ಟಿ ನೆಟ್ಟಿದೆ ಕಿರಾನ್ ಪೊಲಾರ್ಡ್ ನೇತೃತ್ವದ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್.
ಇನ್ನು ಮತ್ತೊಂದೆಡೆ ಸೇಂಟ್ ಕಿಟ್ಸ್ & ನೇವಿಸ್ ಪೇಟ್ರಿಯಾಟ್ಸ್ ತಂಡದ ಸ್ಥಿತಿ ಶೋಚನೀಯವಾಗಿದ್ದು ಗೆಲುವೇ ಮರೀಚಿಕೆಯಾಗಿದೆ. ಈ ವರೆಗೆ ಆಡಿದ 7 ಪಂದ್ಯಗಳಲ್ಲಿ ರೇಯಡ್ ಎಮ್ರಿಟ್ ನೇತೃತ್ವದ ಸೇಂಟ್ ಕಿಟ್ಸ್ ತಂಡ ಕೇವಲ ಒಂದು ಗೆಲುವನ್ನು ಮಾತ್ರವೇ ಕಾಣಲು ಸಾಧ್ಯವಾಗಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೇಯ ಸ್ಥಾನದಲ್ಲಿದೆ.
ಸಿಪಿಎಲ್ ಟೂರ್ನಿಯಲ್ಲಿ ನಡೆಯುತ್ತಿರುವ ಈ ಪಂದ್ಯ ಈ ಆವೃತ್ತಿಯ 23ನೇ ಪಂದ್ಯವಾಗಿದೆ. ಬ್ರಿಯಾನ್ ಲಾರಾ ಸ್ಟೇಡಿಯಮ್‌ನಲ್ಲಿ ಈ ಪಂದ್ಯ ನಡೆಯುತ್ತಿದ್ದು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.
ಸಂಭಾವ್ಯ ತಂಡ ಹೀಗಿದೆ
ಟ್ರಿನ್‌ಬಾಗೊ ನೈಟ್ ರೈಡರ್ಸ್: ಲೆಂಡ್ಲ್ ಸಿಮನ್ಸ್, ಸುನಿಲ್ ನರೈನ್, ಕಾಲಿನ್ ಮನ್ರೊ, ಡ್ಯಾರೆನ್ ಬ್ರಾವೋ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್ (ನಾಯಕ), ಡ್ವೇನ್ ಬ್ರಾವೋ, ಖಾರಿ ಪಿಯರೆ, ಫವಾದ್ ಅಹ್ಮದ್, ಪ್ರವೀಣ್ ತಾಂಬೆ ಮತ್ತು ಅಲಿ ಖಾನ್
ಸೇಂಟ್ ಕಿಟ್ಸ್ & ನೆವಿಸ್ ಪೇಟ್ರಿಯಾಟ್ಸ್: ರೇಯಡ್ ಎಮ್ರಿಟ್ (ನಾಯಕ), ಕ್ರಿಸ್ ಲಿನ್, ಕೀರನ್ ಪೊವೆಲ್, ಎವಿನ್ ಲೂಯಿಸ್, ಜೋಶುವಾ ಡಾ ಸಿಲ್ವಾ, ಡೆನೇಶ್ ರಾಮ್ಡಿನ್ (ವಿಕೆಟ್ ಕೀಪರ್), ಬೆನ್ ಡಂಕ್, ಶೆಲ್ಡನ್ ಕಾಟ್ರೆಲ್, ಇಮ್ರಾನ್ ಖಾನ್, ಇಶ್ ಸೋಧಿ, ಜಾನ್-ರಸ್ ಜಗ್ಗರ್