For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020 ಹೈಲೈಟ್ಸ್‌: ಗಯಾನ ಅಮೆಜಾನ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ಹೇಟ್ಮೇರ್

Cpl 2020 Match 4: Gayana Amazon Won Match Against St Kitts

ಸಿಪಿಎಲ್‌ನ ನಾಲ್ಕನೇ ಪಂದ್ಯದಲ್ಲಿ ಕಾದಾಟಕ್ಕಿಳಿದಿದ್ದ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಸೇಂಟ್ ಕಿಟ್ಸ್ ಆ್ಯಂಡ್ ನೇವಿಸ್ ಪೇಟ್ರಿಯಾಟ್ಸ್ ತಂಡಗಳಲ್ಲಿ ಗಯಾನಾ ತಂಡ ಭರ್ಜರಿ ಗೆಲುವನ್ನು ದಾಖಲಿಸಿದೆ. ಈ ಮೂಲಕ ತನ್ನ ಎರಡನೇ ಪಂದ್ಯದಲ್ಲಿ ಗಯಾನ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಕಿಟ್ಸ್ ತಂಡ ನೀರಸ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತ್ತು. ಯಾವೊಬ್ ಬ್ಯಾಟ್ಸ್‌ಮನ್ ಕೂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ನೀಡಲು ಸಫಲರಾಗಲಿಲ್ಲ. 18 ಎಸೆತಗಳಲ್ಲಿ 30 ರನ್ ಗಳಿಸಿದ ಲೀವಿಸ್ ಗಳಿಕೆಯೇ ತಂಡದ ಟಾಪ್ ಸ್ಕೋರ್ ಆಗಿದೆ. ಒಟ್ಟಾರೆಯಾಗಿ ನಿಗದಿತ 20 ಓವರ್‌ಗಳಲ್ಲಿ ಸೇಂಟ್ ಕಿಟ್ಸ್ ತಂಡ 8 ವಿಕೆಟ್ ಕಳೆದುಕೊಂಡು 127 ಗಳಿಸಲಷ್ಟೇ ಶಕ್ತವಾಗಿತ್ತು.

ಪಂದ್ಯದ ಸ್ಕೋರ್ ಪಟ್ಟಿ ಹೀಗಿದೆ:

1
9936-nonopta-8278

ಗಯಾನ ತಂಡದ ಪರವಾಗಿ ಮಧ್ಯಮ ವೇಗದ ಬೌಲರ್ ಕಿಮೋ ಪೌಲ್ ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿದರು. ತನ್ನ ಪಾಲಿನ ನಾಲ್ಕು ಓವರ್‌ಗಳ ಕೋಟಾದಲ್ಲಿ ಪೌಲ್ ಕೇವಲ 19 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಇಮ್ರಾನ್ ತಾಹಿರ್ ಕೂಡ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದಾರೆ.

ಇನ್ನು ಗಯಾನಾ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಿದವರು ಯುವ ಆಟಗಾರ ಶಿಮ್ರಾನ್ ಹೇಟ್ಮರ್. 44 ಎಸೆತಗಲನ್ನು ಎದುರಿಸಿದ ಹೇಟ್ಮೇರ್ 71 ರನ್ ಸಿಡಿಸಿದರು. ಉಳಿದಂತೆ ಇತರ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ. ಆದರೂ ಏಕಾಂಗಿಯಾಗಿ ಹೋರಾಟವನ್ನು ನಡೆಸಿದ ಹೇಟ್ಮೇರ್ ತಂಡದ ಗೆಲುವನ್ನು ಖಚಿತ ಪಡಿಸಿ ಔಟಾದರು.

ಗಯಾನಾ ವಾರಿಯರ್ಸ್ ತಂಡ ಎದುರಾಳಿ ಸೇಂಟ್ ಕಿಟ್ಸ್ ನೀಡಿದ ಗುರಿಯನ್ನು ಇನ್ನೂ 3 ಓವರ್‌ಗಳು ಬಾಕಿಯಿರುವಂತೆಯೇ ತಲುಪುವಲ್ಲಿ ಯಶಸ್ವಿಯಾಗಿತ್ತು. ಸೇಂಟ್ ಕಿಟ್ಸ್ ತಂಡ ತಾನಾಡಿದ 2 ಪಂದ್ಯಗಳಲ್ಲೂ ಸೋಲನ್ನು ಅನುಭವಿಸುವ ಮೂಲದ ಅಂಕಪಟ್ಟಿಯ ಕೊನೆಯಲ್ಲಿ ಕಾಣಿಸಿಕೊಂಡಿದೆ.

Story first published: Thursday, August 20, 2020, 16:13 [IST]
Other articles published on Aug 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+