Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಪಿಎಲ್ ಅಂಗಳದಲ್ಲಿಂದು ಸೇಂಟ್ ಲೂಸಿಯಾ ಝೌಕ್ಸ್‌ಗೆ ಬಾರ್ಬಡೋಸ್ ಟ್ರಿಡೆಂಟ್ಸ್ ಸವಾಲು

Cpl 2020: Match 5, St Lucia Zouks Vs Barbados Tridents Preview

ಸಿಪಿಎಲ್ ಟಿ20 ಲೀಗ್‌ನಲ್ಲಿನ ಪ್ರತಿ ಪಂದ್ಯವೂ ಕೂಡ ರೋಚಕ ಫಲಿತಾಂಶಗಳನ್ನು ನೀಡುತ್ತಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳು ರಸದೌತಣವನ್ನು ಅನುಭವಿಸುತ್ತಿದ್ದಾರೆ. ಇಂದು ಕೂಡ ಎರಡು ಪಂದ್ಯಗಳು ನಡೆಯಲಿದೆ. ಭಾರತೀಯ ಕಾಲಮಾನ 7:30 ಕ್ಕೆ ಆರಂಭವಾಗುವ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್‌ಗೆ ಬಾರ್ಬಡೋಸ್ ಟ್ರಿಡೆಂಟ್ಸ್ ಮುಖಾಮುಖಿಯಾಗುತ್ತಿದೆ.

ಎರಡು ಪಂದ್ಯಗಳು ಕೂಡ ತಮ್ಮ ಮೊದಲ ಪಂದ್ಯವನ್ನು ಆಡಿದ್ದು ಇಂದು ಎರಡನೇ ಪಂದ್ಯಕ್ಕಾಗಿ ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯದಲ್ಲಿ ಬಾರ್ಡೋಸ್ ತಂಡ ಸೇಂಟ್ ಕಿಟ್ಸ್‌ ವಿರುದ್ಧ ಗೆಲುವನ್ನು ಸಾಧಿಸಿದ ಉತ್ಸಾಹದಲ್ಲಿದೆ. ಆದರೆ ಸೇಂಟ್ ಲೂಸಿಯಾ ಝೌಕ್ಸ್ ಮಾತ್ರ ಜಮೈಕಾ ತಲ್ಲವಾಸ್‌ಗೆ ಶರಣಾಗಿದ್ದು ಇಂದು ಗೆಲುವಿನ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದೆ.

ಬಾರ್ಬಡೋಸ್ ಟ್ರೈಡೆಂಟ್ಸ್ ಆರಂಭಿಕ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಆರು ರನ್‌ಗಳ ಜಯ ದಾಖಲಿಸಿತ್ತು. ಪಂದ್ಯದ ಆರಂಭದಲ್ಲಿ ಬಾರ್ಬಡೋಸ್ ಎಂಟು ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಅದ್ಭುತ ಪುನರಾಗಮನವನ್ನು ಮಾಡುವಲ್ಲಿ ಯಶಸ್ವಿಯಾದರು. ರಾಷ್ಟ್ರೀಯ ಟೆಸ್ಟ್ ನಾಯಕ ಜೇಸನ್ ಹೋಲ್ಡರ್ ನಾಯಕತ್ವ ವಹಿಸಿರುವ ಹಾಲಿ ಚಾಂಪಿಯನ್ ತಂಡ ಮಾಜಿ ಟಿ20 ನಾಯಕ ಡೇರೆನ್ ಸ್ಯಾಮಿ ನೇತೃತ್ವದ ಸೇಂಟ್ ಲೂಸಿಯಾಗೆ ಇಂದು ಸವಾಲೊಡ್ಡಲಿದೆ

ಸಂಭಾವ್ಯ ತಂಡ ಸೇಂಟ್ ಲೂಸಿಯಾ ಝೌಕ್ಸ್‌: ರಖೀಮ್ ಕಾರ್ನ್‌ವಾಲ್, ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್), ಮಾರ್ಕ್ ಡಯಾಲ್, ರೋಸ್ಟನ್ ಚೇಸ್, ನಜೀಬುಲ್ಲಾ ಖಾದ್ರಾನ್, ಮೊಹಮ್ಮದ್ ನಬಿ, ಡೇರೆನ್ ಸ್ಯಾಮಿ (ನಾಯಕ), ಸ್ಕಾಟ್ ಕುಗ್ಗೆಲೆಜಿನ್, ಕೆಸ್ರಿಕ್ ವಿಲಿಯಮ್ಸ್, ಜಹೀರ್ ಖಾನ್ ಪಕ್ಟೆನ್, ಓಬೆಡ್ ಮೆಕಾಯ್

ಬಾರ್ಬಡೋಸ್ ಟ್ರಿಡೆಂಟ್ಸ್ ಸಂಭಾವ್ಯ ತಂಡ: ಜಾನ್ಸನ್ ಚಾರ್ಲ್ಸ್, ಶೈ ಹೋಪ್ (ವಾರ), ಕೋರೆ ಆಂಡರ್ಸನ್, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್ (ಸಿ), ಜೊನಾಥನ್ ಕಾರ್ಟರ್, ರೇಮನ್ ರೀಫರ್, ಮಿಚೆಲ್ ಸ್ಯಾಂಟ್ನರ್, ಆಶ್ಲೇ ನರ್ಸ್, ರಶೀದ್ ಖಾನ್, ಹೇಡನ್ ವಾಲ್ಷ್

Story first published: Thursday, August 20, 2020, 17:37 [IST]
Other articles published on Aug 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+