ಮಂಗಳವಾರ ಸಿಪಿಎಲ್ 2020ಗೆ ಚಾಲನೆ: ಟೂರ್ನಿಯ ನೇರಪ್ರಸಾರ ಹಾಗೂ ಸಮಯ

ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ 18 ರಿಂದ ಚಾಲನೆ ಪಡೆದುಕೊಳ್ಳಲಿದೆ. ಮೊದಲ ದಿನ ಎರಡು ಪಂದ್ಯಗಳು ನಡೆಯಲಿದ್ದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಈ ಪಂದ್ಯಗಳನ್ನು ಹೇಗೆ ವೀಕ್ಷಿಸಬಹುದು. ಎಷ್ಟು ಗಂಟೆಗೆ ಪಂದ್ಯ ಆರಂಭವಾಗಲಿದೆ ಎಂಬುದಕ್ಕೆ ಈ ವರದಿಯಲ್ಲಿ ಉತ್ತರ ದೊರೆಯಲಿದೆ.
ಮಂಗಳವಾರ ಉದ್ಘಾಟನೆಗೊಳ್ಳಲಿರುವ ಸಿಪಿಎಲ್ ಟೂರ್ನಿಯಲ್ಲಿ ಮೊದಲ ದಿನ ಎರಡು ಪಂದ್ಯಗಳು ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ಹಾಗೂ ಕಳೆದ ಬಾರಿಯ ರನ್ನರ್ಅಪ್ ತಂಡ ಗಯಾನ ವಾರಿಯರ್ಸ್ ಕಾದಾಟವನ್ನು ನಡೆಸಲಿವೆ. ಎರಡನೇ ಪಂದ್ಯ ಕಳೆದ ಬಾರಿಯ ಚಾಂಪಿಯನ್ ತಂಡ ಹಾಗೂ ಬಾರ್ಬೇಡೊಸ್ ಟ್ರೈಡೆಂಟ್ಸ್ ಮತ್ತು ಸೇಂಟ್ ಕಿಟ್ಸ್ ಅಂಡ್ ನೆವೀಸ್ ಪೇಟ್ರಿಯಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಪಂದ್ಯದ ಆರಂಭ: ಸಿಪಿಎಲ್‌ನಲ್ಲಿ ನಡೆಯುವ ಮೊದಲ ಪಂದ್ಯ ಭಾರತೀಯ ಕಾಲಮಾನ 7:30ಕ್ಕೆ ಆರಂಭವಾಗಲಿದೆ. ಇದು ಈ ಬಾರಿಯ ಐಪಿಎಲ್ ಸಮಯಕ್ಕೆ ಮೊದಲ ಬಾರಿಗೆ ಹೊಂದಿಕೆಯಾಗುತ್ತಿದೆ. ಎರಡನೇ ಪಂದ್ಯ ಮಾತ್ರ ಭಾರತೀಯ ಅಭಿಮಾನಿಗಳಿಗೆ ಪೂರಕವಾಗಿಲ್ಲ. ನಸುಕಿನ ಜಾವ 3 ಗಂಟೆಗೆ ಎರಡನೇ ಪಂದ್ಯ ಆರಂಭವಾಗಲಿದೆ.
ನೇರಪ್ರಸಾರ: ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಟಿವಿಯಲ್ಲಿ ವೀಕ್ಷಿಸುವ ಭಾರತೀಯ ಅಭಿಮಾನಿಗಳು ಸ್ಟಾರ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಆನ್‌ಲೈನ್ ಬಳಕೆದಾರರು ಸ್ಟಾರ್ ನೆಟ್‌ವರ್ಕ್‌ನ ಡಿಸ್ನಿ+ಹಾಟ್‌ಸ್ಟಾರ್ ಮೂಲಕ ವೀಕ್ಷಿಸಬಹುದಾಗಿದೆ. ಇದರ ಜೊತೆಗೆ 'ಡ್ರೀಮ್ 11'ನ 'ಫ್ಯಾನ್ ಕೋಡ್'ನಲ್ಲೂ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದು ಎಂದು ಸಿಪಿಎಲ್ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications