For Quick Alerts
ALLOW NOTIFICATIONS  
For Daily Alerts
 

15 ರನ್‌ಗೆ 5 ವಿಕೆಟ್‌, ಸೇಂಟ್ ಲೂಸಿಯಾಕ್ಕೆ ಗೆಲುವು ಬರೆದ ಮೊಹಮ್ಮದ್ ನಬಿ

CPL 2020: Mohammad Nabis five wickets guided St Lucia Zouks to 6-wicket win

ಪೋರ್ಟ್ ಆಫ್ ಸ್ಪೇನ್: ಅಫ್ಘಾನಿಸ್ತಾನದ ಅನುಭವಿ ಸ್ಪಿನ್ನರ್ ಮೊಹಮ್ಮದ್ ನಬಿ 15 ರನ್‌ಗೆ 5 ವಿಕೆಟ್ ಮುರಿದು ಗಮನ ಸೆಳೆದಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ 15ನೇ ಪಂದ್ಯದಲ್ಲಿ ನಬಿ ಈ ಸಾಧನೆ ತೋರಿದ್ದಾರೆ. ನಬಿ ಮಾರಕ ಬೌಲಿಂಗ್ ನೆರವಿನಿಂದ ಸೇಂಟ್ ಲೂಸಿಯಾ ಝೌಕ್ಸ್, ಸೇಂಟ್ ಕೈಟ್ಸ್‌ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್‌ ವಿರುದ್ಧ 6 ವಿಕೆಟ್ ಗೆಲುವನ್ನಾಚರಿಸಿದೆ.

ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೇಂಟ್ ಲೂಸಿಯಾ ಝೌಕ್ಸ್ ಬೌಲಿಂಗ್ ಆಯ್ದುಕೊಂಡಿತು. ಇನ್ನಿಂಗ್ಸ್ ಆಡಿದ ಸೇಂಟ್ ಕೈಟ್ಸ್‌ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್‌ನಿಂದ ಬೆನ್ ಡಂಕ್ 33, ಸೊಹೈಲ್ ತನ್ವೀರ್ 12, ನಾಯಕ ರಯಾದ್ ಎಮ್ರಿತ್ 16, ಅಲ್ಝಾರಿ ಜೋಸೆಫ್ 21 ರನ್ ಸೇರಿಸಿದರು.

ನೇವಿಸ್ ಪ್ಯಾಟ್ರಿಯೋಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು 110 ರನ್ ಮಾಡಿತು. ಗುರಿ ಬೆನ್ನಟ್ಟಿದ ಸೇಂಟ್ ಲೂಸಿಯಾ ಝೌಕ್ಸ್, ರಹಕೀಮ್ ಕಾರ್ನವಾಲ್‌ 26, ಆ್ಯಂಡ್ರೆ ಫ್ಲೆಸರ್ 16, ರೋಸ್ಟನ್ ಚೇಸ್ 27, ಜೀಬುಲ್ಲ ಝದ್ರನ್ 33 ರನ್‌ನೊಂದಿಗೆ 14.4 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 111 ರನ್ ಕಲೆ ಹಾಕಿತು.

4 ಓವರ್‌ ಎಸೆದಿದ್ದ ಮೊಹಮ್ಮದ್ ನಬಿ 3.80 ಎಕಾನಮಿಯಲ್ಲಿ 15 ರನ್‌ಗೆ 5 ವಿಕೆಟ್ ಮುರಿದರೆ, ಎದುರಾಳಿ ತಂಡದ ಇಮ್ರಾನ್ ಖಾನ್ 23 ರನ್‌ಗೆ 3 ವಿಕೆಟ್‌ ಪಡೆದು ತಂಡಕ್ಕೆ ಬೆಂಬಲಿಸಿದರು. ಮೊಹಮ್ಮದ್ ನಬಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

Story first published: Friday, August 28, 2020, 16:10 [IST]
Other articles published on Aug 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+