48ರ ಹರೆಯ ಪಕ್ಕಕ್ಕಿಟ್ಟು ಅದ್ಭುತ ಕ್ಯಾಚ್ ಪಡೆದ ಪ್ರವೀಣ್ ತಾಂಬೆ: ವೀಡಿಯೊ

ಪೋರ್ಟ್ ಆಫ್ ಸ್ಪೇನ್: ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಕ್ರಿಕೆಟಿಗನಾಗಿ ದಾಖಲೆ ಬರೆದಿರುವ ಪ್ರವೀಣ್ ತಾಂಬೆ ಅದ್ಭುತ ಕ್ಯಾಚ್‌ಗಾಗಿ ಗಮನ ಸೆಳೆದಿದ್ದಾರೆ. ಬುಧವಾರ (ಸೆಪ್ಟೆಂಬರ್ 2) ನಡೆದ ಸಿಪಿಎಲ್ 23ನೇ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಮೈದಾನಕ್ಕಿಳಿದಿದ್ದ ತಾಂಬೆ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ವಿರುದ್ಧ ಫೀಲ್ಡಿಂಗ್‌ಗಾಗಿ ಚಿತ್ತ ತನ್ನತ್ತ ಹರಿಸಿಕೊಂಡರು. 48ರ ಹರೆಯದ ತಾಂಬೆಯ ಆಟಕ್ಕೆ, ಕ್ರೀಡಾ ಸ್ಫೂರ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅನೇಕ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
ಖಾರಿ ಪಿಯರೆ ಅವರ 1.5ನೇ ಓವರ್‌ನಲ್ಲಿ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಎವಿನ್ ಲೂಯಿಸ್ ಅವರ ಕ್ಯಾಚ್ ತಾಂಬೆಗೆ ಲಭಿಸಿತು. ತಲೆಯ ಮೇಲ್ಭಾಗದಲ್ಲಿ ಹಾದು ಹೋಗುತ್ತಿದ್ದ ಚೆಂಡನ್ನು ತಾಂಬೆ ಹಾರಿ ಕ್ಯಾಚ್ ಮಾಡಿದ್ದರು.
ಇದೇ ಪಂದ್ಯದಲ್ಲಿ ತಾಂಬೆ ಉತ್ತಮ ಬೌಲಿಂಗ್‌ಗಾಗಿಯೂ ಗುರುತಿಸಿಕೊಂಡಿದ್ದಾರೆ. ತಾಂಬೆಯ ಕ್ಯಾಚ್‌ಗೆ ಮೆಚ್ಚುಗೆಯಾಗಿ ಬಂದಿರುವ ಟ್ವೀಟ್‌ಗಳು ಕೆಳಗಿವೆ.
ಪಾದಾರ್ಪಣೆ ಪಂದ್ಯದಲ್ಲೇ ವಿಕೆಟ್
ಸಿಪಿಎಲ್ ಪಾದಾರ್ಪಣೆ ಪಂದ್ಯದಲ್ಲೇ ವಿಕೆಟ್ ಪಡೆಯುವ ಮೂಲಕ ಪ್ರವೀಣ್ ತಾಂಬೆ ಗಮನ ಸೆಳೆದಿದ್ದರು. ಆಗಸ್ಟ್ 27ರಂದು ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ ಚೊಚ್ಚಲ ಸಿಪಿಎಲ್ ಪಂದ್ಯವಾಡಿದ್ದ ತಾಂಬೆ ಏಕಮಾತ್ರ ಓವರ್‌ನಲ್ಲಿ 1 ವಿಕೆಟ್ (ನಜೀಬುಲ್ಲ ಝದ್ರನ್) ಪಡೆದಿದ್ದರು. ತಾಂಬೆಯ ಪ್ರದರ್ಶನಕ್ಕೆ ಮೆಚ್ಚಿ ಐಸಿಸಿ ಟ್ವೀಟ್ ಮಾಡಿತ್ತು.
4 ಓವರ್‌ಗಳಲ್ಲಿ 1 ಮೇಡ್ ಇನ್
ಬುಧವಾರದ ಪಂದ್ಯದಲ್ಲಿ ಒಟ್ಟು 4 ಓವರ್‌ಗಳನ್ನು ಎಸೆದಿದ್ದ ತಾಂಬೆ 1 ಮೇಡ್ ಇನ್ ಜೊತೆಗೆ 12 ರನ್‌ಗೆ 1 ವಿಕೆಟ್ ಕೂಡ ಪಡೆದಿದ್ದಾರೆ. 12.3ನೇ ಓವರ್‌ನಲ್ಲಿ ಸೇಂಟ್ ಕೈಟ್ಸ್‌ನ ಜೋಶುವಾ ಡೆ ಸಿಲ್ವಾ ಅವರು 29 ರನ್‌ಗೆ ತಾಂಬೆಗೆ ಕಾಟ್ ಆ್ಯಂಡ್ ಬೌಲ್ಡ್ ಆಗಿ ನಿರ್ಗಮಿಸಿದರು.
ಸಿಮನ್ಸ್ ಸ್ಫೋಟಕ ಬ್ಯಾಟಿಂಗ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್ ಲೆಂಡ್ಲ್ ಸಿಮನ್ಸ್ 96 (63 ಎಸೆತ), ಡ್ಯಾರೆನ್ ಬ್ರಾವೊ 36 ರನ್ ಸೇರಿಸಿದರು. ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದು 174 ರನ್ ಕಲೆ ಹಾಕಿತ್ತು.
ನೈಟ್ ರೈಡರ್ಸ್‌ಗೆ 8ನೇ ಜಯ
ಗುರಿ ಬೆನ್ನಟ್ಟಿದ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ತಂಡ, ಕ್ರಿಸ್ ಲಿನ್ 34, ಜೋಶುವ ಡೆ ಸಿಲ್ವಾ 29, ರಯಾದ್ ಎಮ್ರಿತ್ 13 ರನ್ ಕೊಡುಗೆಯೊಂದಿಗೆ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ 59 ರನ್‌ನಿಂದ ಸೋಲೊಪ್ಪಿಕೊಂಡಿತು. ನೈಟ್ ರೈಡರ್ಸ್ ಆಡಿದ 8 ಪಂದ್ಯಗಳಲ್ಲಿ 8ರಲ್ಲೂ ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications