ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಅಪ್ಘಾನಿಸ್ತಾನದ ರಶೀದ್ ಖಾನ್

ಅಪ್ಘಾನಿಸ್ತಾನ ಕ್ರಿಕೆಟ್‌ನ ಯುವ ಆಟಗಾರ ರಶೀದ್ ಖಾನ್ ಚುಟುಕು ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆಯನ್ನು ಮಾಡುತ್ತಿದ್ದಾರೆ. ಸಿಪಿಎಲ್‌ನಲ್ಲೂ ಮಿಂಚುತ್ತಿರುವ ರಶೀದ್ ಟಿ20 ಕ್ರಿಕೆಟ್‌ನಲ್ಲಿ ವಿಸೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್ ವೇಗವಾಗಿ ಪಡೆದ ಕ್ರಿಕೆಟಿಗ ಎಂಬ ಖ್ಯಾತಿಯ ಜೊತೆಗೆ ಈ ಸಾಧನೆಯನ್ನು ಮಾಡಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನು ರಶಿದ್ ಖಾನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಸೇಂಟ್ ಲೂಸಿಯಾ ಝೌಕ್ಸ್ ತಂಡದ ಆಲ್‌ರೌಂಡರ್ ತನ್ನ ರಾಷ್ಟ್ರೀಯ ತಂಡದ ಸಹ ಆಟಗಾರ ಮೊಹಮದ್ ನಬಿ ವಿಕೆಟ್ ಪಡೆಯುವ ಮೂಲಕ ರಶೀದ್ ಖಾನ್ ಈ ಸಾಧನೆಯನ್ನು ಮಾಡಿದ್ದಾರೆ.

ಪಂದ್ಯ ಸೋತರು ರಶೀದ್‌ಗೆ ವಿಶೇಷ
ಬಾರ್ಬಡೋಸ್ ಟ್ರಿಡೆಂಟ್ಸ್ ತಂಡದ ಪರವಾಗಿ ಸಿಪಿಎಲ್‌ನಲ್ಲಿ ಆಡುತ್ತಿರುವ ರಶೀದ್ ಖಾನ್ ಈ ಬಾರಿಯ ಟೂರ್ನಿಯಲ್ಲಿ ಕೇಂದ್ರ ಬಿಂದುವಾಗಿದ್ದಾರೆ. ಸೇಂಟ್ ಲೂಸಿಯಾ ವಿರುದ್ಧದ ಪಂದ್ಯವನ್ನು ರಶಿದ್ ಪ್ರತಿನಿದಿಸುವ ಬಾರ್ಬಡೋಸ್ ತಂಡ ಸೋತರೂ ವಿಶೇಷ ಪ್ರದರ್ಶನದ ಮೂಲಕ ರಶೀದ್ ಖಾನ್‌ಗೆ ಈ ಪಂದ್ಯ ವಿಶೇಷವೆನಿಸಿದೆ.

ವಿಶೇಷ ಸಾಧನೆ ಮಾಡಿದ ರಶೀದ್
ಗುರುವಾರ ಮೊಹಮದ್ ನಬಿ ವಿಕೆಟ್ ಕೆಡವುವ ಮೂಲಕ ರಶೀದ್ ಖಾನ್ 21 ವರ್ಷ 335ನೇ ದಿನದಂದು ಈ ಸಾಧನೆಯನ್ನು ಮಾಡಿ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ ಕೇವಲ 213 ಪಂದ್ಯಗಳಲ್ಲೇ ಈ ಸಾಧನೆಯನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿದರು.

ಐಪಿಎಲ್‌ನಲ್ಲೂ ರಶೀದ್ ಖಾನ್ ಮಿಂಚು
ರಶೀದ್ ಖಾನ್ ಅಪ್ಘಾನಿಸ್ತಾನ ತಂಡದ ಪರವಾಗಿ ಆಡುವುದಲ್ಲದೆ ಭಾರತೀಯ ಮೂಲದ ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾವಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಶೀದ್ ಆಲ್‌ರೌಂಡರ್ ಪ್ರದರ್ಶನವನ್ನು ನೀಡಿ ಮಿಂಚಿದ್ದರು.

ಸಿಪಿಎಲ್ ಜೊತೆಗೆ ಬಿಗ್‌ಬ್ಯಾಷ್‌ನಲ್ಲೂ ರಶೀದ್ ಖಾನ್
ಸದ್ಯ ರಶಿದ್ ಖಾನ್ ಸಿಪಿಎಲ್ 2020ಯಲ್ಲಿ ಬಾರ್ಬಡೋಸ್ ತಂಡವನ್ನು ಪ್ರತಿನಿಧಿಸುತ್ತಿದ್ದು ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಟಿ20 ಕ್ರಿಕೆಟ್ ಇನ್ನೊಂದು ಪ್ರತಿಷ್ಠಿತ ಟೂರ್ನಿ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಕ್ರಿಕೆಟ್ ಲೀಗ್‌ನಲ್ಲು ಪಾಲ್ಗೊಳ್ಳುತ್ತಿರುವ ರಶೀದ್ ಖಾನ್ ಅಡಿಲೇಡ್ ಸ್ಟ್ರೈಕರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications