Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಯಾನಾ ವಾರಿಯರ್ಸ್ ವಿರುದ್ಧ ಸೇಂಟ್ ಲೂಸಿಯಾ ಝೌಕ್ಸ್‌ಗೆ ರೋಚಕ ಜಯ

CPL 2020: St Lucia Zouks beat Guyana Amazon Warriors by 10 runs

ಟ್ರನಿಡಾಡ್: ರೋಸ್ಟನ್ ಚೇಸ್ ಅವರ ಅರ್ಧ ಶತಕದ ನೆರವಿನೊಂದಿಗೆ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ 10ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ ಸೇಂಟ್ ಲೂಸಿಯಾ ಝೌಕ್ಸ್ 10 ರನ್ ರೋಚಕ ಗೆಲುವನ್ನಾಚರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೇಂಟ್ ಲೂಸಿಯಾ ಝೌಕ್ಸ್, ಆ್ಯಂಡ್ರೆ ಫ್ಲೆಚರ್ 12, ಕಿಮಾನಿ ಮೆಲಿಯಸ್ 8, ರೋಸ್ಟನ್ ಚೇಸ್ 66, ಮೊಹಮ್ಮದ್ ನವಿ 27, ಜಾವೆಲ್ಲೆ ಗ್ಲೆನ್ 19 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 144 ರನ್ ಕಲೆ ಹಾಕಿತು.

ಗುರಿ ಬೆನ್ನಟ್ಟಿದ ಗಯಾನಾ ವಾರಿಯರ್ಸ್, ಚಂದ್ರಪೌಲ್ ಹೇಮರಾಜ್ 15, ನಿಕೋಲಸ್ ಪೂರನ್ 68, ಕೀಮೋ ಪೌಲ್ 20, ಶೆರ್ಫೇನ್ ರುದಫೋರ್ಡ್ 15 ರನ್ ಸೇರ್ಪಡೆಯೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು 134 ರನ್ ಗಳಿಸಲಷ್ಟೇ ಶಕ್ತವಾಯ್ತು.

ಸೇಂಟ್ ಲೂಸಿಯಾ ಇನ್ನಿಂಗ್ಸ್‌ನಲ್ಲಿ ವಾರಿಯರ್ಸ್‌ನ ಇಮ್ರಾನ್ ತಾಹಿರ್ 3, ಓಡಿಯನ್ ಸ್ಮಿತ್ 2 ವಿಕೆಟ್‌ಗಳೊಂದಿಗೆ ಗಮನ ಸೆಳೆದರೆ, ಗಯಾನಾ ವಾರಿಯರ್ಸ್ ಇನ್ನಿಂಗ್ಸ್‌ನಲ್ಲಿ ಝೌಕ್ಸ್‌ನ ಸ್ಕಾಟ್ ಕುಗ್ಗೆಲೀಜ್ನ್ 3, ಚೆಮರ್ ಹೋಲ್ಡರ್ ಮತ್ತು ಕೆಸ್ರಿಕ್ ವಿಲಿಯಮ್ಸ್ ತಲಾ 2 ವಿಕೆಟ್ ಪಡೆದರು. ರೋಸ್ಟನ್ ಚೇಸ್ ಪಂದ್ಯಶ್ರೇಷ್ಠರೆನಿಸಿದರು.

Story first published: Monday, August 24, 2020, 11:52 [IST]
Other articles published on Aug 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+