ಆಗಸ್ಟ್ 18ರಿಂದ ಟ್ರಿನಿಡಾಡ್, ಟೊಬಾಗೊದಲ್ಲಿ ಸಿಪಿಎಲ್ 2020 ಆಯೋಜನೆ

ಪೋರ್ಟ್ ಆಫ್ ಸ್ಪೇನ್, ಜುಲೈ 13: ಕೆರಿಬಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿ ಆಗಸ್ಟ್ 18ರಿಂದ ಸೆಪ್ಟೆಂಬರ್ 20ರ ವರೆಗೆ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿದೆ. ಸಿಪಿಎಲ್ ಇದನ್ನು ಖತರಿಪಡಿಸಿದೆ. ಕೊರೊನಾವೈರಸ್ ಭೀತಿ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಟಿ20 ಟೂರ್ನಿಯಾಗಿ ಸಿಪಿಎಲ್ ಗುರುತಿಸಿಕೊಳ್ಳಲಿದೆ.
ಟ್ರಿನಿಡಾಡ್, ಟೊಬಾಗೊ ತಾಣಗಳಲ್ಲಿ ಸಿಪಿಎಲ್ ನಡೆಸಲು ಅಲ್ಲಿನ ಸರ್ಕಾರ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಸಿಪಿಎಲ್ ಆರಂಭ-ಅಂತ್ಯದ ದಿನಾಂಕ ಮತ್ತು ತಾಣಗಳು ಘೋಷಿಸಲ್ಪಟ್ಟಿವೆ. ಸಿಪಿಎಲ್‌ನಲ್ಲಿ ಭಾರತದ ಕ್ರಿಕೆಟರ್ ಪ್ರವೀಣ್ ತಾಂಬೆ ಆಡಲಿದ್ದಾರೆ.
ದೇಶದಲ್ಲಿರುವ ಎಲ್ಲಾ ತಂಡಗಳು ಮತ್ತು ಅಧಿಕಾರಿಗಳು ಹೋಟೆಲ್‌ನಲ್ಲಿದ್ದು 2 ವಾರಗಳ ಕಟ್ಟುನಿಟ್ಟಿನ ಕ್ವಾರಂಟೈನ್ ಪಾಲಿಸಲಿದ್ದಾರೆ. ವಿದೇಶದಿಂದ ಬರುವ ಪ್ರತಿಯೊಬ್ಬರೂ ಅಲ್ಲಿಂದ ಹೊರಡುವ ಮುನ್ನ ಮತ್ತು ಇಲ್ಲಿ ತಲುಪಿದ ಬಳಿಕ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ.
ಟೂರ್ನಿಯಲ್ಲಿ ಸ್ಪರ್ಧಿಸುವ ಆರು ತಂಡಗಳ ಆಟಗಾರರ ಪಟ್ಟಿಯನ್ನು ಸಿಪಿಎಲ್ ಇತ್ತೀಚೆಗೆ ಪ್ರಕಟಿಸಿತ್ತು. ಇದರಲ್ಲಿ ಭಾರತದ ಆಟಗಾರ ಪ್ರವೀಣ್ ತಾಂಬೆ ಹೆಸರೂ ಇತ್ತು. 48ರ ಹರೆಯದ ತಾಂಬೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಆಡಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ಇವೆರಡೂ ಶಾರೂಖ್ ಖಾನ್ ಸಹ ಮಾಲೀಕತ್ವದ ನೈಟ್ ರೈಡರ್ಸ್ ಫ್ರಾಂಚೈಸಿಯ ತಂಡಗಳು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications