ಸಿಪಿಎಲ್ 2020: ಇಂದು ಜಮೈಕಾ ತಲ್ಲವಾಸ್‌ಗೆ ಸೈಂಟ್ ಲೂಸಿಯಾ ಝೌಕ್ಸ್ ಎದುರಾಳಿ

ಸಿಪಿಎಲ್ 8ನೇ ಆವೃತ್ತಿ ಅಬ್ಬರದ ಆರಂಭವನ್ನು ಮಂಗಳವಾರ ಪಡೆದುಕೊಂಡಿದೆ. ಮೊದಲ ದಿನ ಎರಡು ಪಂದ್ಯಗಳ ನಂತರ ಇಂದು ಮತ್ತೊಂದು ಡಬಲ್ ಹೆಡ್ಡರ್ ದಿನವಾಗಿದೆ. ಕೆರಿಬಿಯನ್ ಲೀಗ್‌ನ ಮೂರನೇ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ ಹಾಗೂ ಸೈಂಟ್ ಲೂಸಿಯಾ ಝೌಕ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ರೋವ್‌ಮನ್ ಪೊವೆಲ್ ನೇತೃತ್ವದ ಜಮೈಕಾ ತಲ್ಲವಾಸ್‌ನಲ್ಲಿ ಆಂಡ್ರೆ ರಸೆಲ್, ಕಾರ್ಲೋಸ್ ಬ್ರ್ಯಾಥ್‌ವೆಟ್ ಅವರಂತಾ ಸ್ಪೋಟಕ ಆಟಗಾರರು ಮಿಂಚಲು ಸಿದ್ಧರಾಗಿದ್ದಾರೆ. ಮತ್ತೊಂದೆಡೆ ಸೈಂಟ್ ಲೂಸಿಯಾ ತಂಡದ ನಾಯಕ ಡ್ಯಾರೆನ್ ಸಮಿ ಎದುರಾಳಿಯನ್ನು ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಸದ್ದಡಗಿಸಲು ತಮ್ಮ ತಂಡದೊಂದಿಗೆ ಸಿದ್ಧರಾಗಿದ್ದಾರೆ.
ಮೊದಲ ದಿನ ಎರಡು ಪಂದ್ಯಗಳು ನಡೆದಿದ್ದು ಮೊದಲ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಜಯಭೇರಿ ಬಾರಿಸಿತ್ತು. ಎರಡನೇ ಪಂದ್ಯದಲ್ಲಿ ಬಾರ್ಬಡೋಸ್ ಡ್ರಿಡೆಂಟ್ಸ್ ಹಾಗೂ ಸೈಂಟ್ ಕಿಟ್ಸ್ ಆ್ಯಂಡ್ ನೇವಿಸ್ ಪೇಟ್ರಿಯಾಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಇದರಲ್ಲಿ ಬಾರ್ಬಡೋಸ್ ತಂಡ ಗೆಲುವು ದಾಖಲಿಸಿತ್ತು.
ಇಂದು ಹೋರಾಟವನ್ನು ನಡೆಸುತ್ತಿರುವ ಈ ಎರಡೂ ತಂಡಗಳು ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡುವ ಮೂಲಕ ಲೀಗ್ ಹಂತದಿಂದಲೇ ಹೊರಬಿದ್ದಿದ್ದವು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಅದನ್ನು ಮರೆತು ತನ್ನ ಮೊದಲ ಪಂದ್ಯದಲ್ಲಿ ಗೆಲುವಿನ ಮೂಲಕ ಈ ಆವೃತ್ತಿ ಆರಂಭಿಸಲು ಸಿದ್ಧರಾಗಿದ್ದಾರೆ.
ಟ್ರಿನಿಡಾಡ್‌ನ ಬ್ರ್ಯಾನ್ ಲಾರಾ ಸ್ಟೇಡಿಯಮ್‌ನಲ್ಲಿ ಇಂದಿನ ಈ ಪಮದ್ಯವೂ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ನಡೆಯಲಿದ್ದು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ 2 ಹಾಗೂ ಸ್ಟಾರ್ ಸ್ಫೊರ್ಟ್ಸ್ 2 ಹೆಚ್‌ಡಿನಲ್ಲಿ ಪಂದ್ಯ ನೇರ ಪ್ರಸಾರವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications