For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020: ಸೇಂಟ್ ಕಿಟ್ಸ್‌ಗೆ ಬಾರ್ಬಡೋಸ್ ಟ್ರಿಡೆಂಟ್ಸ್ ಮತ್ತೊಂದು ಸವಾಲು

Cpl 2020: Todays Match-St Kitts And Nevis Patriots Vs Barbados Tridents

ಸಿಪಿಎಲ್‌ನ 11ನೇ ಪಂದ್ಯ ಇಂದು ಟ್ರಿನಿಡಾಡ್‌ನ ಕ್ವೀನ್ಸ್ ಓವಲ್ ಪಾರ್ಕ್‌ನಲ್ಲಿ ನಡೆಯಲಿದೆ. ಈ ಟೂರ್ನಿಯ ಉದ್ಘಾಟನಾ ದಿನ ಮುಖಾಮುಖಿಯಾಗಿದ್ದ ಸೇಂಟ್ ಕಿಟ್ಸ್ & ನೇವೀಸ್ ಪೇಟ್ರೋಟ್ಸ್ ತಂಡ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ.

ಈ ಎರಡೂ ತಂಡಗಳು ಈ ವರೆಗಿನ ಪಂದ್ಯದಲ್ಲಿ ನೀರಸ ಪ್ರದರ್ಶನವನ್ನು ನೀಡಿ ಅಂಕ ಪಟ್ಟಿಯ ಕೊನೆಯ ಎರಡು ಸ್ಥಾನದಲ್ಲಿದೆ. ಸೇಂಟ್ ಕಿಟ್ಸ್ ತಂಡ ಆಡಿದ 3 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಕಾಣಲು ಸಾಧ್ಯವಾಗದಿದ್ದರೆ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡ ಮೊದಲ ಪಂದ್ಯದಲ್ಲಿ ಸೇಂಟ್ ಕಿಟ್ಸ್ ವಿರುದ್ಧವೇ ಗಳಿಸಿದ ಗೆಲುವನ್ನು ಮಾತ್ರವೇ ಖಾತೆಗೆ ಹಾಕಿ ಕೊಂಡಿದೆ.

ಹೀಗಾಗಿ ಎರಡೂ ತಂಡಗಳಿಗೂ ಇಂದಿನ ಪಂದ್ಯ ಭಾರೀ ಮುಖ್ಯವಾಗಿದೆ. ಸೇಂಟ್ ಕಿಟ್ಸ್ & ನೇವೀಸ್ ಪೇಟ್ರಿಯಾಟ್ಸ ತಂಡ ಟೂರ್ನಿಯಲ್ಲಿ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ ತಂಡವೆನಿಸಿದೆ. ಕ್ರಿಸ್ ಲೀನ್, ಎವಿನ್ ಲಿವೀಸ್, ಬೆನ್ ಸಂಕ್ ಅವರಂತಾ ಸ್ಫೊಟಕ ಬ್ಯಾಟ್ಸ್‌ಮನ್‌ಗಳು ಇದ್ದರೂ ತಂಡದ ನೈಜ ಬ್ಯಾಟಿಂಗ್ ಪ್ರದರ್ಶನ ಈವರೆಗೆ ಪ್ರದರ್ಶನವಾಗಿಲ್ಲ.

ಸಂಭಾವ್ಯ ತಂಡ ಹೀಗಿದೆ:
ಬಾರ್ಬಡೋಸ್ ಟ್ರೈಡೆಂಟ್ಸ್: ಜೇಸನ್ ಹೋಲ್ಡರ್ (ನಾಯಕ), ಜಾನ್ಸನ್ ಚಾರ್ಲ್ಸ್, ಶೈ ಹೋಪ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಕೋರೆ ಆಂಡರ್ಸನ್, ಜೊನಾಥನ್ ಕಾರ್ಟರ್, ಆಶ್ಲೇ ನರ್ಸ್, ರಶೀದ್ ಖಾನ್, ಮಿಚೆಲ್ ಸ್ಯಾಂಟ್ನರ್, ರೇಮನ್ ರೀಫರ್, ಹೇಡನ್ ವಾಲ್ಷ್

ಸೇಂಟ್ ಕಿಟ್ಸ್ & ನೆವಿಸ್ ಪೇಟ್ರಿಯಾಟ್ಸ್: ರಾಯದ್ ಎಮ್ರಿಟ್ (ನಾಯಕ), ಕ್ರಿಸ್ ಲಿನ್, ಎವಿನ್ ಲೂಯಿಸ್, ಡೆನೇಶ್ ರಾಮ್ಡಿನ್ (ವಿಕೆಟ್ ಕೀಪರ್), ಬೆನ್ ಡಂಕ್, ಜೋಶುವಾ ಡಾ ಸಿಲ್ವಾ, ಕೀರನ್ ಪೊವೆಲ್, ಸೊಹೈಲ್ ತನ್ವೀರ್, ಶೆಲ್ಡನ್ ಕೊಟ್ರೆಲ್, ಇಶ್ ಸೋಧಿ, ಜಾನ್-ರಸ್ ಜಾಗೇಸರ್

Story first published: Tuesday, August 25, 2020, 16:26 [IST]
Other articles published on Aug 25, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+