For Quick Alerts
ALLOW NOTIFICATIONS  
For Daily Alerts
 

ಪೊಲಾರ್ಡ್ ಆಲ್ ರೌಂಡರ್ ಆಟಕ್ಕೆ ಶರಣಾದ ಸೇಂಟ್ ಲೂಸಿಯಾ ಝೌಕ್ಸ್

CPL 2020: Trinbago Knight Riders beat St Lucia Zouks

ಪೋರ್ಟ್ ಆಫ್ ಸ್ಪೇನ್: ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೋಲೇ ಇಲ್ಲದ ತಂಡವಾಗಿ ಕೀರನ್ ಪೊಲಾರ್ಡ್ ನಾಯಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಮುನ್ನಡೆದಿದೆ. ಶನಿವಾರ (ಸೆಪ್ಟೆಂಬರ್ 6) ನಡೆದ 27ನೇ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡ, ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ 23 ರನ್ ಜಯ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ, ಲೆಂಡ್ಲ್ ಸಿಮನ್ಸ್ 8, ಟಿಯಾನ್ ವೆಬ್‌ಸ್ಟರ್ 20, ಡ್ಯಾರೆನ್ ಬ್ರಾವೋ 50 (42 ಎಸೆತ), ಟಿಮ್ ಸೀಫರ್ಟ್ 33, ಕೀರನ್ ಪೊಲಾರ್ಡ್ 42 (21) ರನ್‌ನೊಂದಿಗೆ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಪೇರಿಸಿತು.

ಗುರಿ ಬೆನ್ನಟ್ಟಿದ ಸೇಂಟ್ ಲೂಸಿಯಾ ಝೌಕ್ಸ್, ಕಿಮಾನಿ ಮೆಲಿಯಸ್ 12, ಮಾರ್ಕ್ ಡಯಾಲ್ 40, ಆಂಡ್ರೆ ಫ್ಲೆಚರ್ 42, ನಜೀಬುಲ್ಲಾ ಝದ್ರನ್ 12, ಮೊಹಮ್ಮದ್ ನಬಿ 17 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 152 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಟ್ರಿನ್‌ಬಾಗೊ ನೈಟ್ ರೈಡರ್ಸ್ ಇನ್ನಿಂಗ್ಸ್‌ನಲ್ಲಿ ಸೇಂಟ್ ಲೂಸಿಯಾ ಝೌಕ್ಸ್‌ನ ಸ್ಕಾಟ್ ಕುಗ್ಗೆಲೀಜ್ನ್ 2 ವಿಕೆಟ್‌ ಪಡೆದು ಗಮನ ಸೆಳೆದರೆ. ಸೇಂಟ್ ಲೂಸಿಯಾ ಇನ್ನಿಂಗ್ಸ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ಕೀರನ್ ಪೊಲಾರ್ಡ್ 3, ಡ್ವೇನ್ ಬ್ರಾವೋ 2, ಜೇಡನ್ ಸೀಲ್ಸ್ 2 ವಿಕೆಟ್‌ ಉರುಳಿಸಿ ಮಿಂಚಿದರು. ಕೀರನ್ ಪೊಲಾರ್ಡ್ ಪಂದ್ಯಶ್ರೇಷ್ಠರೆನಿಸಿದರು.

Story first published: Monday, September 7, 2020, 10:06 [IST]
Other articles published on Sep 7, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+