ಸಿಪಿಎಲ್ 2020: ಟ್ರಿಡೆಂಟ್ಸ್ ವಿರುದ್ಧ ಲೋ ಸ್ಕೋರಿಂಗ್ ಥ್ರಿಲ್ಲರ್ ಗೆದ್ಧ ಝೌಕ್ಸ್

ಸಿಪಿಎಲ್‌ನ 8ನೇ ಆವೃತ್ತಿಯ ಪಂದ್ಯಗಳು ಬೌಲಿಂಗ್ ವಿಭಾಗದ ಮೈಲುಗೈಯೊಂದಿಗೆ ಸಾಕಷ್ಟು ಪೈಪೋಟಿಯಿಂದ ಸಾಗುತ್ತಿದೆ. ಸಿಪಿಎಲ್‌ನ 19ನೇ ಪಂದ್ಯವೂ ಇದಕ್ಕೆ ಸಾಕ್ಷಿಯಾಗಿತ್ತು. ಆದರೆ ಇಲ್ಲಿ ಟೂರ್ನಿ ಇತಿಹಾಸದ ಅತ್ಯಂತ ಕಡಿಮೆ ಮೊತ್ತವನ್ನು ರಕ್ಷಿಸಿದ ಹೆಗ್ಗಳಿಕೆಗೆ ಸೇಂಡ್ ಲೂಸಿಯಾ ಝೌಕ್ಸ್ ತಂಡ ಪಾತ್ರವಾಗಿದೆ.
ಬಾರ್ಬಡೋಸ್ ಟ್ರಿಡೆಂಟ್ಸ್ ವಿರುದ್ಧದ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ತಂಡ ಮೊದಲಿಗೆ ಬ್ಯಾಟಿಂಗ್‌ಗೆ ಇಳಿದು ಗಳಿಸಿದ್ದು ಕೇವಲ 92 ರನ್. 18 ಓವರ್‌ಗಳಲ್ಲೇ ಝೌಕ್ಸ್ ತಂಡದ ಎಲ್ಲಾ ಆಟಗಾರರು ಔಟ್ಆಗಿ ಇನ್ನಿಂಗ್ಸ್ ಮುಕ್ತಾಯ ಮಾಡಿಕೊಂಡರು. ಈ ಮೊತ್ತವನ್ನು ಝೌಕ್ಸ್ ತಂಡ ರಕ್ಷಿಸಿಕೊಳ್ಳಲಿದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈ ಸಾಧನೆಯನ್ನು ಝೌಕ್ಸ್ ಬೌಲರ್‌ಗಳು ಮಾಡಿ ಬೀಗಿದ್ದರು.
ಸೇಂಟ್ ಲೂಸಿಯಾ ಝೌಕ್ಸ್ ತಂಡ ನೀಡಿದ ಸುಲಭ ಗುರಿಯನ್ನು ಬೆನ್ನತ್ತಿದ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡ ಡಿಸೆಂಟ್ ಆರಂಭ ಪಡೆಯಿತಾದರೂ ಬಳಿಕ ಯಾವ ಆಟಗಾರನೂ ತಂಡಕ್ಕೆ ನಿರೀಕ್ಷಿತ ಕೊಡುಗೆಯನ್ನು ನೀಡಲು ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ ಜಾಸನ್ ಚಾರ್ಲ್ಸ್ 39 ರನ್ ಗಳಿಸಿದ್ದೇ ತಂಡದ ಹೈಯೆಸ್ಟ್ ಸ್ಕೋರ್ ಎನಿಸಿತು.
ಸೇಂಟ್ ಲೂಸಿಯಾ ನೀಡಿದ ಗುರಿ ಬೆನ್ನಟ್ಟಿದ ಬಾರ್ಬಡೋಸ್ ಮೊದಕ ಹತ್ತು ಓವರ್‌ಗಳಲ್ಲಿ 52 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವು ಸಾಧಿಸುವ ಲೆಕ್ಕಾಚಾರವನ್ನು ಹಾಕಿಕೊಂಡಿತ್ತು. ಆದರೆ ಅನುಭವಿ ನಾಯಕ ಡ್ಯಾರೆನ್ ಸಮಿ ಬೌಲಿಂಗ್ ತಂತ್ರಗಾರಿಕೆಗೆ ಟ್ರಿಡೆಂಟ್ ಆಘಾತವನ್ನು ಅನುಭವಿಸಿತು. ಅಂತಿಮ ಹತ್ತು ಓವರ್‌ಗಳನ್ನು ಸ್ಪಿನ್ನರ್‌ಗಳ ಕೈಯ್ಯಲ್ಲೇ ಮಾಡಿಸಿದ ಸ್ಯಾಮಿ 3 ವಿಕೆಟ್ ಗಳ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಈ ಗೆಲುವಿನ ಮೂಲಕ ಝೌಕ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದಿವರಿದಿದೆ. ಆಡಿದ 7 ಪಂದ್ಯಗಳಲ್ಲಿ 5 ಗೆಲುವನ್ನು ಸಾಧಿಸಿದೆ. ಆದರೆ ಬಾರ್ಬಡೋಸ್ ತಂಡ ಗೆಲ್ಲಬಹುದಾಗಿದ್ದ ಅದ್ಭುತ ಅವಕಾಶವನ್ನು ಕಳೆದುಕೊಂಡು ಕಳಪೆ ಸಾಧನೆಯನ್ನು ಮುಂದುವರಿಸಿದೆ. 7 ಪಂದ್ಯಗಳನ್ನು ಆಡಿರುವ ಬಾರ್ಬಡೋಸ್ ತಂಡ 5 ಸೋಲು ಕಂಡು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications