Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೊಮಿನಿಕ್ ಡ್ರೇಕ್ಸ್ ಅಬ್ಬರ, ನೇವಿಸ್ ಪ್ಯಾಟ್ರಿಯೋಟ್ಸ್ ಸಿಪಿಎಲ್ ಚಾಂಪಿಯನ್ಸ್

CPL 2021, Final: Saint Lucia Kings vs St Kitts and Nevis Patriots

ಸೇಂಟ್ ಕೈಟ್ಸ್: ಸೇಂಟ್ ಕೈಟ್ಸ್‌ನ ಬಾಸೆಟೆರೆಯಲ್ಲಿರುವ ವಾರ್ನರ್ ಪಾರ್ಕ್‌ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 15) ನಡೆದ ಕೆರಿಬಿಯನ್ ಪ್ರೀಲಿಯರ್ ಲೀಗ್‌ (ಸಿಪಿಎಲ್) ಫೈನಲ್ ಪಂದ್ಯದಲ್ಲಿ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ತಂಡ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ. ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ 3 ವಿಕೆಟ್‌ ಜಯ ಗಳಿಸಿರುವ ನೇವಿಸ್ ಪ್ಯಾಟ್ರಿಯೋಟ್ಸ್ ಟ್ರೋಫಿ ಯಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಸೇಂಟ್ ಲೂಸಿಯಾ ಕಿಂಗ್ಸ್, ಆ್ಯಂಡ್ರೆ ಫ್ಲೆಚರ್ 11, ರಹಕೀಮ್ ಕಾರ್ನ್‌ವಾಲ್ 43, ರೋಸ್ಟನ್ ಚೇಸ್ 43, ಟಿಮ್ ಡೇವಿಡ್ 10, ಕೀಮೋ ಪೌಲ್ 39, ವಹಾಬ್ ರಿಯಾಝ್ 3 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್‌ ಕಳೆದು 159 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ತಂಡ, ಎವಿನ್ ಲೆವಿಸ್ 6, ಜೋಶುವಾ ಡ ಸಿಲ್ವಾ 37, ನಾಯಕ ಡ್ವೇನ್ ಬ್ರಾವೋ 8, ಡೊಮಿನಿಕ್ ಡ್ರೇಕ್ಸ್ ಅಜೇಯ 48 (24 ಎಸೆತ), ಫ್ಯಾಬಿಯೆನ್ ಅಲೆನ್ 20, ಶೆಲ್ಡನ್ ಕಾಟ್ರೆಲ್ 5 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 160 ರನ್ ಗಳಿಸಿ ಗೆಲುವಿನ ನಗು ಬೀರಿತು.

ಸೇಂಟ್ ಲೂಸಿಯಾ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ನ ಫ್ಯಾಬಿಯೆನ್ ಅಲೆನ್ 1, ಫವಾದ್ ಅಹ್ಮದ್ 2, ನಸೀಮ್ ಶಾ 2, ಡೊಮಿನಿಕ್ ಡ್ರೇಕ್ಸ್ 1, ಜನ್ ರಸ್ ಜಗ್ಗೆಸರ್ 1 ವಿಕೆಟ್ ಪಡೆದರೆ, ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ಇನ್ನಿಂಗ್ಸ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್‌ನ ರೋಸ್ಟನ್ ಚೇಸ್ 1, ವಹಾಬ್ ರಿಯಾಝ್ 2, ಅಲ್ಝಾರಿ ಜೋಸೆಫ್ 1, ಡೇವಿಡ್ ವೆಯಿಸ್ 1, ಕೆಸ್ರಿಕ್ ವಿಲಿಯಮ್ಸ್ 1 ವಿಕೆಟ್‌ನಿಂದ ಗಮನ ಸೆಳೆದರು. ಡೊಮಿನಿಕ್ ಡ್ರೇಕ್ಸ್ ಪಂದ್ಯಶ್ರೇಷ್ಠರೆನಿಸಿದರು.

Story first published: Thursday, September 16, 2021, 1:02 [IST]
Other articles published on Sep 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+