
ಸಿಪಿಎಲ್‌ನ ಈ ಬಾರಿಯ ಆವೃತ್ತಿ ಮತ್ತೊಂದು ಲೋ ಸ್ಕೋರಿಂಗ್ ಪಂದ್ಯಕ್ಕೆ ಸಾಕ್ಷಿಯಾಯಿತು. ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಸಿಪಿಎಲ್‌ನ 12ನೇ ಪಂದ್ಯದಲ್ಲಿ ಗಯಾನ ಅಮೆಜಾನ್ ವಾರಿಯರ್ಸ್ ಹಾಗೂ ಜಮೈಕಾ ತಲ್ಲವಾಸ್ ಮುಖಾಮುಖಿಯಾಗಿತ್ತು. ಇದರಲ್ಲಿ ಜಮೈಕಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇದೇ ಆವೃತ್ತಿಯಲ್ಲಿ ಈ ಹಿಂದೆ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಗಯಾನಾ ಅಮೆಜಾನ್ ವಾರಿಯರ್ಸ್ ಜಮೈಕಾ ತಲ್ಲವಾಸ್ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಆದರೆ ಎರಡನೇ ಮುಖಾಮುಖಿಯಲ್ಲಿ ಜಮೈಕಾ ತಿರುಗಿಬಿದ್ದಿದ್ದು ತನ್ನ 2ನೇ ಗೆಲುವನ್ನು ದಾಖಲಿಸಿಕೊಂಡಿದೆ.
ತಂಡದ ಸ್ಕೋರ್ ಪಟ್ಟಿ ಹೀಗಿದೆ:
ಈ ಪಂದ್ಯವನ್ನು ಜಮೈಕಾ ತಲ್ಲವಾಸ್ ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪಂದ್ಯದ ಆರಮಭದಿಂದಲೂ ಯಶಸ್ವಿಯಾಗಿತ್ತು. ಮೊದಲು ಬ್ಯಾಟಿಂಗ್ ಮಾಡಲಿಳಿದ ಗಯಾನ ತಂಡಕ್ಕೆ ಆರಂಭಿಕ ಎಸೆತದಲ್ಲೇ ಶಾಕ್ ನೀಡಿತ್ತು. ಮೊದಲ ಬಾಲ್‌ಗೆ ಬ್ರೆಂಡನ್ ಕಿಂಗ್ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಆರಂಭವಾದ ಕುಸಿತ ಮುಂದುವರಿಯುತ್ತಲೇ ಹೋಯಿತು. ರಾಸ್ ಟೇಲರ್(23 ರನ್) ಪೂರನ್(15) ನವೀನ್ ಉಲ್ ಹಕ್ ಹೋರತು ಪಡಿಸಿ ಉಳಿದ ಎಲ್ಲಾ ಆಟಗಾರರು ಡಬಲ್ ಡಿಜಿಟ್ ತಲುಪಲೂ ಸಾಧ್ಯವಾಗಲಿಲ್ಲ.
ಅಂತಿಮವಾಗಿ ಗಯಾನ ತಂಡ ನಿಗದಿತ 20 ಓವರ್‌ಗಳಲ್ಲಿ 108 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇದನ್ನು ಬೆನ್ನತ್ತಿದ ಜಮೈಕಾ ತಲ್ಲವಾಸ್ ತಂಡ ಸುಲಭವಾಗಿ ಗೆಲವನ್ನು ಕಂಡಿತು. ಈ ಮೊತ್ತವನ್ನು ಇನ್ನೂ 2 ಓವರ್‌ಗಳು ಉಳಿದಿರುವಂತೆಯೇ ಜಮೈಕಾ ಗುರಿ ತಲುಪಿತು.
ಜಮೈಕಾ ತಂಡದ ಪರವಾಗಿ ಎಡ್ವರ್ಸ್ ಹಾಗೂ ಮುಜೀಬ್ ಬೌಲಿಂಗ್ ನಲ್ಲಿ ಮಿಂಚಿದರು. ಇಬ್ಬರೂ ತಕಲಾ ಮೂರು ವಿಕೆಟ್ ಕಿತ್ತು ಗಯಾನಾ ದಾಂಡಿಗರ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾದರು. ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ತಂಡಕ್ಕೆ ಅಗತ್ಯವಿದ್ದ ಗೆಲುವನ್ನು ಸಾಧಿಸುವಲ್ಲಿ ಜಮೈಕಾ ವಾರಿಯರ್ಸ್ ಯಶಸ್ವಿಯಾಗಿದೆ.