ಸಿಪಿಎಲ್ 2020: ನೈಟ್ ರೈಡರ್ಸ್, ಗಯಾನಾ ವಾರಿಯರ್ಸ್ ಗೆಲುವಿನ ಓಟ

ಸಿಪಿಎಲ್ ಅಂಗಳದಲ್ಲಿ ಸೆಪ್ಟಂಬರ್ 1ರಂದು 2 ಪಂದ್ಯಗಳು ನಡೆದಿದ್ದು ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಹಾಗೂ ಗಯಾನಾ ಅಮೆಜಾನ್ ವಾರಿಯರ್ಸ್ ತಂಡಗಳು ಗೆಲುವನ್ನು ದಾಖಲಿಸಿದೆ. ಟಿಕೆಆರ್ ವಿರುದ್ಧ ಜಮೈಕಾ ತಲ್ಲವಾಸ್ ಸೋಲು ಕಂಡರೆ ಹಾಲಿ ಚಾಂಪಿಯನ್ ಬಾರ್ಬಡೋಸ್ ಟ್ರಿಡೆಂಟ್ಸ್ ಗಯಾನಾ ತಂಡಕ್ಕೆ ಶರಣಾಯಿತು.
ಮೊದಲ ಪಂದ್ಯದಲ್ಲಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಮೊದಲು ಬ್ಯಾಟಿಂಗ್‌ಗೆ ಇಳಿದು 184 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಜಮೈಕಾ ತಲ್ಲವಾಸ್ ತಂಡ 165 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಟಿಕೆಆರ್ ತಂಡ 19 ರನ್‌ಗಳ ಭರ್ಜರಿ ಜಯ ದಾಖಲಿಸಿತು.
ಟಿಕೆಆರ್ ಪರವಾಗಿ ಬ್ಯಾಟಿಂಗ್‌ನಲ್ಲಿ ಕಾಲಿನ್ ಮನ್ರೋ (65ರನ್ 54 ಎಸೆತ) ಮಿಂಚಿದರೆ ನಾಯಕ ಪೊಲಾರ್ಡ್(33 ರನ್ 16 ಎಸೆತ) ಅಂತಿಮ ಹಂತದಲ್ಲಿ ಅಬ್ಬರಿಸಿದರು. ಬೌಲಿಂಗ್‌ನಲ್ಲಿ ಟಿಕೆಆರ್ ಪರವಾಗಿ ಫಾವದ್ ಅಹ್ಮದ್ 2 ವಿಕೆಟ್ ಕಿತ್ತರೆ ಸುನಿಲ್ ನರೈನ್ ರನ್ ನಿಯಂತ್ರಣ ಮಾಡಿ ಸೈ ಎನಿಸಿಕೊಂಡರು. ಜಮೈಕಾ ಪರವಾಗಿ ರಸ್ಸೆಲ್ ಅರ್ಧ ಶತಕ(50ರನ್ 23 ಎಸೆತ) ಸಿಡಿಸಿ ಮಿಂಚಿದದಾದರೂ ಗೆಲುವು ಸಾಧ್ಯವಾಗಲಿಲ್ಲ.
ಇನ್ನು ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಬಾರ್ಬಡೋಸ್ ಟ್ರಿಡೆಂಟ್ಸ್ ನಡುವಿನ ಪಂದ್ಯ ಲೋ ಸ್ಕೋರಿಂಗ್ ಪಂದ್ಯ ವೆನಿಸಿತು. ಈ ಪಂದ್ಯದಲ್ಲೂ ಚಾಂಪಿಯನ್ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡದ ಬಹುತೇಕ ಎಲ್ಲಾ ದಾಂಡಿಗರು ವೈಫಲ್ಯವನ್ನು ಅನುಭವಿಸಿದರು. ಕೇವಲ 92 ರನ್ ಗಳಿಸಲು ಮಾಧ್ಯವೇ ಹಾಲಿ ಚಾಂಪಿಯನ್ನರಿಗೆ ಸಾಧ್ಯವಾಯಿತು. ಇದನ್ನು 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು ಅಮೆಜಾನ್ ವಾರಿಯರ್ಸ್ ತಂಡ.
ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿ ಅಜೇಯವಾಗಿರುವ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲೇ ಮುಂದಿವರಿದಿದೆ. ಗಯಾನಾ ಅಮೆಜಾನ್ ವಾರಿಯರ್ಸ್ 8 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ 3ನೇ ಸ್ಥಾನದಲ್ಲಿದೆ. ಸೋತರೂ ಜಮೈಕಾ ತಲ್ಲವಾಸ್ 4ನೇ ಸ್ಥಾನದಲ್ಲೇ ಮುಂದಿವರಿದಿದ್ದು ಬಾರ್ಡೋಸ್ ಟ್ರಿಡೆಂಟ್ಸ್ 5ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications