ಬಾಕ್ಸಿಂಗ್ ಡೇ ಟೆಸ್ಟ್: ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಸೀಸ್
ಮೆಲ್ಬೋರ್ನ್, ಡಿ.29: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪೇರಿಸಿದ ಬೃಹತ್ ಮೊತ್ತಕ್ಕೆ ತಕ್ಕ ಉತ್ತರ ನೀಡಲು ಭಾರತ ವಿಫಲವಾಗಿದೆ. ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ 465 ಸ್ಕೋರಿಗೆ ಸರ್ವಪತನ ಕಂಡಿತು. ಆಸೀಸ್ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಪಡೆದಿದ್ದು ಈಗಾಗಲೇ 200ರನ್ ಗೂ ಅಧಿಕ ಮುನ್ನಡೆ ಪಡೆದು ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
ನಾಲ್ಕನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 326 ರನ್ ಮುನ್ನಡೆ ಪಡೆದುಕೊಂಡಿದೆ. ಮಾರ್ಷ್ 62 ರನ್ ಗಳಿಸಿ ಔಟಾಗದೆ ಉಳಿದರೆ ಹ್ಯಾರೀಸ್ 8 ರನ್ ಗಳಿಸಿದ್ದರು. 261/7 ಸ್ಕೋರ್ ಮಾಡಿರುವ ಆಸೀಸ್ ಸದ್ಯಕ್ಕೆ ಡಿಕ್ಲೇರ್ ಮಾಡುವ ಸೂಚನೆ ತೋರಿಲ್ಲ.
ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಆಸೀಸ್, 155 ರನ್ ಮುನ್ನಡೆ ಪಡೆದುಕೊಂಡಿದೆ. ಸ್ಕೋರ್ 36 ಓವರ್ ಗಳಲ್ಲಿ 143/3 ಆಗಿದ್ದು 208 ರನ್ ಮುನ್ನಡೆ ಸಿಕ್ಕಿದೆ.

ನಾಯಕ ಸ್ಮಿತ್ 14, ಶೇನ್ ವಾಟ್ಸನ್ 17 ರನ್ ಗಳಿಸಿ ಔಟಾಗಿದ್ದರೆ, ಡೇವಿಡ್ ವಾರ್ನರ್ ಬಿರುಸಿನ 40 ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ.
ಭಾರತದ ಇನ್ನಿಂಗ್ಸ್: ವಿರಾಟ್ ಕೊಹ್ಲಿ 169 ರನ್ ಅಜಿಂಕ್ಯ ರಹಾನೆ 147 ರನ್ ನೆರವಿನಿಂದ ಭಾರತ 465 ರನ್ನಿಗೆ ಆಲೌಟ್ ಆಯಿತು. ಹ್ಯಾರೀಸ್ 4, ಮಿಚೆಲ್ ಜಾನ್ಸನ್ ಕೊನೆ ಗಳಿಗೆಯಲ್ಲಿ 3, ಲಿಯಾನ್ 2 ವಾಟ್ಸನ್ 1 ವಿಕೆಟ್ ಕಿತ್ತರು. ಕೆಎಲ್ ರಾಹುಲ್ ಮೊದಲ ಬಾರಿಗೆ ಟೀಂ ಇಂಡಿಯಾ ಆಟಗಾರನಾಗಿ ಕಣಕ್ಕಿಳಿದು ಕೇವಲ 3 ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. ಧೋನಿ 11 ರನ್ ಗಳಿಸಿ ಬೇಗನೇ ಪೆವಿಲಿಯನ್ ಹಾದಿ ಹಿಡಿದ ಬೆನ್ನಲ್ಲೇ ಅಶ್ವಿನ್, ಕೊಹ್ಲಿ ವಿಕೆಟ್ ಒಪ್ಪಿಸಿದ್ದು ಆಸೀಸ್ ಮೇಲುಗೈಗೆ ಕಾರಣವಾಯಿತು.
Story first published: Wednesday, January 3, 2018, 10:12 [IST]
Other articles published on Jan 3, 2018
Read in English: Australia in control with 326-run lead
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications