For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಆಟಗಾರ್ತಿಯರಿಗೆ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಭರ್ಜರಿ ಗಿಫ್ಟ್‌

Cricket Australia announces 12 months of paid maternity leave

ಸಿಡ್ನಿ, ಅಕ್ಟೋಬರ್ 11: ಪೋಷಕರ ರಜೆ ನೀತಿ ನಿಟ್ಟಿನಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವೃತ್ತಿಪರ ಕ್ರಿಕೆಟರ್‌ಗಳಿಗೆ ಪೋಷಕರ ಜವಾಬ್ದಾರಿ ನಿರ್ವಹಿಸಲು ಅನುಕೂಲವಾಗುವಂತಹ ನಿರ್ಧಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಮುಖ್ಯವಾಗಿ ಆಸೀಸ್ ಆಟಗಾರ್ತಿಯರಿಗೆ ಈ ನೀತಿ ಖುಷಿ ನೀಡಿದೆ.

ಇನ್ನು ಮುಂದೆ ಮಗುವಿಗೆ ಜನ್ಮ ನೀಡುವ ಅಥವಾ ಮಗುವನ್ನು ದತ್ತು ಪಡೆದ ಕ್ರಿಕೆಟರ್‌ 12 ತಿಂಗಳ ಕಾಲ ಸಂಬಳ ಸಹಿತ ರಜೆಯನ್ನು ಅನುಭವಿಸಹುದು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಘೋಷಿಸಿದೆ. ಆಟಗಾರರ ಒಪ್ಪಂದ ವ್ಯವಸ್ಥೆಗಳಿಗಾನುಸಾರ ಈ ರಜೆ ನೀತಿ ಮುಂದಿನ ವರ್ಷದಿಂದ ಅನ್ವಯವಾಗಲಿದೆ.

ಗರ್ಭಿಣಿ ಅಥವಾ ಮಗು ದತ್ತು ಪಡೆದುಕೊಳ್ಳುವ ಆಟಗಾರ್ತಿಯ ಸಂಗಾತಿಗೆ 3 ವಾರಗಳ ಸಂಬಳ ಸಹಿತ ರಜೆ ಸೌಲಭ್ಯ ದೊರೆಯಲಿದೆ. ಅಲ್ಲದೆ ಮಗುವಿಗೆ 4 ವರ್ಷ ವಯಸ್ಸಾಗುವವರೆಗೆ ಮಗುವಿನ ಮೊದಲ ಆರೈಕೆದಾರ ಮತ್ತು ಮಗುವಿಗೆ ವಿಮಾನಯಾನ ಸಹಿತ ಪ್ರಯಾಣ ಅನುಕೂಲ, ತಂಗುಲು ವ್ಯವಸ್ಥೆ, ಇನ್ನಿತರ ಪ್ರಯಾಣ ಖರ್ಚುಗಳ ಸೌಲಭ್ಯಗಳು ದೊರೆಯಲಿದೆ.

'ಕೆಲಸದ ಭದ್ರತೆಯ ಬಗ್ಗೆ ಯೋಚಿಸುವ ಕ್ರಿಕೆಟರ್ ಪಾಲಿಗೆ ಈ ನೀತಿ ಗೇಮ್ ಚೇಂಜರ್ ಅನ್ನಿಸಲಿದೆ,' ಎಂದು ಆಸೀಸ್ ಆಟಗಾರ್ತಿ ಅಲಿಸಾ ಹೀಲಿ ಹೇಳಿದ್ದಾರೆ. ಹೊಸ ಹೆರಿಗೆ ರಜೆ ನೀತಿ ಜುಲೈ 1ರಿಂದ ಅನ್ವಯಿಸಲಿದ್ದು, ಆಸ್ಟ್ರೇಲಿಯಾದ ರಾಜ್ಯ, ರಾಷ್ಟ್ರೀಯ ಅಥವಾ ಬಿಗ್‌ಬ್ಯಾಷ್‌ ಒಪ್ಪಂದದಲ್ಲಿರುವ ಆಟಗಾರ್ತಿಯರಿಗೆ ಅನುಕೂಲ ಲಭಿಸಲಿದೆ.

Story first published: Friday, October 11, 2019, 11:01 [IST]
Other articles published on Oct 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+