Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ashes Test: ಆಶಸ್ 2025-26 ರ ವೇಳಾಪಟ್ಟಿ ಬಿಡುಗಡೆ: ಸರಣಿಯಲ್ಲಿ ಒಂದು ಹಗಲು ರಾತ್ರಿ ಟೆಸ್ಟ್‌

ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇಂದಿನಿಂದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ಈ ವೇಳೆ ಭಾರತ ಬಾರ್ಡರ್‌ ಗವಾಸ್ಕರ್ ಟ್ರೋಫಿಯನ್ನು ಆಡಲಿದೆ. ಈ ಸರಣಿ ಅದೆಷ್ಟು ಅಭಿಮಾನಿಗಳ ಚಿತ್ತವನ್ನು ಕದ್ದಿದೆಯೋ, ಅದಕ್ಕಿಂತಲೂ ಹೆಚ್ಚಿನ ಚಿತ್ತವನ್ನು ಆಷಸ್‌ ಕದಿದೆ. ಆಸ್ಟ್ರೇಲಿಯಾ ಮುಂದಿನ ವರ್ಷ ಆಯೋಜಿಸಲಿರುವ ಆಷಸ್‌ ಸರಣಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬುಧವಾರ ಕ್ರಿಕೆಟ್ ಆಸ್ಟ್ರೇಲಿಯಾ 2025-26ರ ಆಶಸ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಹೈವೋಲ್ಟೇಜ್‌ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಐದು ಪಂದ್ಯಗಳ ಆಶಸ್ ಸರಣಿಯ ಮುಂದಿನ ವರ್ಷ ನವೆಂಬರ್‌ 21 ರಿಂದ ಆರಂಭವಾಗಲಿದೆ. ಇನ್ನು ಎರಡನೇ ಟೆಸ್ಟ್‌ ಡಿಸೆಂಬರ್‌ 4 ರಿಂದ ಆರಂಭವಾಗಲಿದ್ದು, ಇದು ಡೇ ಆಂಡ್ ನೈಟ್ ಟೆಸ್ಟ್‌ ಆಗಿರಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

Cricket Australia Announces Ashes 2025-26 Schedule Day-Night Test at Gabba

ಐದು ಪಂದ್ಯಗಳ ಆಷಸ್ ಸರಣಿ

ಎರಡನೇ ಟೆಸ್ಟ್‌ ಪಂದ್ಯಕ್ಕೆ ಗಾಬಾ ಕ್ರಿಕೆಟ್‌ ಮೈದಾನ ಆತಿಥ್ಯ ವಹಿಸಲಿದೆ. ಎರಡನೇ ಟೆಸ್ಟ್ ಬಳಿಕ ಒಂದು ವಾರಗಳ ಬಿಡುವು ನೀಡಲಾಗಿದೆ. ಸರಣಿಯ ಮೂರನೇ ಪಂದ್ಯ ಆಡಿಲೇಡ್‌ನಲ್ಲಿ ಡಿಸೆಂಬರ್ 17ರಿಂದ ಆರಂಭವಾಗಲಿದೆ. ನಾಲ್ಕನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದ್ದು, ಡಿಸೆಂಬರ್‌ 26 ರಿಂದ ಈ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಬಾಕ್ಸಿಗ್ ಡೇ ಟೆಸ್ಟ್‌ ಎಂದು ಕರೆಯಲಾಗುತ್ತದೆ. ಸರಣಿಯ ಕೊನೆಯ ಹಾಗೂ ಐದನೇ ಪಂದ್ಯ ಜನೆವರಿ ನಾಲ್ಕರಿಂದ ಸಿಡ್ನಿಯಲ್ಲಿ ನಡೆಯಲಿದೆ.

ಬ್ರಿಸ್ಬೇನ್‌ ಅಂಗಳದಲ್ಲಿ ಸುಮಾರು ಸುಮಾರು 4 ದಶಕದ ಬಳಿಕ ಆಷನ್‌ ಪಂದ್ಯಗಳು ನಡೆಯಲಿವೆ. ಇನ್ನು 2032 ಒಲಿಂಪಿಕ್ಸ್‌ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಈ ಹಿನ್ನೆಲೆಯಲ್ಲಿ ಈ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಈ ಅಂಗಳದಲ್ಲಿ 2026ರ ಬಳಿಕ ಯಾವುದೇ ಪಂದ್ಯವನ್ನು ಆಯೋಜಿಸುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮೂಲಗಳಿಂದ ತಿಳಿದು ಬಂದಿದೆ. ಮುಂದಿನ ವರ್ಷ ನಡೆಯಲಿರುವ ಟೆಸ್ಟ್‌ ಈ ಅಂಗಳದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಆಗಿರಲಿದೆ. ಆ ಬಳಿಕ ಒಲಿಂಪಿಕ್ಸ್ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತವೆ. ಈಗಾಗಲೇ ಗಾಬಾ ಮೂರು ಬಾರಿ ಹಗಲು ರಾತ್ರಿ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಿದೆ. ಈಗ ಮತ್ತೊಂದು ಹಗಲು ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಈ ಅಂಗಳ ವೇದಿಕೆ ಕಲ್ಪಿಸಲಿದೆ.

ಆಷಸ್‌ ಸರಣಿಯ ವೇಳಾ ಪಟ್ಟಿ

ಪಂದ್ಯ, ಸ್ಥಳ, ದಿನಾಂಕ
ಮೊದಲ ಟೆಸ್ಟ್‌, ಪರ್ತ್, ನವೆಂಬರ್ 21-25
ಎರಡನೇ ಟೆಸ್ಟ್‌, ಗಬಾ, ಡಿಸೆಂಬರ್‌ 4-8
ಮೂರನೇ ಟೆಸ್ಟ್, ಆಡಿಲೇಡ್‌, ಡಿಸೆಂಬರ್ 17-21
ನಾಲ್ಕನೇ ಟೆಸ್ಟ್‌, ಮೆಲ್ಬೋರ್ನ್‌, ಡಿಸೆಂಬರ್‌ 26-30
ಐದನೇ ಟೆಸ್ಟ್‌, ಸಿಡ್ನಿ, ಜನವರಿ 4-8

Story first published: Wednesday, October 16, 2024, 13:30 [IST]
Other articles published on Oct 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+