ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯ ಸುಳಿವಿತ್ತ ಆಸ್ಟ್ರೇಲಿಯಾ

ಸಿಡ್ನಿ, ಏಪ್ರಿಲ್ 21: ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಕೆವಿನ್ ರೋಬರ್ಟ್ಸ್, ಈ ವರ್ಷಾಂತ್ಯಕ್ಕೆ ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಸುವ ಸುಳಿವಿತ್ತಿದ್ದಾರೆ. ಈಗಾಗಲೆ ತಿಳಿದಿರುವಂತೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿರುವ ಭಾರತ ಅಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ.
ಆದರೆ ವಿನ್ ರೋಬರ್ಟ್ಸ್ ನೀಡಿರುವ ಸುಳಿವಿನ ಪ್ರಕಾರ ಟೆಸ್ಟ್ ಸರಣಿಗೆ ಮತ್ತೊಂದು ಪಂದ್ಯ ಸೇರಲಿದೆ. ಅಂದರೆ ನಾಲ್ಕರ ಬದಲು ಐದು ಪಂದ್ಯಗಳು ಟೆಸ್ಟ್ ಸರಣಿಯಲ್ಲಿ ಇರಲಿವೆ. ಕೊರೊನಾವೈರಸ್ ಸೋಂಕು ಹತೋಟಿಗೆ ಬಂದರೆ ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ವಿರಾಟ್ ಕೊಹ್ಲಿ ಪಡೆ ನವೆಂಬರ್‌ನಲ್ಲಿ ಪ್ರಯಾಣ ಬೆಳೆಸಲಿದೆ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಜೊತೆ ತಮ್ಮ ಬಾಂಧವ್ಯ ಚೆನ್ನಾಗಿರುವುದಾಗಿ ಹೇಳಿರುವ ರೋಬರ್ಟ್ಸ್, ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯೋದು ಖಂಡಿತಾ ಸಾಧ್ಯವಿದೆ. ಆದರೆ ಈಗ ತಲೆದೂರಿರುವ ಈ ಬಿಕ್ಕಟ್ಟಿನ ಸಂದರ್ಭ ಕೊಂಚ ತಿಳಿಯಾಗಬೇಕಿದೆ ಎಂದಿದ್ದಾರೆ.
'ಮುಂಬರುವ ಸೀಸನ್‌ನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆದರೆ ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಬಾಂಧವ್ಯ ಚೆನ್ನಾಗಿರುವುದರಿಂದ ಇದು ನೆರವೇರಬಹುದು. ನಾವೀ ವಿಚಾರವನ್ನು ಎರಡೂ ಬೋರ್ಡ್‌ಗಳ ಮಧ್ಯೆ ಇಡಲಿದ್ದೇವೆ,' ಎಂದು ವೀಡಿಯೋ ಕಾಲ್‌ನಲ್ಲಿ ಮಾತನಾಡಿರುವ ರೋಬರ್ಟ್ಸ್ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications