For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ದ್ವಿತೀಯ ಹಂತದಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ಆಟಗಾರರ ಪಟ್ಟಿ

Cricket Australia clears top Australians for IPL return before T20 World Cup

ಮೆಲ್ಬರ್ನ್: ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ದ್ವಿತೀಯ ಹಂತದ ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯಾ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ದಾರಿ ಮಾಡಿ ಕೊಟ್ಟಿದೆ. ಹೀಗಾಗಿ ಮುಂಬರಲಿರುವ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಬಹುತೇಕ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸೆಪ್ಟೆಂಬರ್‌ನಿಂದ ಅಕ್ಟೋಬರ್‌ ವರೆಗೆ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲಿರುವ ಆಸ್ಟ್ರೇಲಿಯಾ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (ನಿರಾಕ್ಷೇಪಣಾ ಪತ್ರ) ನೀಡಿದೆ. ಜೊತೆಗೆ ಅಫ್ಘಾನಿಸ್ತಾನ ಮತ್ತು ವೆಸ್ಟ್‌ ಇಂಡೀಸ್ ನಡುವಿನ ತ್ರಿಕೋನ ಸರಣಿಯ ಬಗ್ಗೆ ಆಸ್ಟ್ರೇಲಿಯಾ ಮರು ಯೋಜನೆ ಹಾಕಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಐಪಿಎಲ್‌ನಿಂದಾಗಿ ಪರಿತಪಿಸಿದ್ದ ಆಸ್ಟ್ರೇಲಿಯಾ ಆಟಗಾರರು

ಐಪಿಎಲ್‌ನಿಂದಾಗಿ ಪರಿತಪಿಸಿದ್ದ ಆಸ್ಟ್ರೇಲಿಯಾ ಆಟಗಾರರು

ಕಳೆದ ಮೇ ತಿಂಗಳಲ್ಲಿ ಈ ಬಾರಿಯ ಐಪಿಎಲ್ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಐಪಿಎಲ್ ತಂಡಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಐಪಿಎಲ್ ನಿಲ್ಲಿಸಲೇಬೇಕಾದ ಅನಿವಾರ್ಯತೆಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಂದಿತ್ತು. ಈ ವೇಳೆ ಆಸ್ಟ್ರೇಲಿಯಾದ ಸುಮಾರು 40 ಮಂದಿ ಆಟಗಾರರು, ಕೋಚ್‌ಗಳು ಮತ್ತು ಸಿಬ್ಬಂದಿಗಳಿದ್ದ ತಂಡ ಸಮಸ್ಯೆ ಅನುಭವಿಸಿತ್ತು. ಯಾಕೆಂದರೆ ಕೋವಿಡ್ ಸೋಂಕು ಭಾರತದಲ್ಲಿ ತೀವ್ರಗೊಂಡಿದ್ದರಿಂದ ಭಾರತದಿಂದ ಬರುವ ಯಾವುದೇ ಪ್ರಯಾಣಿಕರಿಗೆ ಆಸ್ಟ್ರೇಲಿಯಾ ಪ್ರವೇಶ ನಿಷೇಧಿಸಿತ್ತು. ಹೀಗಾಗಿ ಆಸ್ಟ್ರೇಲಿಯಾ ಆಟಗಾರರು ಸ್ವತಃ ತಮ್ಮ ದೇಶಕ್ಕೇ ವಾಪಸ್ ಹೋಗಲಾರದೆ ಭಾರತದಿಂದ ಮಾಲ್ಡೀವ್ಸ್‌ಗೆ ತೆರಳಿ ಅಲ್ಲಿ ಸ್ವಲ್ಪ ದಿನ ತಂಗಿ, ಆಸ್ಟ್ರೇಲಿಯಾ ದೇಶ ಭಾರತದ ಪ್ರಯಾಣಿಕರಿಗೆ ನಿಷೇಧ ತೆರವುಗೊಳಿಸಿದ ಬಳಿಕ ಮಾಲ್ಡೀವ್ಸ್‌ನಿಂದ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಅಂತೂ ಐಪಿಎಲ್ ದೆಸೆಯಿಂದಾಗಿ ಆಸ್ಟ್ರೇಲಿಯಾ ಆಟಗಾರರು ಪರಿತಪಿಸಿದ್ದಂತೂ ಸುಳ್ಳಲ್ಲ.

ಆಸ್ಟ್ರೇಲಿಯಾದ ಕೆಲ ಆಟಗಾರರು ಆಡುತ್ತಿಲ್ಲ

ಆಸ್ಟ್ರೇಲಿಯಾದ ಕೆಲ ಆಟಗಾರರು ಆಡುತ್ತಿಲ್ಲ

ಐಪಿಎಲ್‌ನಲ್ಲಿ ಪಾಲ್ಗೊಂಡು ಕೆಲ ಆಸೀಸ್ ಆಟಗಾರರಿಗೆ ಕೋವಿಡ್-19 ಸೋಂಕು ಕೂಡ ತಗುಲಿತ್ತು. ಐಪಿಎಲ್‌ನಲ್ಲಿ ಭಾಗವಹಿಸಿ ಸಮಸ್ಯೆ ಅನುಭವಿಸಿದ್ದರಿಂದ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಆಟಗಾರರು ಹೆಚ್ಚಿನವರು ಆಡುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ವಿಶ್ವಕಪ್‌ ತಯಾರಿಗೆ ಐಪಿಎಲ್‌ ಕೂಡ ಸಹಾಯ ನೀಡುವುದರಿಂದ ಐಪಿಎಲ್‌ನಲ್ಲಿ ಆಟಗಾರರನ್ನು ಆಡಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಯೋಚಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಬಹುತೇಕ ಎಲ್ಲಾ ಆಟಗಾರರು ದ್ವಿತೀಯ ಹಂತದ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಆದರೆ ಬೆರಳೆಣಿಕೆಯ ಆಟಗಾರರು ಆಡುತ್ತಿಲ್ಲ. ಐಪಿಎಲ್ ಆರಂಭಿಕ ಹಂತದಲ್ಲಿ 29 ಪಂದ್ಯಗಳು ನಡೆದಿದ್ದವು. ಇನ್ನುಳಿದ 31 ಪಂದ್ಯಗಳು ಸೆಪ್ಟೆಂಬರ್ 19ರಿಂದ ಅಕ್ಟೋಬರ್‌ 15ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿವೆ.

Mohammed Siraj ಅವರತ್ತ ನೋಡಲು ಹೆದರಿದ Robinson | Oneindia Kannada
ಪ್ರಮುಖ ಆಟಗಾರರು ದ್ವಿತೀಯ ಹಂತದ ಐಪಿಎಲ್‌ನಲ್ಲೂ ಲಭ್ಯ

ಪ್ರಮುಖ ಆಟಗಾರರು ದ್ವಿತೀಯ ಹಂತದ ಐಪಿಎಲ್‌ನಲ್ಲೂ ಲಭ್ಯ

ಐಪಿಎಲ್‌ ಮೊದಲ ಹಂತದ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಆಟಗಾರರಲ್ಲಿ ಏಳು ಮಂದಿ ಆಟಗಾರರು ದ್ವಿತೀಯ ಹಂತದಲ್ಲೂ ಪಾಲ್ಗೊಳ್ಳುವ ಎಲ್ಲಾ ಸಾಧ್ಯತೆಯಿದೆ. ಡೇವಿಡ್ ವಾರ್ನರ್ (ಸನ್ ರೈಸರ್ಸ್ ಹೈದರಾಬಾದ್), ಗ್ಲೆನ್ ಮ್ಯಾಕ್ಸ್‌ವೆಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಸ್ಟೀವ್ ಸ್ಮಿತ್ (ಡೆಲ್ಲಿ ಕ್ಯಾಪಿಟಲ್ಸ್), ಮಾರ್ಕಸ್ ಸ್ಟೋಯ್ನಿಸ್ (ಡೆಲ್ಲಿ ಕ್ಯಾಪಿಟಲ್ಸ್), ಜಾಯೆ ರಿಚರ್ಡ್ಸನ್ (ಪಂಜಾಬ್ ಕಿಂಗ್ಸ್), ಕೇನ್ ರಿಚರ್ಡ್ಸನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಡೇನಿಯಲ್ ಸ್ಯಾಮ್ಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ದ್ವಿತೀಯ ಹಂತದ ಐಪಿಎಲ್‌ನಲ್ಲಿ ಆಡಲಿದ್ದಾರೆ. ಜೋಶ್ ಹ್ಯಾಝಲ್ವುಡ್, ರಿಲೆ ಮೆರೆಡಿತ್, ಡಾನ್ ಕ್ರಿಶ್ಚಿಯನ್, ಮೊಯಿಸ್ ಹೆನ್ರಿಕ್ಸ್, ಮಿಚ್ ಮಾರ್ಷ್, ಜೇಸನ್ ಬೆಹ್ರೆಂಡೋರ್ಫ್, ಆಡಮ್ ಜಂಪಾ, ಆಂಡ್ರ್ಯೂ ಟೈ, ನಾಥನ್ ಕೌಲ್ಟರ್-ನೈಲ್, ಕ್ರಿಸ್ ಲಿನ್, ಬೆನ್ ಕಟಿಂಗ್ ಮತ್ತು ಜೋಶ್ ಫಿಲಿಪ್ ಐಪಿಎಲ್ ಡೀಲ್ ಹೊಮದಿರುವ ಆಸ್ಟ್ರೇಲಿಯಾ ಇನ್ನುಳಿದ ಆಟಗಾರರು. ಇವರಲ್ಲಿ ಹ್ಯಾಝಲ್ವುಡ್, ಮಾರ್ಷ್ ಮತ್ತು ಫಿಲಿಪ್ ಐಪಿಎಲ್ ಆರಂಭಿಕ ಹಂತದಲ್ಲಿ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು. ಆದರೆ ದ್ವಿತೀಯ ಹಂತದಲ್ಲಿ ಪಾಲ್ಗೊಳ್ಳುವ ಅರ್ಹತೆ ಇವರಿಗಿದೆ.

Story first published: Sunday, August 15, 2021, 18:51 [IST]
Other articles published on Aug 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+