ಬಿಸಿಸಿಐಗೆ ಕ್ರಿಕೆಟ್ ಆಸ್ಟ್ರೇಲಿಯಾ ಭಯಪಟ್ಟುಕೊಂಡಿದೆ ಎಂದು ಚಾನೆಲ್ 7 ಆರೋಪ

ಆಸ್ಟ್ರೇಲಿಯಾದ ಕ್ರೀಡಾ ಪ್ರಸಾರಕ ವಾಹಿನಿ ಚಾನೆಲ್ 7 ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ವರ್ತನೆಗೆ ಛಾಟಿ ಬೀಸಿದೆ. ಆಸ್ಟ್ರೇಲಿಯಾದ ಕ್ರಿಕೆಟ್ ಆಡಳಿತ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಭಯಪಟ್ಟುಕೊಂಡಿದೆ ಎಂದು ಚಾನೆಲ್ 7 ಆರೋಪವನ್ನು ಮಾಡಿದೆ. ಭಾರತೀಯ ಕ್ರಿಕೆಟ್ ಮಂಡಳಿಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂಧವನ್ನು ಉಲ್ಲಂಘಿಸಿದೆ ಎಂದು ಅದು ಆರೋಪವನ್ನು ಮಾಡಿದೆ.
ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡಿರುವ ಬಗ್ಗೆ ಮುನಿಸಿಕೊಂಡಿರುವ ಚಾನೆಲ್ 7 ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಬಿಸಿಸಿಐ ನಡುವಿನ ಸಂವಹನದ ಕುರಿತಾದ ಮೇಲ್ ಸಂದೇಶವನ್ನು ಕೋರಿದೆ. ಚಾನೆಲ್ 7 ಟೀಮ್ ಇಂಡಿಯಾ ಜೊತೆಗೆ ಬಹುನಿರೀಕ್ಷಿತ ಟೆಸ್ಟ್ ಸರಣಿ ಆರಂಭವಾಗುವ ಜೊತೆಗೆ ಆಸ್ಟ್ರೇಲಿಯಾದ ಕ್ರಿಕೆಟ್ ಋತುವನ್ನು ಆರಂಭಿಸಲು ಬಯಸಿತ್ತು. ಆದರೆ ಅದಕ್ಕೂ ಮುನ್ನವೇ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಟಿ20 ಸರಣಿ ನಡೆಯಲಿದೆ.
ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಬವಾಗಲಿದೆ. ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು ಇದು ಅಹರ್ನಿಶಿಯಾಗಿ ಸಾಗಲಿದೆ. ಕ್ರಿಸ್‌ಮಸ್‌ಗಿಂತ ಮುನ್ನವೇ ಮೊದಲನೇ ಟೆಸ್ಟ್ ಆರಂಭವಾಗಲಿದೆ.
"ಕ್ರಿಕೆಟ್ ಆಸ್ಟ್ರೇಲಿಯಾದ ಈ ರೀತಿಯ ವರ್ತನೆ ನಿಜಕ್ಕೂ ನಾಚಿಕೆಗೇಡಿನ ವಿಷಯ. ಅವರು ನಿಜವಾಗಿಯೂ ನಮಗೆ ಪ್ರಸಾರಕರಾಗಿ ಗೌರವವನ್ನು ನೀಡುವುದಿಲ್ಲ. ಅವರು ಬಿಸಿಸಿಐಗೆ ಭಯಪಟ್ಟುಕೊಂಡಿದ್ದಾರೆ ಎಂದು ಸೆವೆನ್ ವೆಸ್ಟ್ ಮೀಡಿಯಾದ ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ವಾರ್ಬುರ್ಟನ್ ಆರೋಪಿಸಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ಆಸ್ಟ್ರೇಲಿಯಾದ ಕ್ರೀಡಾ ಪ್ರಸಾರಕ ವಾಹಿನಿ ಚಾನೆಲ್ 7 ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ವರ್ತನೆಗೆ ಛಾಟಿ ಬೀಸಿದೆ. ಆಸ್ಟ್ರೇಲಿಯಾದ ಕ್ರಿಕೆಟ್ ಆಡಳಿತ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಭಯಪಟ್ಟುಕೊಂಡಿದೆ ಎಂದು ಚಾನೆಲ್ 7 ಆರೋಪವನ್ನು ಮಾಡಿದೆ. ಭಾರತೀಯ ಕ್ರಿಕೆಟ್ ಮಂಡಳಿಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂಧವನ್ನು ಉಲ್ಲಂಘಿಸಿದೆ ಎಂದು ಅದು ಆರೋಪವನ್ನು ಮಾಡಿದೆ.
ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡಿರುವ ಬಗ್ಗೆ ಮುನಿಸಿಕೊಂಡಿರುವ ಚಾನೆಲ್ 7 ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಬಿಸಿಸಿಐ ನಡುವಿನ ಸಂವಹನದ ಕುರಿತಾದ ಮೇಲ್ ಸಂದೇಶವನ್ನು ಕೋರಿದೆ. ಚಾನೆಲ್ 7 ಟೀಮ್ ಇಂಡಿಯಾ ಜೊತೆಗೆ ಬಹುನಿರೀಕ್ಷಿತ ಟೆಸ್ಟ್ ಸರಣಿ ಆರಂಭವಾಗುವ ಜೊತೆಗೆ ಆಸ್ಟ್ರೇಲಿಯಾದ ಕ್ರಿಕೆಟ್ ಋತುವನ್ನು ಆರಂಭಿಸಲು ಬಯಸಿತ್ತು. ಆದರೆ ಅದಕ್ಕೂ ಮುನ್ನವೇ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಟಿ20 ಸರಣಿ ನಡೆಯಲಿದೆ.
ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಬವಾಗಲಿದೆ. ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು ಇದು ಅಹರ್ನಿಶಿಯಾಗಿ ಸಾಗಲಿದೆ. ಕ್ರಿಸ್‌ಮಸ್‌ಗಿಂತ ಮುನ್ನವೇ ಮೊದಲನೇ ಟೆಸ್ಟ್ ಆರಂಭವಾಗಲಿದೆ.
"ಕ್ರಿಕೆಟ್ ಆಸ್ಟ್ರೇಲಿಯಾದ ಈ ರೀತಿಯ ವರ್ತನೆ ನಿಜಕ್ಕೂ ನಾಚಿಕೆಗೇಡಿನ ವಿಷಯ. ಅವರು ನಿಜವಾಗಿಯೂ ನಮಗೆ ಪ್ರಸಾರಕರಾಗಿ ಗೌರವವನ್ನು ನೀಡುವುದಿಲ್ಲ. ಅವರು ಬಿಸಿಸಿಐಗೆ ಭಯಪಟ್ಟುಕೊಂಡಿದ್ದಾರೆ ಎಂದು ಸೆವೆನ್ ವೆಸ್ಟ್ ಮೀಡಿಯಾದ ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ವಾರ್ಬುರ್ಟನ್ ಆರೋಪಿಸಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+

Click it and Unblock the Notifications