For Quick Alerts
ALLOW NOTIFICATIONS  
For Daily Alerts
 

ಡೇವಿಡ್ ವಾರ್ನರ್‌ಗೆ ಬಿಗ್‌ ರಿಲೀಫ್‌ ನೀಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

ಡೇವಿಡ್ ವಾರ್ನರ್‌ ಆಸ್ಟ್ರೇಲಿಯಾದ ಸ್ಟಾರ್‌ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬಾಯ್‌ ಹೇಳಿದ್ದರು. ಇವರು ಮತ್ತೆ ಭಾರತದ ವಿರುದ್ಧ ಬಾರ್ಡರ್ ಗವಾಸ್ಕರ್‌ ಸರಣಿಯ ಟೆಸ್ಟ್‌ ಸರಣಿಗೆ ತಂಡವನ್ನು ಸೇರಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈಗ ಈ ಪ್ಲೇಯರ್‌ ಮುಖದಲ್ಲಿ ಮಂದಹಾಸ ಮೂಡಿಸುವಂತಹ ಕೆಲಸವನ್ನು ಆಸ್ಟ್ರೇಲಿಯಾ ಮಾಡಿಕೊಂಡಿದೆ.

2018 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಕೇಪ್ ಟೌನ್ ಟೆಸ್ಟ್ ಪಂದ್ಯದ ಸ್ಯಾಂಡ್ ಪೇಪರ್ ಹಗರಣದಲ್ಲಿ ಭಾಗಿಯಾಗಿ ಡೇವಿಡ್ ವಾರ್ನರ್ ಬ್ಯಾನ್‌ ಎದುರಿಸಿದರು. ಈ ಪ್ರಕರಣದ ಬಳಿಕ ಕ್ರಿಕೆಟ್‌ ಆಸ್ಟ್ರೇಲಿಯಾ ಇವರಿಗೆ ದೇಶದ ಯಾವುದೇ ತಂಡದ ನಾಯಕತ್ವ ಮಾಡದಂತೆ ಅಜೀವ ನಿಷೇಧ ಹೇರಲಾಗಿತ್ತು. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಡೇವಿಡ್ ವಾರ್ನರ್ ಅವರ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆದಿದೆ.

Cricket Australia Lifts Captaincy Ban on David Warner Bringing Relief to the Star Cricketer

ಸಿಡ್ನಿ ಥಂಡರ್‌ ಪರ ಬ್ಯಾಟಿಂಗ್

ಬಿಗ್ ಬ್ಯಾಷ್‌ ಲೀಗ್‌ನಲ್ಲಿ ಡೇವಿಡ್‌ ವಾರ್ನರ್ ಸಿಡ್ನಿ ತಂಡದ ಭಾಗವಾಗಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಕೈಗೊಂಡಿರುವ ನಿರ್ಧಾರದಿಂದ ದೇಶೀಯ ಟೂರ್ನಿಯಲ್ಲಿ ವಾರ್ನರ್‌ ಅವರಿಗೆ ಚುಕ್ಕಾಣಿ ನೀಡಬಹದಾಗಿದೆ. ಕ್ರಿಕೆಟ್‌ ಆಸ್ಟ್ರೇಲಿಯಾ 2022ರಲ್ಲಿ ತನ್ನ ನೀತಿ ಸಂಹಿತೆಯಲ್ಲಿ ಬದಲಾವಣೆಗಳನ್ನು ಮಾಡಿದ ನಂತರ, ನಿಷೇಧವನ್ನು ತೆರವು ಗೊಳಿಸಲು ಸಹಾಯ ಮಾಡಿದೆ. ಅಲ್ಲದೆ ಡೇವಿಡ್ ವಾರ್ನರ್ ಅಗತ್ಯ ಮಾನದಂಡಗಳನ್ನು ಪೂರೈಸಿದ್ದಾರೆ ಎಂದು ತಿಳಿದು ಬಂದಿದೆ. ಕ್ರಿಕೆಟ್‌ ಆಸ್ಟ್ರೇಲಿಯಾದ ಮೂರು ಸದಸ್ಯರ ಸಮಿತಿ ಸರ್ವಾನುಮತದಿಂದ ಈ ನಿರ್ಧಾರವನ್ನು ಕೈ ಗೊಂಡಿದೆ. ಡೇವಿಡ್ ವಾರ್ನರ್‌ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಅವರ ನಡುವಳಿಕೆಯಲ್ಲಿನ ಬದಲಾವಣೆಗಳನ್ನು ಗಮನಿಸಿದ ಸಮಿತಿ ಅವರ ಮೇಲಿನ ನಿಷೇದವನ್ನು ಹಿಂಪಡೆದಿದೆ.

ವಾರ್ನರ್‌ಗೆ ರಿಲೀಫ್‌

ಡೇವಿಡ್‌ ವಾರ್ನರ್‌ ಅವರು ಕಳೆದ ಕೆಲವು ವರ್ಷಗಳಿಂದ ಈ ನಿಷೇಧವನ್ನು ತೆಗೆಯುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಒತ್ತಾಯವನ್ನು ಮಾಡಿದ್ದರು. ಸ್ಯಾಂಡ್ ಪೇಪರ್ ಪ್ರಕರಣದಲ್ಲಿ ಡೇವಿಡ್ ವಾರ್ನರ್ ಅವರ ಜೊತೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ ಸ್ಟೀವನ್ ಸ್ಮಿತ್ ಭಾಗಿಯಾಗಿದ್ದರು. ಇಬ್ಬರಿಗೂ ಕ್ರಿಕೆಟ್ ಆಸ್ಟ್ರೇಲಿಯಾ ತಲಾ ಒಂದು ವರ್ಷ ನಿಷೇಧ ಹೇರಿತ್ತು. ಅಲ್ಲದೆ ಸ್ಟೀವನ್‌ ಸ್ಮಿತ್‌ ಅವರಿಗೆ 2 ವರ್ಷ ತಂಡವನ್ನು ಮುನ್ನಡೆಸದಂತೆ ನಿಷೇಧವನ್ನು ಹೇರಿತ್ತು. ಆದರೆ ವಾರ್ನರ್‌ ದೇಶದಲ್ಲಿ ಯಾವುದೇ ತಂಡದ ನಾಯಕನಾಗದಂತೆ ಜೀವಮಾನ ನಿಷೇಧ ಎದುರಿಸಬೇಕಾಯಿತು.

Cricket Australia Lifts Captaincy Ban on David Warner Bringing Relief to the Star Cricketer

ನಿಷೇಧದ ಬಳಿಕ ತಂಡಕ್ಕೆ ಮರಳಿರುವ ವಾರ್ನರ್‌ ತಮ್ಮ ಮೇಲೆ ಹೇರಲಾಗಿದ್ದ ನಾಯಕತ್ವದ ನಿಷೇಧವನ್ನು ಅಜೀವ ತೆರೆಯುವಂತೆ ಕ್ರಿಕೆಟ್‌ ಆಸ್ಟ್ರೇಲಿಯಾಕ್ಕೆ ಒತ್ತಾಯವನ್ನು ಮಾಡುತ್ತಲೇ ಇದ್ದರು. ಸತತ ಆರು ವರ್ಷಗಳಿಂದ ಡೇವಿಡ್ ವಾರ್ನರ್‌ ಅವರು ಹೇರುತ್ತಿದ್ದ ಒತ್ತಡಕ್ಕೆ ಕ್ರಿಕೆಟ್‌ ಆಸ್ಟ್ರೇಲಿಯಾ ಅಸ್ತು ಎಂದಿದೆ. ಈ ಸುದ್ದಿ ನಿಜಕ್ಕೂ ಡೇವಿಡ್ ವಾರ್ನರ್‌ ಅವರಿಗೆ ಬಿಗ್ ರಿಲೀಫ್‌ ನೀಡಿದೆ.

ಡೇವಿಡ್ ವಾರ್ನರ್ ಸಿಡ್ನಿ ಥಂಡರ್‌ ಪರ 11 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದು 134ರ ಸ್ಟ್ರೈಕ್ ರೇಟ್‌ನಲ್ಲಿ 301 ರನ್‌ ಸಿಡಿಸಿದ್ದಾರೆ. ಇದರಿಂದ ಒಂದು ಶತಕ ಹಾಗೂ ಒಂದು ಅರ್ಧಶತಕ ಸೇರಿವೆ.

Story first published: Friday, October 25, 2024, 11:43 [IST]
Other articles published on Oct 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+