ಆಶಸ್ ಸರಣಿಯಷ್ಟೇ ಮಹತ್ವ ಪಡೆಯುತ್ತಿದೆ ಬಾರ್ಡರ್ ಗವಾಸ್ಕರ್ ಸರಣಿ: ಆಸೀಸ್ ಮುಖದಲ್ಲಿ ಮಂದಹಾಸ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದೆ. ಎರಡು ಬಲಿಷ್ಠ ತಂಡಗಳು ನಡುವಿನ ಕಾಳಗವನ್ನು ಕಣ್ಣು ತುಂಬಿಕೊಳ್ಳಲು ಫ್ಯಾನ್ಸ್ ಸಹ ಕಾತುರತೆಯಿಂದ ಕಾಯುತ್ತಿರುತ್ತಾರೆ. ಈ ವರ್ಷದ ಅಂತ್ಯದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ.
ಉಭಯ ತಂಡಗಳು ನಡುವಣ ಯಾವುದೇ ಪಂದ್ಯವಾದರೂ, ಸ್ಟೇಡಿಯಂ ಫುಲ್. ಈ ಎರಡೂ ತಂಡಗಳ ಫೈಟ್ ನೇರ ಪ್ರಸಾರ ಮಾಡಲು ಭಾರೀ ಹಣವನ್ನು ನೀಡಲಾಗುತ್ತದೆ. ಈ ಬಗ್ಗೆ ಈಗ ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ಹೇಳಿಕೆಯನ್ನು ನೀಡಿದೆ.

ಆಸ್ಟ್ರೇಲಿಯಾ ಪ್ರವಾಸ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ನಡೆಯುತ್ತದೆ. ಈ ಸರಣಿ ಒಮ್ಮೆ ಭಾರತದಲ್ಲಿ ನಡೆದರೆ, ಇನ್ನೊಮ್ಮೆ ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗುತ್ತದೆ. ಕಳೆದ ಆಸೀಸ್ ಪ್ರವಾಸದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಸರಣಿ ವಶಪಡಿಸಿಕೊಂಡಿತ್ತು. ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಈ ಸರಣಿಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಐದು ಪಂದ್ಯಗಳ ಟೆಸ್ಟ್ ಸರಣಿ
ಭಾರತ ವರ್ಷದ ಅಂತ್ಯದಲ್ಲಿ ಕಾಂಗರೂ ನಾಡಿನ ಪ್ರವಾಸ ಆರಂಭಿಸಲಿದೆ. ಈ ವೇಳೆ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿ ನವೆಂಬರ್ 22 ರಿಂದ ಜನವರಿ 7 ರವರೆಗೆ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಸರಣಿಗಾಗಿ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಭರದ ಸಿದ್ಧತೆಗಳು ನಡೆದಿವೆ. ಈ ಸರಣಿಯಿಂದ ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಸಾಕಷ್ಟು ಲಾಭವಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬಹಿರಂಗ ಪಡಿಸಿದೆ.
ನೇರ ಪ್ರಸಾರದ ಹಕ್ಕು ಮಾರಾಟ
ಈ ಎರಡೂ ದೇಶಗಳ ನಡುವಣ ಟೆಸ್ಟ್ ಸರಣಿಯ ನೇರ ಪ್ರಸಾರದ ಹಕ್ಕಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಫಾಕ್ಸ್‌ಟೆಲ್ ಮತ್ತು ಸೆವೆನ್ ನೆಟ್‌ವರ್ಕ್‌ನೊಂದಿಗೆ 1.5 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹೀಗಾಗಿ ಬಾರ್ಡರ್ ಗವಾಸ್ಕರ್ ಸರಣಿ ಸಹ ಆಶಸ್‌ನಷ್ಟೇ ಮಹತ್ವ ಪಡೆದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಆಸ್ಟ್ರೇಲಿಯಾದಲ್ಲಿ ಆಡಿದ ಕೊನೆಯ ಎರಡೂ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತ ಗೆದ್ದಿದೆ. ಹೀಗಿರುವಾಗ ಈ ಸರಣಿಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ತಂಡದ ಮೇಲೆ ಒತ್ತಡ ಹೆಚ್ಚಿದೆ.
ಸರಣಿಯ ಬಗ್ಗೆ ಹಾಕ್ಲಿ ಹೇಳಿದ್ದೇನು?
ಬಾರ್ಡರ್ ಗವಾಸ್ಕರ್ ಟ್ರೋಫಿ ಮತ್ತು ಆಶಸ್ ಎರಡೂ ಆಸ್ಟ್ರೇಲಿಯನ್ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ದೊಡ್ಡ ಟೂರ್ನಿ. ವಾಣಿಜ್ಯ ದೃಷ್ಟಿಕೋನದಿಂದ ನೋಡುವುದಾದರೆ, ಎರಡೂ ಸರಣಿಗಳಿಂದ ಭಾರಿ ಪ್ರೇಕ್ಷಕರನ್ನು ಸೆಳೆಯಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಹಾಕ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಬಾರ್ಡರ್ ಗವಾಸ್ಕರ್ ಸರಣಿಯ ಎರಡನೇ ಟೆಸ್ಟ್ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯ ಡೆ ಆಂಡ್ ನೈಟ್ ಆಗಿರಲಿದೆ.
ಬಾರ್ಡರ್-ಗವಾಸ್ಕರ್ ಸರಣಿಯ ವೇಳಾಪಟ್ಟಿ
ಮೊದಲನೇ ಟೆಸ್ಟ್, ನವೆಂಬರ್ 22-26, ಪರ್ತ್
ಎರಡನೇ ಟೆಸ್ಟ್ - ಡಿಸೆಂಬರ್ 06-10, ಅಡಿಲೇಡ್
ಮೂರನೇ ಟೆಸ್ಟ್ - ಡಿಸೆಂಬರ್ 14-18, ದಿ ಗಬ್ಬಾ
ನಾಲ್ಕನೇ ಟೆಸ್ಟ್ - ಡಿಸೆಂಬರ್ 26-30, ಮೆಲ್ಬೋರ್ನ್
ಐದನೇ ಟೆಸ್ಟ್ - ಜನವರಿ 03-07, ಸಿಡ್ನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications