ಐಪಿಎಲ್ 2021: ನಿರಾಕ್ಷೇಪಣಾ ಪತ್ರ ನೀಡಲು ಹೊಸ ಕ್ರಮಕ್ಕೆ ಮುಂದಾದ ಕ್ರಿಕೆಟ್ ಆಸ್ಟ್ರೇಲಿಯಾ

ಐಪಿಎಲ್‌ನ ಆರಂಭ ಹಾಗೂ ಮಿನಿ ಹರಾಜಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಈಗಾಗಲೇ ಆರಂಭಿಸಿದೆ. ಆದರೆ ಟೂರ್ನಿಯನ್ನು ಪಾಲ್ಗೊಳ್ಳಲು ಪ್ರತಿ ಆಟಗಾರನೂ ಆತ ಪ್ರತಿನಿಧಿಸುವ ಕ್ರಿಕೆಟ್ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಕಡ್ಡಾಯವಾಗಿದೆ. ಈ ಬಾರಿ ನಿರಾಕ್ಷೇಪಣಾ ಪತ್ರ ನೀಡುವ ವಿಚಾರದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ಕ್ರಮ ಅನುಸರಿಸಲು ಮುಂದಾಗಿದೆ.
ಈ ಬಾರಿ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಬಯಸುವ ಆಟಗಾರರಿಗೆ ನೀಡುವ ನಿರಾಕ್ಷೇಪಣಾ ಪತ್ರವನ್ನು "ಪ್ರಕರಣದಿಂದ ಪ್ರಕರಣ ಆಧರಿಸಿ" ನೀಡಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ. ಕಳೆದ ಬಾರಿ ಯುಎಇನಲ್ಲಿ ನಡೆದ ಐಪಿಎಲ್‌ನಲ್ಲಿ ಬಯೋಬಬಲ್‌ನಲ್ಲಿದ್ದು ಆಸ್ಟ್ರೇಲಿಯಾ ಆಟಗಾರರು ಪಾಳ್ಗೊಂಡಿದ್ದರು. ಈ ಬಾರಿ ಭಾರತದಲ್ಲೇ ಈ ಟೂರ್ನಿ ಆಯೋಜನೆಯಾಗಲಿದೆ.
ಕಳೆದ ಬಾರಿಯ ಐಪಿಎಲ್‌ನಿಂದ ನಾವು ಪೂರ್ವ ನಿರ್ದೇಶನಗಳನ್ನು ಹೊಂದಿದ್ದೇವೆ. ಅರ್ಜಿಗಳು ನಮ್ಮ ಬಳಿಗೆ ಬಂದಾಗ ನಾವು ಪ್ರತಿಯೊಂದನ್ನು ಗಮನಿಸಲಿದ್ದೇವೆ. ಅವರ ಅರ್ಹತೆಗಳ ಆಧಾರದಲ್ಲಿ ನಿರಾಕ್ಷೇಪಣಾ ಪತ್ರಗಳನ್ನು ನೀಡಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿದ್ದಾರೆ.
ಐಪಿಎಲ್ ಏಪ್ರಿಲ್ ತಿಂಗಳಿನಲ್ಲಿ ಆಯೋಜನೆಯಾಗುವ ಸಾಧ್ಯತೆಯಿದೆ. ಆದರೆ ಈವರೆಗೂ ಐಪಿಎಲ್ ಆರಂಭದ ದಿನಾಂಕ ಅಧಿಕೃತವಾಗಿಲ್ಲ. ಫೆಬ್ರವರಿ 18ರಂದು ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್, ಆರೋನ್ ಫಿಂಚ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಿಚೆಲ್ ಸ್ಟಾರ್ಕ್ ಭಾಗಿಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications