ಭಾರತೀಯರ ನಿಂದಿಸಿದ ಕಿಡಿಗೇಡಿಗಳ ಕಂಡುಹಿಡಿಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲ

ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ ಪ್ರೇಕ್ಷಕರು ಯಾರೆಂಬುದು ಪತ್ತೆಯಾಗಿಲ್ಲ ಎಂದು ಕ್ರಿಕ್ರೆಟ್ ಆಸ್ಟ್ರೇಲಿಯಾ (ಸಿಎ) ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಹೇಳಿದೆ
ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ವೇಳೆ ಮತ್ತು ಬ್ರಿಸ್ಬೇನ್ ಸ್ಟೇಡಿಯಂನಲ್ಲಿ ನಡೆದಿದ್ದ ಟೆಸ್ಟ್ ವೇಳೆ ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬೂಮ್ರಾ ವಿರುದ್ಧ ಅಲ್ಲಿದ್ದ ಪ್ರೇಕ್ಷಕರು ನಿಂದಿಸಿದ್ದರು. ಭಾರತೀಯರನ್ನು 'ಗೊಬ್ಬರದ ಹುಳ' ಎಂದು ಕರೆದಿದ್ದರು.
ಸಿಡ್ನಿಯಲ್ಲಿ ನಿಂದನೆಯಾದಾಗ ಸಿರಾಜ್ ಮತ್ತು ಬೂಮ್ರಾ ಇಬ್ಬರೂ ಅಧಿಕಾರಿಗಳಿಗೆ ದೂರಿತ್ತಿದ್ದರು. ಆ ಬಳಿಕ ನಿಂದನೆ ಮಾಡಿದ 6 ಪ್ರೇಕ್ಷಕರನ್ನು ಮೈದಾನದಿಂದ ಹೊರಗೆ ಕಳುಹಿಸಲಾಗಿತ್ತು.
'ಐಸಿಸಿಗೆ ಸಿಎ ಕಳುಹಿಸಿರುವ ವರದಿಯಲ್ಲಿ ಭಾರತೀಯ ಆಟಗಾರರು ನಿಂದನೆಗೊಳಗಾಗಿರುವು ಹೌದೆಂದು ನಿಜವೆಂದಿದೆ. ಆದರೆ ಸಿಎ ತನಿಖಾದಾರರು ತಪ್ಪಿತಸ್ಥರನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ' ಎಂದು ಆಸ್ಟ್ರೇಲಿಯಾ 'ದ ಏಜ್' ಪತ್ರಿಕೆ ವರದಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications