Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2021ರ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರು ಆಡ್ತಾರಾ, ಇಲ್ವಾ?!

Cricket Australia yet to discuss Australian players participation in remaining IPL matches in UAE

ಮೆಲ್ಬರ್ನ್: ಸೆಪ್ಟೆಂಬರ್‌ನಲ್ಲಿ ಮರು ಚಾಲನೆಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಆಟಗಾರರು ಪಾಲ್ಗೊಳ್ಳುತ್ತಾರಾ, ಇಲ್ಲವಾ ಎನ್ನುವ ಬಗ್ಗೆ ಇನ್ನಷ್ಟೇ ಚರ್ಚೆ ಆರಂಭವಾಗಬೇಕಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸೋಮವಾರ (ಮೇ 31) ಹೇಳಿದೆ.

ಆಸ್ಟ್ರೇಲಿಯಾದ ಆಟಗಾರರು ಕ್ವಾರಂಟೈನ್ ಮುಗಿಸಿ ಈಗಷ್ಟೇ ತಮ್ಮ ತಮ್ಮ ಕುಟುಂಬಗಳನ್ನು ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ಆಟಗಾರರು ಮತ್ತೆ ಐಪಿಎಲ್‌ನಲ್ಲಿ ಆಡ್ತಾರೋ ಇಲ್ಲವೋ ಎನ್ನುವುದನ್ನು ನಿರ್ಧರಿಸಲು ಐಪಿಎಲ್ ಗರ್ವನಿಂದ ಕೌನ್ಸಿಲ್ ಕೊಂಚ ಕಾಲ ಕಾಯಬೇಕಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮಧ್ಯಂತರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ನಿಕ್ ಹಾಕ್ಲೆ ಹೇಳಿದ್ದಾರೆ.

ಐಪಿಎಲ್ 14ನೇ ಆವೃತ್ತಿಯ ಭಾಗವಾಗಿದ್ದ ಆಸ್ಟ್ರೇಲಿಯಾ ಆಟಗಾರರು, ಕೋಚ್‌ಗಳು, ಅಧಿಕಾರಿಗಳು, ಕಾಮೆಂಟೇಟರ್‌ಗಳು ಮೇ 4ರಂದು ಐಪಿಎಲ್ ಮುಂದೂಡಲ್ಪಟ್ಟಾಗ ಮಾಲ್ಡೀವ್ಸ್‌ಗೆ ತೆರಳಿ ಅಲ್ಲಿಂದ ಆಸ್ಟ್ರೇಲಿಯಾಕ್ಕೆ ವಾಪಸ್ಸಾಗಿದ್ದರು. ಯಾಕೆಂದರೆ ಆ ವೇಳೆ ಭಾರತದಿಂದ ಆಸ್ಟ್ರೇಲಿಯಾ ಪ್ರಯಾಣಿಕರಿಗೆ ನಿಷೇಧ ಹೇರಲಾಗಿತ್ತು. ಐಪಿಎಲ್ ವೇಳೆ, ಮಾಲ್ಡೀವ್ಸ್‌ಗೆ ಹೊರಡುವ ಮುನ್ನ, ಹೋದ ಮೇಲೆ, ಆಸ್ಟ್ರೇಲಿಯಾಕ್ಕೆ ಬಂದ ಮೇಲೆ ಕ್ವಾರಂಟೈನ್ ಪಾಲಿಸಿ ಈಗಾಗಲೇ ಆಸೀಸ್ ಆಟಗಾರರು ಸುಸ್ತಾಗಿದ್ದಾರೆ.

'ಐಪಿಎಲ್‌ನಿಂದ ವಾಪಸ್ಸಾಗಿರುವ ನಮ್ಮ ಆಟಗಾರರು ಈಗಷ್ಟೇ ಕ್ವಾರಂಟೈನ್ ಮುಗಿಸಿದ್ದಾರೆ. ಅವರು ಅವರವರ ಕುಟುಂಬಗಳನ್ನು ಸೇರಿಕೊಳ್ಳಬೇಕು ಅನ್ನೋದೇ ನಮ್ಮ ಮೊದಲ ಆದ್ಯತೆ. ನಾವು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಯಾರಾಗಬೇಕಿದೆ. ಐಪಿಎಲ್‌ನಲ್ಲಾದ ಅನುಭವದಿಂದ ಆಟಗಾರರು ನಡುಗಿ ಹೋಗಿದ್ದಾರೆ. ಹೀಗಾಗಿ ಮತ್ತೆ ಆಡುವ ಬಗೆಗಿನ ನಿರ್ಧಾರಕ್ಕೆ ಸ್ವಲ್ಪ ಸಮಯಬೇಕು,' ಎಂದು ಹಾಕ್ಲೆ ಹೇಳಿದ್ದಾರೆ.

Story first published: Monday, May 31, 2021, 16:41 [IST]
Other articles published on May 31, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+