ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರನ್ನು ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಎಲ್ಲಾ ಕ್ರಿಕೆಟ್ ಮಂಡಳಿಗಳ ಬೆಂಬಲದೊಂದಿಗೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಜಯ್ ಶಾ ಅವರಿಗೆ ಬೆಂಬಲ ನೀಡಲಿಲ್ಲ ಮತ್ತು ಈ ಬಗ್ಗೆ ಯಾವುದೇ ವಿರೋಧವನ್ನೂ ವ್ಯಕ್ತಪಡಿಸಿಲ್ಲ.

ಇದೀಗ ಜಯ್ ಶಾ ಐಸಿಸಿ ಅಧ್ಯಕ್ಷರಾದ ಬಳಿಕ ಇಟಲಿಯ ಮೊನ್ಫಾಲ್ಕೋನ್ ನಗರದಿಂದ ಕ್ರಿಕೆಟ್ ಪ್ರೇಮಿಗಳಿಗೆ ಅಘಾತಕಾರಿ ಸುದ್ದಿವೊಂದು ಹೊರ ಬಿದ್ದಿದೆ. ಅಲ್ಲಿನ ಮೇಯರ್ ತಮ್ಮ ನಗರದಲ್ಲಿ ಕ್ರಿಕೆಟ್ ಆಟವನ್ನು ನಿಷೇಧಿಸಿದ್ದಾರೆ. ಅಷ್ಟೇ ಅಲ್ಲ, ಈ ನಗರದಲ್ಲಿ ಯಾರಾದರೂ ಕ್ರಿಕೆಟ್ ಆಡುತ್ತಾ ಸಿಕ್ಕಿಬಿದ್ದರೆ 10 ಸಾವಿರ ರೂಪಾಯಿ ದಂಡವನ್ನೂ ಘೋಷಿಸಲಾಗಿದೆ.
ಕ್ರಿಕೆಟ್ ಆಟವನ್ನು ಬ್ಯಾನ್ ಮಾಡಿರುವ ಹಿಂದೆ ಕಾರಣವೊಂದಿದೆ. ಏಕೆಂದರೆ ಅವರು ತಮ್ಮ ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕ್ರಿಕೆಟ್ ಆಡುವುದರಿಂದ ಯಾವುದೇ ಸಂಸ್ಕೃತಿಗೆ ಧಕ್ಕೆಯಾಗಬಹುದೇ ಎಂಬುದು ಈಗ ಪ್ರಶ್ನೆಯಾಗಿದೆ.
ಭಾರತ ಸೇರಿದಂತೆ ವಿಶ್ವದ ಎಲ್ಲಾ ದೊಡ್ಡ ದೇಶಗಳಲ್ಲಿ ಕ್ರಿಕೆಟ್ ಅನ್ನು ಪ್ರಮುಖ ಕ್ರೀಡೆಯಾಗಿ ಆಡಲಾಗುತ್ತಿದೆ. ಇನ್ನೊಂದೆಡೆ ಐಸಿಸಿ ಅಧ್ಯಕ್ಷರಾದ ನಂತರ ಜಯ್ ಶಾ ಅವರು ಜಗತ್ತಿನಲ್ಲಿ ಕ್ರಿಕೆಟ್ ಅನ್ನು ಅಭಿವೃದ್ಧಿ ಕಡೆ ಕೊಂಡೊಯ್ಯುವ ಬಗ್ಗೆ ಮಾತನಾಡಿದ್ದರು. ಆದರೆ ಮೊನ್ಫಾಲ್ಕೋನ್ ನಗರದ ಮೇಯರ್ ನಿರ್ಧಾರದ ನಂತರ, ವಿಶ್ವದಾದ್ಯಂತ ಕ್ರಿಕೆಟ್ ಅನ್ನು ಪ್ರಚಾರ ಮಾಡುವುದು ಸುಲಭವೋ? ಅಥವಾ ಕಷ್ಟಕರವೋ? ಎಂಬುದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಇಟಲಿಯ ಮೊನ್ಫಾಲ್ಕೋನ್ ನಗರದಲ್ಲಿ ಕ್ರಿಕೆಟ್ ನಿಷೇಧದ ಬಗ್ಗೆ ಜಯ್ ಶಾ ತಮ್ಮ ಪ್ರತಿಕ್ರಿಯೆಯನ್ನು ನೀಡಿಲ್ಲ. ಐಸಿಸಿ ಅಧ್ಯಕ್ಷರಾದ ನಂತ ಕ್ರಿಕೆಟ್‌ಗೆ ಉತ್ತೇಜನ ನೀಡುವ ಅವರ ಬದ್ಧತೆ ಸ್ಪಷ್ಟವಾಗಿದೆ. ಹೀಗಿರುವಾಗ ಜಯ್ ಶಾ ಈ ಬಗ್ಗೆ ಖಂಡಿತಾವಾಗಿಯೂ ಪ್ರತಿಕ್ರಿಯೆ ನೀಡುತ್ತಾರೆ ಎನ್ನಲಾಗುತ್ತಿದೆ.