ಬಾಂಗ್ಲಾ ವಿಶ್ವಕಪ್ ಟೀಂ ಆಟಗಾರ ರೇಪ್ ಕೇಸಲ್ಲಿ ಅಂದರ್
ಢಾಕಾ, ಜ.8: ಮುಂಬರುವ ವಿಶ್ವಕಪ್ ಆಡುವ ಕನಸು ಹೊತ್ತಿದ್ದ ಕ್ರಿಕೆಟರ್ ಒಬ್ಬ ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಐಸಿಸಿ ವಿಶ್ವಕಪ್ 2015ಕ್ಕೆ ಹೆಸರಿಸಲಾದ ಬಾಂಗ್ಲಾದೇಶ ತಂಡದಲ್ಲಿದ್ದ ರುಬೆಲ್ ಹುಸೇನ್ ಅವರು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿದ್ದಾರೆ.
ಬಾಂಗ್ಲಾದೇಶದ ನಟಿಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪ ಹೊತ್ತಿದ್ದ ರುಬೆಲ್ ಅವರನ್ನು ಗುರುವಾರ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜೈಲಿಗೆ ಕಳಿಸಿದೆ. 19 ವರ್ಷ ವಯಸ್ಸಿನ ನಾಜ್ನಿನ್ ಅಖ್ತರ್ ಎಂಬ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದ್ರೋಹ ಬಗೆದು ಆಕೆಯನ್ನು ದೈಹಿಕವಾಗಿ ಬಳಸಿಕೊಂಡ ಆರೋಪ ರುಬೆಲ್ ಮೇಲಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಸೇರಬೇಕಾಗಿದೆ.
ಇದರಿಂದಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆಯುವ ಐಸಿಸಿ ವಿಶ್ವಕಪ್ 2015ರಲ್ಲಿ 24 ವರ್ಷದ ರುಬೆಲ್ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಕಳೆದ ವಾರ ಪ್ರಕಟಗೊಂಡ 15 ಜನ ಸದಸ್ಯರ ಬಾಂಗ್ಲಾದೇಶ ತಂಡದಲ್ಲಿ ರುಬೆಲ್ ಕೂಡಾ ಒಬ್ಬರಾಗಿದ್ದರು.

ಆದರೆ, ಕೇಸಿನ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆ ತನಕ ರುಬೆಲ್ ಜೈಲಿನಲ್ಲೇ ಕಾಲದೂಡಬೇಕಾಗುತ್ತದೆ ಎಂದು ಢಾಕಾದ ಡೆಪ್ಯುಟಿ ಪೊಲೀಸ್ ಆಯುಕ್ತ ಅನಿಸೂರ್ ರೆಹ್ಮಾನ್ ಎಎಫ್ ಪಿಗೆ ಹೇಳಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲವಾದ್ದರಿಂದ ರುಬೆಲ್ ವಿಶ್ವಕಪ್ ಆಸೆ ಭಗ್ನವಾಗಲಿದೆ. [ಐಸಿಸಿ ವಿಶ್ವಕಪ್ 2015: ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]
ನನ್ನನ್ನು ಮದುವೆಯಾದರೆ ಕೇಸ್ ವಾಪಸ್ ಪಡೆಯುವುದಾಗಿ ಯುವತಿ ಹೇಳಿದ್ದು, ರುಬೆಲ್ ಗೆ ಆಶಾದಾಯಕವಾಗಿತ್ತು. ಅದರೆ, ವೇಗಿ ರುಬೆಲ್ ನಾನು ಯಾವುದೇ ಆಶ್ವಾಸನೆ ನೀಡಿಲ್ಲ, ಯಾವ ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ.
2013ರಲ್ಲಿ ತೆರೆ ಕಂಡ ಕಿಚು ಆಶಾ ಭಾಲೊಬಾಶಾ ಎಂಬ ಹೆಸರಿನ ಚಿತ್ರದ ಮೂಲಕ ಬಾಂಗ್ಲಾದೇಶದಲ್ಲಿ ಹ್ಯಾಪಿ ಅಲಿಯಾಸ್ ನಜ್ನಿನ್ ಅಖ್ತರ್ ಮನೆ ಮಾತಾದರು. ರುಬೆಲ್ 22 ಟೆಸ್ಟ್ ಪಂದ್ಯವಾಡಿದ್ದು 32 ವಿಕೆಟ್ ಕಬಳಿಸಿದ್ದಾರೆ. 53 ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಹ್ಯಾಟ್ರಿಕ್ ಸೇರಿ 69 ವಿಕೆಟ್ ಗಳಿಸಿದ್ದಾರೆ. (ಎಎಫ್ ಪಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications