ಕ್ರಿಕೆಟ್ ಜಗತ್ತಿನ ಸ್ಟೈಲಿಶ್ ಆಟಗಾರ ನಿವೃತ್ತಿ ಘೋಷಣೆ
ಸಿಡ್ನಿ, ಜ.15: ಕ್ರಿಕೆಟ್ ಜಗತ್ತಿನ ಸ್ಟೈಲಿಶ್ ಆಟಗಾರ, ಆಸ್ಟ್ರೇಲಿಯಾ ವೇಗದ ಬೌಲರ್ ಬ್ರೆಟ್ ಲೀ ಅವರು ಗುರುವಾರ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಿಸಿದ್ದಾರೆ.
ಸುಮಾರು 20 ವರ್ಷಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿದ್ದ ಲೀ ಅವರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ನಿವೃತ್ತಿ ಘೋಷಿಸಿದರು. 38 ವರ್ಷ ವಯಸ್ಸಿನ ಲೀ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಆಗಿದ್ದರು. ಬ್ರೆಟ್ ಲೀ ಅವರು 221 ಪಂದ್ಯಗಳಲ್ಲಿ 380 ವಿಕೆಟ್ ಕಬಳಿಸಿ ಗ್ಲೆನ್ ಮೆಗ್ರಾಥ್ ಸಮ ನಿಂತಿದ್ದರು. ಇದಲ್ಲದೆ 76 ಟೆಸ್ಟ್ ಪಂದ್ಯಗಳಿಂದ 310 ವಿಕೆಟ್ ಪಡೆದಿದ್ದಾರೆ.

ಬ್ರೆಟ್ ಲೀ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಆಗಿದ್ದಾರೆ. ಅತಿವೇಗದ ಎಸೆತದ ವಿಷಯಕ್ಕೆ ಬಂದರೆ ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ಹಾಗೂ ಬ್ರೆಟ್ ಲೀಗೂ ಜಟಾಪಟಿ ಇದ್ದೇ ಇತ್ತು. ಗಂಟೆಗೆ 160 ಕಿಮೀ ವೇಗದಲ್ಲಿ
ಬ್ರೆಟ್ ಲೀ ಭಾರತ ವಿರುದ್ಧ 1999ರ ಡಿಸೆಂಬರ್ 26ರಂದು ಮೆಲ್ಬೋರ್ನ್ ನಡೆದ ಅವರ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. 2000ದ ಜನವರಿ 9ರಂದು ಪಾಕಿಸ್ತಾನ ವಿರುದ್ಧ ಬ್ರಿಸ್ಬೇನ್ ನಲ್ಲಿ ನಡೆದ ಪಂದ್ಯದ ಮೂಲಕ ಏಕದಿನ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು.
* ಟೆಸ್ಟ್: 76 ಪಂದ್ಯ 310 ವಿಕೆಟ್
* ಏಕದಿನ: 221 ಪಂದ್ಯ 380 ವಿಕೆಟ್
* ಟಿ20: 117 ಪಂದ್ಯ 105 ವಿಕೆಟ್
* ಪ್ರಥಮ ದರ್ಜೆ: 116 ಪಂದ್ಯ 487 ವಿಕೆಟ್ []
ಉತ್ತಮ ಗಾಯಕರಾಗಿರುವ ಲೀ, ಬಿಡುವಿನ ವೇಳೆಯಲ್ಲಿ ಗಿಟಾರ್ ಹಿಡಿದು ಹಾಡುತ್ತಿದ್ದರು. ಗಾಯಕಿ ಆಶಾ ಭೋಂಸ್ಲೆ ಅವರೊಂದಿಗೆ ಒಂದು ಮ್ಯೂಸಿಕ್ ಅಲ್ಬಂ ಕೂಡಾ ಹೊರತಂದಿದ್ದರು. ಹಿಂದಿ ಚಿತ್ರರಂಗದ ಹಾಡುಗಳಿಗೆ ಲೀ ಮನಸೋತಿದ್ದರು.ಬಾಲಿವುಡ್ ಚಲನಚಿತ್ರ 'ವಿಕ್ಟರಿ 'ಗಾಗಿ ದೃಶ್ಯಗಳಲ್ಲಿ ನಟಿಸಿದ್ದಾರೆ. ತಮ್ಮದೇ ಆದ ಉಡುಗೆ ಶೈಲಿಯನ್ನು ಹೊರ ತಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications