ಹೈದರಾಬಾದ್, ಸೆ.12: ಚುಟುಕು ಚಾಂಪಿಯನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಸೆ.13ರಿಂದ ಆರಂಭವಾಗಲಿದ್ದು ಅಕ್ಟೋಬರ್ 4ರವರೆಗೆ ಮಹಾ ಸಮರ ನಡೆಯಲಿದೆ. 6ನೇ ಸಿಎಲ್ಟಿ20 ಕದನದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ತಂಡಗಳೇ ಗೆಲ್ಲುವ ನೆಚ್ಚಿನ ತಂಡಗಳೆನಿಸಿವೆ. ಸೆ.13ರಿಂದ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಸೆ.17ರ ನಂತರ ಟ್ವೆಂಟಿ-20 ಪಂದ್ಯದ ನಿಜವಾದ ಕದನ ಆರಂಭವಾಗಲಿದೆ.
2014ರ ಐಪಿಎಲ್ ಟೂರ್ನಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಎರಡು ಬಾರಿ ಐಪಿಎಲ್ ವಿಜೇತ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಲೀಗ್ ಪ್ರಮುಖ ತಂಡಗಳಾಗಿವೆ. ಕಳೆದ ಐದು ವರ್ಷಗಳಲ್ಲಿ ನಡೆದಿರುವ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಮೂರು ಬಾರಿ ಗೆದ್ದಿರುವುದು ವಿಶೇಷ. 2010, 2011 ಹಾಗೂ 2013ರಲ್ಲಿ ಭಾರತೀಯ ತಂಡಗಳೇ ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಿವೆ.

ಗ್ರೂಪ್ ಎ ಗುಂಪಿನಲ್ಲಿ
* ಭಾರತದ ಕೋಲ್ಕತ್ತಾ ನೈಟ್ ರೈಡರ್ಸ್
* ದಕ್ಷಿಣ ಆಫ್ರಿಕಾದ ಡಾಲ್ಫಿನ್ಸ್
* ಆಸ್ಟ್ರೇಲಿಯಾದ ಪರ್ತ್ ಸ್ಕಾರ್ಚರ್ಸ್
* ಚೆನ್ನೈ ಸೂಪರ್ ಕಿಂಗ್ ತಂಡಗಳು
ಬಿ ಗುಂಪಿನಲ್ಲಿ
* ಭಾರತದ ಕಿಂಗ್ಸ್ ಇಲೆವೆನ್ ಪಂಜಾಬ್
* ಆಸ್ಟ್ರೇಲಿಯಾದ ಹೊಬಾರ್ಟ್ ಹರಿಕೇನ್ಸ್
* ದಕ್ಷಿಣ ಆಫ್ರಿಕಾದ ಕೇಪ್ ಕೋಬ್ರಾಸ್
* ವೆಸ್ಟ್ ಇಂಡೀಸ್‍ನ ಬರ್ಬಡಾಸ್ ಟ್ರೆಡೆಂಟ್ ತಂಡಗಳು
ಹಾಗೂ ಉಭಯ ಬಣಗಳಲ್ಲಿ ಒಂದು ಕ್ವಾಲಿಫೈಯರ್ ತಂಡಗಳು ಭಾಗಿಯಾಗಲಿವೆ.
ಕ್ವಾಲಿಫೈಯರ್ ತಂಡಗಳು
* ಮುಂಬೈ ಇಂಡಿಯನ್ಸ್,
* ಪಾಕಿಸ್ತಾನದ ಲಾಹೋರ್ ಲಯನ್ಸ್
* ನ್ಯೂಜಿಲೆಂಡ್ ನ ನಾರ್ಥನ್ ನೈಟ್ಸ್
* ಶ್ರೀಲಂಕಾದ ಸದರನ್ ಎಕ್ಸ್‍ಪ್ರೆಸ್
ಸ್ಟಾರ್ ಆಟಗಾರರ ಗೈರು: ಕೆಪಿಎಲ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿರುವ ಕನ್ನಡಿಗ ರಾಬಿನ್ ಉತ್ತಪ್ಪ ಕೆಪಿಎಲ್ ನಲ್ಲಿ ಹೆಚ್ಚಿನ ಸಾಧನೆ ತೋರಿಲ್ಲ. ಕೆಕೆಆರ್ ಪರ ಆಡುವುದು ಅನುಮಾನ. ಸ್ಟಾರ್ ಆಟಗಾರರಾದ ಮಾರ್ನೆ ಮಾರ್ಕಲ್, ಬಾಂಗ್ಲಾದ ಶಕೀಬ್ ಉಲ್ ಹಸನ್ ಕೂಡಾ ಗೈರು ಹಾಜರಾಗುವ ಸುದ್ದಿ ಬಂದಿದೆ.
ಮೊಹಾಲಿ, ಬೆಂಗಳೂರು, ಹೈದರಾಬಾದ್ ಹಾಗೂ ರಾಯ್‍ಪುರಗಳಲ್ಲಿ ಪಂದ್ಯಗಳು ನಡೆಯಲಿವೆ. ರಾಯ್‍ಪುರ ಕ್ರೀಡಾಂಗಣದಲ್ಲಿ ನಾಳೆಯಿಂದ 16ರವರೆಗೂ ಎಲ್ಲಾ ಕ್ವಾಲಿಫೈ ಪಂದ್ಯಗಳು ನಡೆಯಲಿವೆ. ಅ.2ರಿಂದ ಆರಂಭಗೊಳ್ಳಲಿರುವ ಸೆಮಿಫೈನಲ್ ಪಂದ್ಯಗಳು ಹೈದರಾಬಾದ್‍ನಲ್ಲಿ ನಡೆಯಲಿದ್ದು, ಅ.4ರಂದು ನಡೆಯಲಿರುವ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.
2009: ಎನ್‍ಎಸ್ ಡಬ್ಲ್ಯೂ ಬ್ಲೂಸ್(ಆಸ್ಟ್ರೇಲಿಯಾ)
2010:ಚೆನ್ನೈ ಸೂಪರ್ ಕಿಂಗ್ಸ್(ಭಾರತ)
2011:ಮುಂಬೈ ಇಂಡಿಯನ್ಸ್(ಭಾರತ)
2012: ಸಿಡ್ನಿ ಸಿಕ್ಸರ್ಸ್ (ಆಸ್ಟ್ರೇಲಿಯಾ)
2013: ಮುಂಬೈ ಇಂಡಿಯನ್ಸ್ (ಭಾರತ)