Year Ender 2024: ಈ ವರ್ಷ ಗೂಗಲ್‌ನಲ್ಲಿ ಹುಡುಕಲಾದ ಕ್ರೀಡೆಗಳ ವಿವರ ಇಲ್ಲಿದೆ
ಜನಸಾಮಾನ್ಯರಿಗೆ ಏನಾದರೂ ಯಾವುದೇ ವಿಚಾರಕ್ಕೆ ಗೊಂದಲಗಳು ಇದ್ದಲ್ಲಿ ಆತ ಅದಕ್ಕೆ ಸಂಬಂಧಿಸಿದ ವ್ಯಕ್ತಿಯ ಬಳಿ ಹೋಗುತ್ತಾನೆ. ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳುತ್ತಾನೆ. ಪ್ರಸಕ್ತ ಯುಗದಲ್ಲಿ ಇರುವ ಸಮಸ್ಯೆಗಳಿಗೆ ಜನರು ಗೂಗಲ್ ಮೊರೆ ಹೋಗುವುದನ್ನು ನಾವೇಲ್ಲಾ ಕಾಣುತ್ತೆವೆ. ಅಂತೆ ಗೂಗಲ್ ಸಹ ತನ್ನ ಪರೀಧಿಯಲ್ಲಿ ಇರುವ ಉತ್ತರವನ್ನು ಹುಡುಕಿ ನೀಡುತ್ತದೆ. ಭಾರತದಲ್ಲಿ ಕ್ರೀಡಾ ಕ್ಷೇತ್ರದಲ್ಲೂ ಹಲವು ಹುಡುಕಾಟಗಳು ನಡೆದಿವೆ. ಹಾಗಿದ್ದರೆ, ಈ ವರ್ಷ ಗೂಗಲ್‌ನಲ್ಲಿ ಹುಡುಕಿದ ಕ್ರೀಡೆಗಳು ಯಾವವು?, ಯಾವ ಕ್ರೀಡೆ ಶ್ರೇಯಾಂಕದಲ್ಲಿ ಯಾವ ಸ್ಥಾನದಲ್ಲಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತದ ಕ್ರೀಡಾಭಿಮಾನಿಗಳಿಗೆ ಈ ವರ್ಷ ತುಂಬ ಖುಷಿ ನೀಡಿದ ವರ್ಷಗಳಲ್ಲಿ ಒಂದು. ಏಕೆಂದರೆ ಹಲವು ಕ್ರೀಡೆಗಳಲ್ಲಿ ಕ್ರೀಡಾ ಪಟುಗಳು ಅಮೋಘ ಸಾಧನೆಯನ್ನು ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಇನ್ನು ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯರ ಸಾಧನೆ ದೇಶಕ್ಕೆ ಕೀರ್ತಿ ತಂದಿದೆ. ಇತ್ತೀಚಿಗೆ ಡಿ.ಗುಕೇಶ್ ಹಾಗೂ ಕೊನೇರು ಹಂಪಿ ಚೆಸ್ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಹೀಗಾಗಿ ಜನರು ಈ ಬಾರಿ ಹಲವು ಕ್ರೀಡಾ ಪಟುಗಳು ಹಾಗೂ ಕ್ರೀಡೆಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.

ಯಾವ ಕ್ರೀಡೆಯನ್ನು ಹೆಚ್ಚಾಗಿ ಹುಡುಕಲಾಗಿದೆ?
ಭಾರತ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿತ್ತು. ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಅತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಎಂಬ ಪಟ್ಟವನ್ನು ಅಲಂಕರಿಸಿತ್ತು. ಎಲ್ಲ ಅಭಿಮಾನಿಗಳಲ್ಲಿ ಗೂಗಲ್‌ನಲ್ಲಿ ಈ ಬಾರಿ ಭಾರತೀಯ ಕ್ರೀಡಾ ಅಭಿಮಾನಿಗಳು ಈ ಬಗ್ಗೆ ಹೆಚ್ಚಿನ ಹುಡುಕಾಟ ನಡೆಸಿದ್ದಾರೆ ಎಂದು ಅಂದಾಜಿಸಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಟಿ20 ವಿಶ್ವಕಪ್ ಹುಡುಕಾಟ ಎರಡನೇ ಸ್ಥಾನದಲ್ಲಿದೆ. ಗೂಗಲ್ ಸರ್ಚ್‌ನಲ್ಲಿ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಾಭಲ್ಯ ಗೋಚರಿಸುತ್ತದೆ. ಭಾರತದಲ್ಲಿ ಅತಿ ಹೆಚ್ಚು ಹುಡಕಲ್ಪಟ್ಟ ಕ್ರೀಡೆ ಎಂಬ ಹೆಗ್ಗಳಿಕೆ ಐಪಿಎಲ್‌ಗೆ ಸಲ್ಲುತ್ತದೆ. ಈ ಬಾರಿ ಐಪಿಎಲ್‌ನ ಚಾಂಪಿಯನ್ ಪಟ್ಟವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಮುಡಿಗೇರಿಸಿಕೊಂಡಿದೆ.
ಭಾರತದಲ್ಲಿ ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆಗಳತ್ತಲೂ ಜನ ಚಿತ್ತ ಹರಿಸುತ್ತಿದ್ದಾರೆ ಎಂಬುದಕ್ಕೆ ಈ ಬಾರಿ ಗೂಗಲ್‌ನಲ್ಲಿ ಹುಡುಕಿದ ಕ್ರೀಡೆಗಳೇ ಸಾಕ್ಷಿ. ಈ ಬಾರಿ ಟಾಪ್ 5ರಲ್ಲಿ ಕ್ರಿಕೆಟ್ ಜೊತೆ ಒಲಿಂಪಿಕ್ಸ್, ಕಬಡ್ಡಿ, ಫುಟ್‌ಬಾಲ್ ಕ್ರೀಡೆಗಳನ್ನು ಹೆಚ್ಚಾಗಿ ಹುಡುಕಲಾಗಿದೆ. ಇನ್ನು ಕೋಪಾ ಅಮೆರಿಕಾ ಹಾಗೂ ದೇಶೀಯ ಟೂರ್ನಿಗಳ ಬಗ್ಗೆಯೂ ಅಭಿಮಾನಿಗಳು ಹುಡುಕಾಟ ನಡೆಸಿದೆ.

ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರೀಡೆಗಳು
1. ಇಂಡಿಯನ್ ಪ್ರೀಮಿಯರ್ ಲೀಗ್
2. ಟಿ20 ವಿಶ್ವಕಪ್
3. ಒಲಿಂಪಿಕ್ಸ್
4. ಪ್ರೋ ಕಬಡ್ಡಿ ಲೀಗ್
5. ಇಂಡಿಯನ್ ಸೂಪರ್ ಲೀಗ್
6. ಮಹಿಳಾ ಪ್ರೀಮಿಯರ್ ಲೀಗ್
7. ಕೋಪಾ ಅಮೆರಿಕಾ
8. ಧುಲಿಪ್ ಟ್ರೋಫಿ
9. ಯುಇಎಫ್‌ಎ ಯೂರೋ
10. ಅಂಡರ್ 19 ವಿಶ್ವಕಪ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications