ಮೊದಲ ಟೆಸ್ಟ್ :ಭಾರತ ಬ್ಯಾಟಿಂಗ್, ಸ್ಟುವರ್ಟ್ ಬಿನ್ನಿ ಇನ್
ನಾಟಿಂಗ್ ಹ್ಯಾಮ್, ಜು.9: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಬುಧವಾರ ಆರಂಭಗೊಂಡಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿ ತಮ್ಮ ಮೊದಲ ಟೆಸ್ಟ್ ಪಂದ್ಯವಾಡುವ ಅವಕಾಶ ಪಡೆದುಕೊಂಡಿದ್ದಾರೆ.
ಸ್ಕೋರ್ ಕಾರ್ಡ್ ನೋಡಿ
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸ್ಟುವರ್ಟ್ ಬಿನ್ನಿ ಅವರು ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗಿ, ಅಂತಿಮ XI ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ, ಶಿಖರ್ ಧವನ್(12 ರನ್) ವಿಕೆಟ್ ಕಳೆದುಕೊಂಡು 100ರ ಗಡಿ ಆಸುಪಾಸಿನಲ್ಲಿದೆ. ಮುರಳಿ ವಿಜಯ್ ಸೊಗಸಾದ ಅರ್ಧ ಶತಕ(53) ಸಿಡಿಸಿದ್ದಾರೆ. ವಿವರ ಸ್ಕೋರ್ ಕಾರ್ಡ್ ಲಿಂಕ್ ನಲ್ಲಿ ನೋಡಿ

ಉಭಯ ತಂಡಗಳಿಗೂ ಈ ಟೆಸ್ಟ್ ಸರಣಿ ಮುಖ್ಯವಾಗಿದೆ. ಇಂಗ್ಲೆಂಡ್ ತಂಡ ಆಶಸ್ ಸರಣಿ ಸೋತ ಬಳಿಕ ತಂಡದ ಮರುನಿರ್ಮಾಣ ಹಂತದಲ್ಲಿದೆ. ಲಂಕನ್ನರ ವಿರುದ್ಧ ಭರ್ಜರಿ ಹೋರಾಟ ನಡೆಸಿದರೂ ಸರಣಿ ಸೋಲಿನ ಕಹಿಯನ್ನು ಕುಕ್ ಪಡೆ ಉಂಡಿತ್ತು.
ಭಾರತದಲ್ಲಿ ಇಲ್ಲಿ ಈ ಹಿಂದೆ 2011 ಹಾಗೂ 2012ರ ಸರಣಿಯಲ್ಲಿ ಸೋಲು ಕಂಡಿತ್ತು. ಟೆಸ್ಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಇಲ್ಲದೆ ಇಂಗ್ಲೆಂಡ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಲು ಯುವಪಡೆ ಸಜ್ಜಾಗಿದೆ.
ಟೀಮ್ ಇಂಡಿಯಾ: ಎಂಎಸ್ ಧೋನಿ, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಸ್ಟುವರ್ಟ್ ಬಿನ್ನಿ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್,
ಇಂಗ್ಲೆಂಡ್ : ಅಲಸ್ಟೈರ್ ಕುಕ್, ಸ್ಯಾಮ್ ರಾಬ್ಸನ್, ಗ್ಯಾರಿ ಬ್ಯಾಲೆನ್ಸ್ , ಇಯಾನ್ ಬೆಲ್, ಜೋ ರೂಟ್, ಮೊಯೀನ್ ಅಲಿ, ಮ್ಯಾಟ್ ಪ್ರಯರ್, ಬೆನ್ ಸ್ಟೋಕ್ಸ್, ಸ್ಟುವರ್ಟ್ ಬ್ರಾಡ್, ಲಿಯಾಮ್ ಪ್ಲಂಕೆಟ್, ಜೇಮ್ಸ್ ಆಂಡರ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications