Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದಲ್ಲಿ ಕ್ರಿಕೆಟ್, ಕ್ರೀಡಾಕೂಟಗಳು ಖಾಲಿ ಸ್ಟೇಡಿಯಂನಲ್ಲಿ ನಡೆಯಲಿವೆಯಾ?!

Cricket, Football in India not keen to start with empty stands

ನವದೆಹಲಿ, ಏಪ್ರಿಲ್ 22: ಲೀಗ್‌ಗಳಲ್ಲಿ ಟಾಪ್ ಲೀಗ್ ಎನಿಸಿಕೊಂಡಿರುವ ಜರ್ಮನಿಯ ಬುಂಡೆಸ್ಲಿಗಾ ಫುಟ್ಬಾಲ್ ಟೂರ್ನಿ ಮೇ ತಿಂಗಳಲ್ಲಿ ಖಾಲಿ ಸ್ಟೇಡಿಯಂನಲ್ಲಿ ಮತ್ತೆ ಪುನರಾರಂಭಗೊಳ್ಳುವುದರಲ್ಲಿದೆ. ವಿಶ್ವದ ಇನ್ನೊಂದಿಷ್ಟು ಕಡೆಗಳಲ್ಲಿ ಕ್ರೀಡಾ ಸ್ಪರ್ಧೆಗಳು ಖಾಲಿ ಸ್ಟೇಡಿಯಂನಲ್ಲೇ ಚಾಲನೆಗೊಳ್ಳುವುದರಲ್ಲಿದೆ. ಹಾಗಾದರೆ ಭಾರತದ ಕತೆಯೇನು?

ಕೊರೊನಾವೈರಸ್ ಸೋಂಕಿನ ಕಾರಣ ವಿಶ್ವದಾದ್ಯಂತ ಕ್ರೀಡಾಕೂಟಗಳು ರದ್ದು ಇಲ್ಲವೆ ಮುಂದೂಡಲ್ಪಟ್ಟಿವೆ. ವಿಶ್ವದಲ್ಲಿ ಮತ್ತೆ ಕ್ರೀಡಾಕೂಟಗಳು ಮತ್ತೆ ಚಾಲನೆಗೊಳ್ಳುವುದರಲ್ಲಿದೆಯಾದರೂ ಆರಂಭದಲ್ಲಿ ಖಾಲಿ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆದರೆ ಭಾರತದಲ್ಲಿ ಖಾಲಿ ಮೈದಾನದಲ್ಲಿ ಕ್ರೀಡಾಸ್ಪರ್ಧೆ ನಡೆಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲಿ ಕ್ರೀಡೆ ಮತ್ತು ಕ್ರೀಡಾಭಿಮಾನಿಗಳ ನಡುವಿನ ಸಂಬಂಧ ಅಂಥದ್ದು.

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಗಂಗೂಲಿ, 'ಜರ್ಮನಿ ಮತ್ತು ಭಾರತದಲ್ಲಿನ ವಾಸ್ತವತೆಗೆ ವ್ಯತ್ಯಾಸವಿದೆ. ಭಾರತದಲ್ಲಿ ಖಾಲಿ ಮೈದಾನದಲ್ಲಿ ನಡೆಸುವ ಕ್ರಿಕೆಟ್‌ಗೆ ಭವಿಷ್ಯವಿಲ್ಲ,' ಎಂದು ಪ್ರತಿಕ್ರಿಯಿಸಿದ್ದಾರೆ.

ಸೌರವ್ ಗಂಗೂಲಿ ಹೀಗಂದರೆ, ಭಾರತದ ಮಾಜಿ ಫುಟ್ಬಾಲ್ ಆಟಗಾರ ಭೈಚುಂಗ್ ಭುಟಿಯಾ ಕೊಂಚ ಭಿನ್ನ ಆಲೋಚನೆ ಹೇಳಿಕೊಂಡಿದ್ದಾರೆ. 'ಲೈವ್ ಟಿವಿಯಲ್ಲಿ ತುಂಬಾ ಕ್ರೀಡೆಗಳು ಲಭ್ಯವಿಲ್ಲ. ಇದು ಫುಟ್ಬಾಲ್‌ ಪಾಲಿಗೆ ಈ ದಿನಗಳಲ್ಲಿ ವರದಾನವಾಗಬಹುದು. ಭಾರತದ ಫುಟ್ಬಾಲ್‌ಗೆ ಹೆಚ್ಚಿನ ವೀಕ್ಷಕರು ಲಭಿಸಬಹುದು,' ಎಂದು ಭುಟಿಯಾ ಹೇಳಿದ್ದಾರೆ.

'ಅಂದರೆ ಇಂಥ ಪರಿಸ್ಥಿತಿಯಲ್ಲಿ ಕ್ರೀಡೆ ಆರಂಭಿಸಬೇಕು ಅಂತ ನಾನು ಹೇಳುತ್ತಿಲ್ಲ. ಆದರೆ ಖಾಲಿ ಮೈದಾನದಲ್ಲಿ ನಡೆಸಲು ಸರ್ಕಾರ ಒಂದುವೇಳೆ ಅನುಮತಿ ನೀಡಿದರೆ ನಾವು ಆ ಅವಕಾಶವನ್ನು ಕಳೆದುಕೊಳ್ಳಬಾರದು,' ಎಂದು ಭುಟಿಯಾ ವಿವರಿಸಿದರು.

Story first published: Wednesday, April 22, 2020, 9:28 [IST]
Other articles published on Apr 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+