Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೀಪಾವಳಿ ಹಬ್ಬಕ್ಕೆ ಶುಭ ಹಾರೈಸಿದ ಪ್ರಮುಖ ಕ್ರಿಕೆಟಿಗರು

Cricket Fraternity Wish Fans on Occasion of Diwali

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಆಚರಿಸುತ್ತಿರುವ ಅಭಿಮಾನಿಗಳಿಗೆ ಕ್ರಿಕೆಟ್‌ ರಂಗದ ಅನೇಕರು ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಕ್ರಿಕೆಟ್ ಸ್ಟಾರ್‌ಗಳು ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಮಾಜಿ ಬ್ಯಾಟ್ಸ್‌ಮನ್‌ ವಿವಿಎಸ್‌ ಲಕ್ಷ್ಮಣ್ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ.

ದೀಪಾವಳಿಗೆ ಶುಭಕೋರಿ ಮಾಡಲಾಗಿರುವ ಟ್ವೀಟ್‌ಗಳಲ್ಲಿ ಫ್ರಾಂಚೈಸಿಗಳ ಟ್ವೀಟ್ ಗಮನ ಸೆಳೆಯುತ್ತದೆ. ತಂಡದ ಒಂದಿಷ್ಟು ಆಟಗಾರರು ವಿಡಿಯೋದಲ್ಲಿ ಕಾಣಿಸಿಕೊಳ್ಳುವುದರಿಂದ ಉಳಿದೆಲ್ಲ ಟ್ವೀಟ್‌ಗಳಿಗಿಂತ ಹೆಚ್ಚು ಗಮನ ಸೆಳೆಯುತ್ತದೆ.

ನವೆಂಬರ್ 14ರಂದು ದೀಪಾವಳಿ ಶುಭಾಶಯದ ಜೊತೆಗೆ ಒಂದಿಷ್ಟು ಮಂದಿ ಕ್ರಿಕೆಟಿಗರು ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ. ರೋಹಿತ್ ಶರ್ಮಾ, ಸುರೇಶ್ ರೈನಾ ಈ ಸಾಲಿನಲ್ಲಿದ್ದಾರೆ. ರೋಹಿತ್, ಪೊಲಾರ್ಡ್, ಹಾರ್ದಿಕ್ ತಮ್ಮ ಮಗುವಿನ ಜೊತೆಗಿರುವ ಫೋಟೋ ಹಾಕಿರುವ ಮುಂಬೈ ಇಂಡಿಯನ್ಸ್ ಕೂಡ ಮಕ್ಕಳ ದಿನದ ಶುಭಾಶಯ ತಿಳಿಸಿದೆ.

Story first published: Saturday, November 14, 2020, 12:47 [IST]
Other articles published on Nov 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+