ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್‌ರ 'ಬ್ಯಾಗಿ ಗ್ರೀನ್' ಕ್ಯಾಪ್ ಹರಾಜಿಗೆ

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ, ದಿವಂಗತ ಡಾನ್ ಬ್ರಾಡ್ಮನ್ ಅವರು 1928ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡುವಾಗ ಧರಿಸಿದ್ದ 'ಬ್ಯಾಗಿ ಗ್ರೀನ್' ಕ್ಯಾಪ್ ಈ ವಾರ ಹರಾಜಾಗಲಿದೆ. ಪಿಕ್‌ಲ್ಸ್ ಆಕ್ಷನ್ ಇದನ್ನು ಹೇಳಿಕೊಂಡಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ಡಾನ್ ಬ್ರಾಡ್ಮನ್‌ಗೆ ಟೆಸ್ಟ್‌ನ ಡಾನ್ ಎಂದೇ ಹೆಸರಿತ್ತು. ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ 99.94 ಇತ್ತು. 72 ವರ್ಷಗಳ ಹಿಂದಿನ ಈ ದಾಖಲೆ ಈಗಲೂ ಮುರಿಯದೆ ಉಳಿಕೊಂಡಿದೆ.
ಕೆನ್ಸಿಂಗ್ಟನ್ ಗಾರ್ಡನ್ಸ್ ನ ಮೆರವಣಿಗೆಯಲ್ಲಿ ಬ್ರಾಡ್ಮನ್ ಕುಟುಂಬದ ಮನೆಗೆ ಬೆಂಬಲಿಸಿದ ತನ್ನ ಪಕ್ಕದ ಮನೆಯ ಪೀಟರ್ ಡನ್ಹ್ಯಾಮ್ ಅವರಿಗೆ ಸರ್ ಡೊನಾಲ್ಡ್ ಬ್ರಾಡ್ಮನ್ ಅವರು 1959ರಲ್ಲಿ ಬ್ಯಾಗಿ ಕ್ಯಾಪ್ ಉಡುಗೊರೆಯಾಗಿ ನೀಡಿದ್ದರು,' ಎಂದು ಪಿಕ್‌ಲ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
80 ಟೆಸ್ಟ್ ಇನ್ನಿಂಗ್ಸ್‌ಗಳನ್ನಾಡಿರುವ ಡಾನ್ ಬ್ರಾಡ್ಮನ್, 99.94ರ ಸರಾಸರಿಯಂತೆ 6996 ರನ್ ಗಳಿಸಿದ್ದಾರೆ. ಬ್ರಾಡ್ಮನ್ ವೈಯಕ್ತಿಕ ಅತ್ಯಧಿಕ ರನ್ 334. ಇನ್ನು 29 ಶತಕಗಳು, 12 ದ್ವಿಶತಕಗಳು, 13 ಅರ್ಧ ಶತಕಗಳ ದಾಖಲೆ ಬ್ರಾಡ್ಮನ್ ಹೆಸರಿನಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications