Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ಟೂರ್ನಿಗೆ 30 ಮಂದಿ ಟೀಂ ಇಂಡಿಯಾ ಪ್ರಕಟ

ಮುಂಬೈ, ಡಿ.4: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2015ರಲ್ಲಿ ಆಡಲು ಸಂಭಾವ್ಯ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡಿದೆ. 30 ಮಂದಿ ಸಂಭವನೀಯ ಆಟಗಾರರ ಪಟ್ಟಿಯಿಂದ ಹಿರಿಯ ಆಟಗಾರರಿಗೆ ಕೊಕ್ ನೀಡಲಾಗಿದೆ. 2011 ವಿಶ್ವಕಪ್ ತಾರೆಗಳನ್ನು ಕಡೆಗಣಿಸಲಾಗಿದೆ.

2011ರ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಿರಿಯ ಆಟಗಾರರಾದ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಅವರು ಬಿಸಿಸಿಐ ಆಯ್ಕೆ ಸಮಿತಿ ಅವಕೃಪೆಗೆ ಒಳಗಾಗಿದ್ದಾರೆ.

World Cup 2015

ಮುಂಬೈನಲ್ಲಿ ಸಭೆ ಸೇರಿದ್ದ ಸಂದೀಪ್ ಪಾಟೀಲ್ ನೇತೃತ್ವದ ಸಮಿತಿ 30 ಮಂದಿ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಹಾಗೂ ಸ್ಟುವರ್ಟ್ ಬಿನ್ನಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಣಜಿ ನಾಯಕ ವಿನಯ್ ಕುಮಾರ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಅಂತಿಮ ಆಯ್ಕೆ ಯಾವಾಗ?: ಫೆ.14ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಫೆ.15ರಂದು ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ಆಡಲಿದೆ. ಫೈನಲ್ ಪಂದ್ಯ ಮಾ.29ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿದೆ. ಜ.10, 2015ರೊಳಗೆ ಅಂತಿಮ ‍XI ಆಟಗಾರರ ತಂಡವನ್ನು ಬಿಸಿಸಿಐ ಘೋಷಿಸಲಿದೆ.

30 ಸಂಭಾವ್ಯ ಆಟಗಾರ ಪಟ್ಟಿ ಇಂತಿದೆ:
1. ಎಂಎಸ್ ಧೋನಿ.
2. ವಿರಾಟ್ ಕೊಹ್ಲಿ
3. ಶಿಖರ್ ಧವನ್
4. ರೋಹಿತ್ ಶರ್ಮ
5. ಅಜಿಂಕ್ಯ ರಹಾನೆ
6. ಸುರೇಶ್ ರೈನಾ.
7. ಅಂಬಟಿ ರಾಯುಡು.
8. ರವೀಂದ್ರ ಜಡೇಜ.
9. ಅಕ್ಷರ್ ಪಟೇಲ್
10. ಆರ್ ಅಶ್ವಿನ್.
11. ಭುವನೇಶ್ವರ್ ಕುಮಾರ್
12. ಮಹಮ್ಮದ್ ಶಮಿ
13. ಇಶಾಂತ್ ಶರ್ಮ
14. ಉಮೇಶ್ ಯಾದವ್
15. ವರುಣ್ ಅರೋನ್
16. ಅಮಿತ್ ಮಿಶ್ರಾ
17. ರಾಬಿನ್ ಉತ್ತಪ್ಪ
18. ಮನೋಜ್ ತಿವಾರಿ
19. ಅಶೋಕ್ ದಿಂಡಾ
20. ಕರಣ್ ಶರ್ಮ
21. ಮುರಳಿ ವಿಜಯ್
22. ವೃದ್ಧಿಮಾನ್ ಸಹಾ
23. ಕೇದರ್ ಜಾಧವ್
24. ಮೋಹಿತ್ ಶರ್ಮ
25. ಮನೀಶ್ ಪಾಂಡೆ
26. ಸಂಜು ಸಾಮ್ಸನ್
27. ಧವಳ್ ಕುಲಕರ್ಣಿ
28. ಪರ್ವೇಜ್ ರಸೂಲ್
29. ಕುಲದೀಪ್ ಯಾದವ್
30. ಸ್ಟುವರ್ಟ್ ಬಿನ್ನಿ

2011 WC Champions

2011 ವಿಶ್ವಕಪ್ ಗೆದ್ದ ತಂಡದಲ್ಲಿದ್ದು ಈ ಬಾರಿ ಆಯ್ಕೆಯಾಗದ ಆಟಗಾರರು:
ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಮುನಾಫ್ ಪಟೇಲ್, ಪಿಯೂಷ್ ಚಾವ್ಲಾ, ಯುಸೂಫ್ ಪಠಾಣ್, ಅಶೀಶ್ ನೆಹ್ರಾ, ಸಚಿನ್ ತೆಂಡೂಲ್ಕರ್(ನಿವೃತ್ತ), ಎಸ್ ಶ್ರೀಶಾಂತ್(ನಿಷೇಧಿತ)

2011 ವಿಶ್ವಕಪ್ ಗೆದ್ದ ತಂಡದ 15 ಆಟಗಾರರು:
ಎಂಎಸ್ ಧೋನಿ(ನಾಯಕ), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಗೌತಮ್ ಗಂಭೀರ್, ಯುಸೂಫ್ ಪಠಾಣ್, ಗೌತಮ್ ಗಂಭೀರ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಎಸ್ ಶ್ರೀಶಾಂತ್, ಅಶೀಶ್ ನೆಹ್ರಾ, ಆರ್ ಅಶ್ವಿನ್, ಮುನಾಫ್ ಪಟೇಲ್, ಪಿಯೂಷ್ ಚಾವ್ಲಾ

ಬಿಸಿಸಿಐ ಟ್ವೀಟ್ಸ್ ಮೊದಲ ಪಟ್ಟಿ

2ನೇ ಪಟ್ಟಿ

3ನೇ ಪಟ್ಟಿ

4ನೇ ಪಟ್ಟಿ

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+